ಸಾವಿರದಳ ಕಮಲಿನಿ

ಸಾವಿರದಳ ಕಮಲಿನಿ ಓ ಭಾರತಿ
ತಾಯೆ ನಿನಗೆ ಇದೋ ಜೀವದಾರತಿ || ಪ ||

ನೂರು ನುಡಿಗಳಿಂದ ಕಂದರನ್ನು ಕರೆವ ವಾಗ್ವಿದೆ
ಹಲವು ರೀತಿ ಹಾಡಿ ಹಾಲನೂಡಿ ಪೊರೆವ ಶಾರದೆ
ಕೈಯ ಹಿಡಿದು ಅಡಿಯನಿರಿಸಿ ಮುನ್ನಡೆಸುವಧಾರಿಣಿ
ತೊದಲ ನುಡಿಸಿ ಕೇಳಿ ಹರ್ಷ ತಾಳಿ ನಲಿವ ತಾರಿಣಿ… || 1 ||

ತಪ್ಪಿದಾಗ ಮಕ್ಕಳು ರಣ ಚಂಡಿಯಾಗಿ ಖಂಡಿಸಿ
ಮತ್ತೆ ಕರೆದು ಲಲ್ಲೆಗರೆದು ಕಣ್ಣನೊರೆಸಿ ಮುದ್ದಿಸಿ
ನಮ್ಮ ಸೋದರತ್ವವನ್ನು ನಮಗೆ ಮನನಗೊಳಿಸುತ
ಮನೆಯ ನಿಲ್ಲಿಸಮ್ಮ ತಾಯೆ ನಮ್ಮನ್ನೆಲ್ಲ ಒಲಿಸುತಾ || 2 ||

ಹಲವು ತಾರೆಯಿಂದ ಒಂದು ಬೆಳಕಸೂರೆ ಮಾಡಿದವಳೆ
ಹರವುಧಾರೆಯಿಂದ ಒಂದು ವರ್ಷಗೀತೆ ಹಾಡಿದವಳೆ
ತೆಕ್ಕೆ ಬಿಗಿದು ತಾಯೆ….. ಇಂದು ನಮ್ಮನೊಂದುಗೂಡಿಸಿ
ಹಲವಿದ್ದರೂ ಒಲವೊಂದೆ ಎಂಬ ತತ್ವ ಮೂಡಿಸೆ || 3 ||

Leave a Reply

Your email address will not be published. Required fields are marked *

*

code