ಏಳಿ ಎಚ್ಚರಗೊಳ್ಳಿ ಭಾರತದ ನವಯುವತಿಯರೆ

ಏಳಿ ಎಚ್ಚರಗೊಳ್ಳಿ, ಭಾರತದ ನವಯುವತಿಯರೆ,
ಜಡತೆಯ ತೊರೆದು ಹೊಣೆಯನು ಅರಿತು ಮುನ್ನಡೆಯೊಣ ಗೆಳತಿಯರೆ
ಜೈ ಭಾರತಿ, ಜೈ ಭಾರತಿ, ಜೈ ಭಾರತಿ, ಯುವ ಭಾರತಿ || ಪ ||

ಹೊಸ ಹರೆಯದ ಛಲ ಉತ್ಸಾಹ
ಕೃತಿ ರೂಪದಿ ಪರಿವರ್ತಿಸಲಿ
ಭಾರತ ಮಾತೆಯ ಕೀರ್ತಿಧ್ವಜ
ಬಾನೆತ್ತರದಿ ನರ್ತಿಸಲಿ || 1 ||

ಕೀಳರಿಮೆಯ ಕಿತ್ತೆಸೆಯೋಣ
ಹೃದಯ ಹೃದಯಗಳ ಬೆಸೆಯೋಣ
ನಾರೀಶಕ್ತಿಯ ಸಂಘಟಿಸಿ
ನಾಡಿನ ಸೇವೆಯ ಗೈಯೋಣ || 2 ||

ತಾಯ್ನೆಲದೇಕತೆ ಏಳಿಗೆಗೆ
ವೀರಪ್ರತಿಜ್ಞೆಯ ಸ್ವೀಕರಿಸಿ
ಪರಮ ವೈಭವದ ಸಾಧನೆಗೆ
ಜೀವನವನು ಮುಡುಪಾಗಿರಿಸಿ || 3 ||

Leave a Reply

Your email address will not be published. Required fields are marked *

*

code