ಸರಸ್ವತೀ…….. ಸಮಿತಿಯ ಸಾರಥಿ ಮಮತಾಮಯಿ ನೀವ್ ಮಧುರ ಸ್ಮೃತಿ || ಪ || ಲಕ್ಷ್ಮೀಯನಂದು ಸಂಧಿಸಿದಾ ದಿನ ಗಂಗಾಯಮುನೆಯರ ಅದ್ಭುತ ಮಿಲನ ರಾಷ್ಟ್ರಚಿಂತನೆಗರ್ಪಿತ ಜೀವನ ಸಾರ್ಥಕ ಭಾವದಿ ಸರ್ವ ಸಮರ್ಪಣ || 1 || ಶಿಸ್ತಿನ ಬದುಕಿಗೆ ನಿರ್ಮೋಹದ ಬೆಡಗು ಕ್ರಿಯಾಶೀಲೆಗೆ ಮೃದುವಾಣಿಯ ಸೊಬಗು ಆತ್ಮೀಯತೆಯ ಅನುಪಮ ಪುನುಗು ಕಷ್ಟನಷ್ಟದಿ ಧೈರ್ಯದ ಮೆರುಗು || 2 || ಏನಿದು ತಾಯೇ ನಿಮ್ಮಯ ಮೋಡಿಯು ಹೃನ್ಮನ ಸೆಳೆಯುವ ಸರಳ ಸ್ವಭಾವವು ಮಾತಿಗೆ ನಿಲುಕದ ಮಾತೃತ್ವದ ಸುಧೆಯು ಸುಮದಲಿ ಬೆರೆತ […]
ಸಾವಧಾನ ಸಾವಧಾನ ದಕ್ಷಳಾಗಿ ನೀನಿರೂ ದಕ್ಷಸೇವಿಕಾ ಇರು ಸದಾ ನೀ ದಕ್ಷಳಾಗಿರು || ಪ || ಅಮರವಲ್ಲತನುವಿದು ಸ್ಥೈರ್ಯವಿರುವ ಮನಕಿದೂ ಶೀಲಸತ್ವರಕ್ಷೆಗೆ ಸದಾ ನೀ ಸಿದ್ಧಳಾಗಿರೂ ಪೂರ್ತಿಗೂಳಿಸಿ ಸಾಧನೆ ಆತ್ಮತೇಜ ಬೆಳಗಿಸು || 1 || ಮಾರ್ಗಕಿರಿದು ದಾರಿ ಕಡಿದು ಧ್ಯೇಯ ಶಿಖರವೆತ್ತಲೂ ಸ್ವಾರ್ಥ ಮೋಹ ಭಯ ವಿಪತ್ತು ಇಹುದು ಹೆಜ್ಜೆ ಹೆಜ್ಜೆಗೂ ಸರ್ವಶಕ್ತಿಕೂಡಿಸುತ್ತ ಮೇರು ಶಿಖರವೆತ್ತಲೂ || 2 || ತ್ಯಾಗ ಧೈರ್ಯ ಪ್ರೇಮ ಸಹನೆ ಗುಣವ ಬೆಳೆಸಿಕೊಳ್ಳುವುದು ಮಾತೃಭೂಮಿ ಪದಗಳಲ್ಲಿ ಅಚಲಭಕ್ತಿ ಇರಿಸುತಾ ಉನ್ನತಿಯನು […]
ವಿನಮ್ರ ಭಾವದಿ ಮಾಡುವೆ ವಂದನೆ ಗೈಯುವೆ ಶ್ರೀ ಗುರು ಪೂಜೆಯನೀ ದಿನ || ಪ || ಉಜ್ವಲವೆಮ್ಮದು ಆರ್ಯ ಸಂಸ್ಕೃತಿ ಗುಂಜಿಸುತಿದೆ ಈ ಧ್ವಜದಾ ಕೀರುತಿ ಭಗವಾಧ್ವಜವಿದು ಎಮ್ಮಯ ಗುರು ಸುಂದರ ಭೂಷಣ ಭಾರತ ಜನತೆಗೆ || 1 || ಕ್ರಾಂತಿ ಕ್ರಾಂತಿ ಸಂಗಮ ಬೇಕೆನುತಿದೆ ವಿಜಯ ವಿಕ್ರಮ ಜಗಕೆ ಸಾರುತ ತ್ಯಾಗ ತಪಗಳ ವೈಭವ ತೋರುವ ಭಗವಾಧ್ವಜದಲಿ ವರ್ಣದ ಮಿಲನವು || 2 || ತ್ಯಾಗವನೆಸಗುತೆ ನಾಡನುಳಿಸುತೆ ವೈಭವ ಶಿಖರಕೆ ರಾಷ್ಟ್ರವನೊಯ್ಯುವ ನಭದಲಿ ನರ್ತಿಸುತಿರಲಾ ಭಗವಾ […]
ರಾಷ್ಟ್ರೋನ್ನತಿಯೊಂದೇ ಧ್ಯಾನ ಧ್ಯಾನಿಸಲಿ ಸದಾಮನ ರಾಷ್ಟ್ರಜೀವನದಲ್ಲೆ ಜೀವ ಜೀವನಾಂತವ ಕಾಣಲಿ || ಪ || ಭೋಗಮೋಹ ಸ್ವಾರ್ಥ ತೊರೆದು ನವೆಯಲಿ ತನು ಪರಾರ್ಥಕ್ಕಾಗಿ ಶ್ರೀಗಂಧದ ಮೇಲು ಸುಗಂಧ ದಶದಿಶೆಗಳ ತುಂಬಲಿ || 1 || ಮನದಲಿಹ ಕಾರ್ಯಭಾವ ಕ್ರಿಯಾಶೀಲವಾಗಲಿಲ್ಲಿ ಕೃತಿಯ ಕೀರ್ತಿ ಗುಡಿಯ ನಾಡ ಎಲ್ಲೆಡೆಯಲಿ ಹರಡಲಿ || 2 || ಅನ್ಯ ಯಜ್ಞಯಾಗವೇಕೆ ಜೀವನದಿ ಯಜ್ಞ ತ್ಯಾಗ ಬಂಧಿ ವಾನ ಆತ್ಮತೇಜ ಇಂದು ಮುಕ್ತವೆನಿಸಲಿ || 3 ||
ಮುನಿಸು ತೊರೆದು ಹರುಷ ತೋರು ನಮ್ಮ ತಾಯಿ ಭಾರತೀ ಹರಸು ನಮ್ಮ ಶಿರವ ಪಿಡಿದು ತರುವೆವಮ್ಮ ಕೀರುತಿ || ಪ || ಹೊಂಚು ಹಾಕಿ ಹಿರಿಯಲೆಂದು ಅಡಗಿ ಕುಳಿತ ಅರಿಗಳು ಬಿಡುವೆವೇನು ಕಡಿವೆವಲ್ಲೆ ನಾವು ಧೀರ ಮಕ್ಕಳು ಚೆನ್ನಮ್ಮ ಲಕ್ಷ್ಮೀ ನಾವೇ ಕ್ಷಾತ್ರ ತೇಜ ಕುಡಿಗಳು || 1 || ಪ್ರತಿ ಗೃಹದ ಒಳಗಿನಿಂದ ಕೇಳುತ್ತಿದೆ ಮೊಳಗು ಭೈರವಿಯ ಶಕ್ತಿಧರಿಸಿ, ತರುವೆವು ಬೆಳಗು ಬೇಡವೆಮಗೆ ಸ್ವತ್ವವಿರದ ವಿದೇಶೀಯರ ಬೆಡಗು ಸ್ವದೇಶ ಭಾಷೆ ವಸ್ತ್ರವೆಮಗೆ ಎಂದೆಂದೂ ಸೊಬಗು || […]
ದೂರ ತೀರದ ಶ್ವೇತ ಕುವರಿಗೆ ಏನು ಇಲ್ಲಿಯ ಚಿಂತನೆ ವೀರ ಸಂತ ವಿವೇಕ ಶೋಧನೆ ಎಂಥ ಅದ್ಭುತ ಕಲ್ಪನೆ || ಪ || ಹಿಂದು ಸಂಸ್ಕೃತಿಯವಳ ಉಸಿರು ಭರತ ಖಂಡಕೆ ಸೋದರಿ ದೀನ ದಲಿತರ ನೋಡುವಾ ಪರಿ ಎನಿತು ಕಾರ್ಯದ ವೈಖರಿ ಪುಟ್ಟ ಬಾಲೆಯರವಳಿಗಕ್ಕರೆ ಜ್ಞಾನ ಬೆಳಗಿದ ಭವ್ಯ ತಾರೆ ಸ್ತ್ರೀಗೆ ಶಿಕ್ಷಣ, ಸ್ವಾಭಿಮಾನವ ಸಾರಿ ಹೇಳಿದ ಶ್ವೇತ ಧಾರೆ || 1 || ಪ್ಲೇಗು ಮಾರಿ ಕಾಡಲಾಗ ಅಕ್ಕ ಆ ಕ್ಷಣ ಹಾಜರಿ ದುಃಖತಪ್ತರ ಕಣ್ಣ […]
ನಾಗಪುರದ ಮಹಲಲಾಯಿತು ನಾರೀರತ್ನದ ಜನನವು ರಾಷ್ಟ್ರ ಸೇವಿಕಾ ಸಮಿತಿ ಸ್ಥಾಪಕಿ ಈಕೆ ಸ್ತ್ರೀಯರ ಭಾಗ್ಯವು ಕಮಲ ಕೋಮಲೆ ವಾತ್ಸಲ್ಯಮಯಿಗೆ ಶಾಂತ ಸ್ನೇಹದ ಭಾವವು ರಾಷ್ಟ್ರ ಚಿಂತನೆ ಸ್ತ್ರೀಯ ರಕ್ಷಣೆಯಂಥ ಉನ್ನತ ಧ್ಯೇಯವು || ಪ || ಬಾಲ್ಯದಲ್ಲಿಯೆ ಯೋಗ್ಯ ಶಿಕ್ಷಣ ರಾಷ್ಟ್ರಭಕ್ತಿಯ ಸೇಚನ ಕೇಳ್ಕರೊಡನೆ ವಿವಾಹ ಬಂಧನ ಲಕ್ಷ್ಮಿಯಾಗಿ ವಾರ್ಧಾ ಜೀವನ ಗೃಹಿಣಿಯಾಗಿ ಗೃಹಬಂಧನ ಲಕ್ಷ್ಮೀ ಎದೆಯಲಿ ತಲ್ಲಣ ಮುದ್ದು ಮಕ್ಕಳ ಮಾತೆಯಾ ಮನ ನಿರತ ವಿಚಾರ ಮಂಥನ || 1 || ಸಾರ್ವಜನಿಕ ಜೀವನಕೆ ಲಕ್ಷ್ಮೀಬಾಯಿಯ […]
ನಮ್ಮ ತಾಯಿ ಭಾರತಿ ನಮ್ಮ ಹಿಂದು ಸಂಸ್ಕೃತಿ ನಮ್ಮ ದೇಶ ಭಾರತ ನಮಗೆ ಸದಾ ಪೂಜಿತ ನಾವು ಭಾರತೀಯರೂ ನಾವು ಬಂಧು ಬಾಂಧವರು || ಪ || ಭಾಷೆ ಬೇರೆ ವೇಷ ಬೇರೆ ದೇಶ ಮಾತ್ರ ಒಂದೇ ಜಾತಿ ಬೇರೆ ರೀತಿ ಬೇರೆ ನೀತಿ ಮಾತ್ರ ಒಂದೇ ಭಿನ್ನಮತೀಯರಾದರೂ ನಾವು ಭಾರತೀಯರು || 1 || ಗಂಗೆ ತುಂಗೆ ಯಮನೆಯರು ಹರಿವ ಪುಣ್ಯನಾಡಿದು ಹಿರಿಮೆ ಗರಿಮೆ ಪ್ರಕೃತಿ ಸಿರಿಯು ಇರುವ ಗಣ್ಯ ಬೀಡಿದು ನಮ್ಮ ತಾಯಿ ನಾಡಿದು […]
ಜಯ ಜಯ ಭಾರತ ಜನನಿ ನಮೋ ಭಾರತ ಜನನಿ ನಮೋ ನಮೋ || ಪ || ಆರ್ಯ ಭೂಮಿ ಋಷಿಯತಿಗಳ ನಾಡು ದೇವ ವಾಣಿ ಧರೆಗಳಿದಿಹ ಬೀಡು ಸರಸಜಲದ ಮನಮೋಹಕ ಕಾಡು ಧವಲ ಹಿಮಾಲಯ ಪುಣ್ಯ ಮಯೀ || 1 || ಸಕಲ ಧರ್ಮಗಳಿಗಾಶ್ರಯದಾತೆ ಆದ್ಯ ಸನಾತನ ಸಂಸ್ಕೃತಿ ಜಾತೆ ವೇದ ಘೋಷ ಓಂಕಾರ ಪುನೀತೆ ತವನಿಧಿ ಭಾರತ ಹೇ ಜನನೀ || 2 || ಕೋಟಿ ಕೋಟಿ ಭಾರತ ಜನಸ್ಫೂರ್ತಿ ಜನಮನ ಬೆಳಗುವ ಮಂಗಳಮೂರ್ತಿ ಸರ್ವತ್ಯಾಗವಿದು […]
ನಮನ ನಮನ ನಮನ ನಮನ ನಮನ ನಮನ ಶಕ್ತಿಗಿದೋ ನಮನ ಭಾರತ ಮಾತೆಗಿದೋ ನಮನ ನೆತ್ತಿಯಲ್ಲಿ ಗಿರಿಛತ್ರಿಯನೆತ್ತಿದ ಶಕ್ತಿಗಿದೋ ನಮನ ಭಾರತ ಮಾತೆಗಿದೋ ನಮನ ಸುತ್ತಲು ಸಾಗರ ವಸ್ತ್ರವ ಧರಿಸಿದ ಮಾತೆಗಿದೋ ನಮನ ನಮನ ಮಾತೆಗಿದೋ ನಮನ || ಪ || ಕೋಟಿ ಕೋಟಿ ಕಣ್ ಕೋಟಿ ಕೋಟಿ ಕೈ ತಾಳಿ ನಿಂತರೇನು? ಸಾಟಿಯಿಲ್ಲದ ಏಕರೂಪದ ತಾಯಿಗಿದೋ ನಮನ ಮರಗಿಡ ಆಡಿ ತೂಗುವ ಗಾಳಿಯ ಪರಿಮಳ ನಿನ್ನುಸಿರು ನೀ ಧರಿಸಿರುವ ಪೀತಾಂಬರಗಳು ಶಾಲಿ ವನದ ಹಸಿರು ಹಗಲಲಿ […]