ಸಾವಧಾನ ಸಾವಧಾನ

ಸಾವಧಾನ ಸಾವಧಾನ ದಕ್ಷಳಾಗಿ ನೀನಿರೂ
ದಕ್ಷಸೇವಿಕಾ ಇರು ಸದಾ ನೀ ದಕ್ಷಳಾಗಿರು || ಪ ||

ಅಮರವಲ್ಲತನುವಿದು ಸ್ಥೈರ್ಯವಿರುವ ಮನಕಿದೂ
ಶೀಲಸತ್ವರಕ್ಷೆಗೆ ಸದಾ ನೀ ಸಿದ್ಧಳಾಗಿರೂ
ಪೂರ್ತಿಗೂಳಿಸಿ ಸಾಧನೆ ಆತ್ಮತೇಜ ಬೆಳಗಿಸು || 1 ||

ಮಾರ್ಗಕಿರಿದು ದಾರಿ ಕಡಿದು ಧ್ಯೇಯ ಶಿಖರವೆತ್ತಲೂ
ಸ್ವಾರ್ಥ ಮೋಹ ಭಯ ವಿಪತ್ತು ಇಹುದು ಹೆಜ್ಜೆ ಹೆಜ್ಜೆಗೂ
ಸರ್ವಶಕ್ತಿಕೂಡಿಸುತ್ತ ಮೇರು ಶಿಖರವೆತ್ತಲೂ || 2 ||

ತ್ಯಾಗ ಧೈರ್ಯ ಪ್ರೇಮ ಸಹನೆ ಗುಣವ ಬೆಳೆಸಿಕೊಳ್ಳುವುದು
ಮಾತೃಭೂಮಿ ಪದಗಳಲ್ಲಿ ಅಚಲಭಕ್ತಿ ಇರಿಸುತಾ
ಉನ್ನತಿಯನು ಸಾಧಿಸಲ್ಕೆ ಸಮಿತಿ ಜನ್ಮ ತಾಳಿದೆ || 3 ||

ದೇಶ ಧರ್ಮ ಬಿಂಬಿಸಿಹುದು ಅರುಣ ಧ್ಜಜದ ರೂಪ
ಹೃದಯ ಭಾವ ಅರಳುತಿಹುದು ಮಾನ ಚಿಹ್ನೆ ನೋಡುತಾ
ಮಾರ್ಗ ತೋರುತಿಹುದು ಗುಡಿಯು ರಾಷ್ಟ್ರವೃತ್ತಿ ಪೋಷಕಾ || 4 ||

Leave a Reply

Your email address will not be published. Required fields are marked *

*

code