ವಿನಮ್ರ ಭಾವದಿ ಮಾಡುವೆ ವಂದನೆ

ವಿನಮ್ರ ಭಾವದಿ ಮಾಡುವೆ ವಂದನೆ
ಗೈಯುವೆ ಶ್ರೀ ಗುರು ಪೂಜೆಯನೀ ದಿನ || ಪ ||

ಉಜ್ವಲವೆಮ್ಮದು ಆರ್ಯ ಸಂಸ್ಕೃತಿ
ಗುಂಜಿಸುತಿದೆ ಈ ಧ್ವಜದಾ ಕೀರುತಿ
ಭಗವಾಧ್ವಜವಿದು ಎಮ್ಮಯ ಗುರು
ಸುಂದರ ಭೂಷಣ ಭಾರತ ಜನತೆಗೆ || 1 ||

ಕ್ರಾಂತಿ ಕ್ರಾಂತಿ ಸಂಗಮ ಬೇಕೆನುತಿದೆ
ವಿಜಯ ವಿಕ್ರಮ ಜಗಕೆ ಸಾರುತ
ತ್ಯಾಗ ತಪಗಳ ವೈಭವ ತೋರುವ
ಭಗವಾಧ್ವಜದಲಿ ವರ್ಣದ ಮಿಲನವು || 2 ||

ತ್ಯಾಗವನೆಸಗುತೆ ನಾಡನುಳಿಸುತೆ
ವೈಭವ ಶಿಖರಕೆ ರಾಷ್ಟ್ರವನೊಯ್ಯುವ
ನಭದಲಿ ನರ್ತಿಸುತಿರಲಾ ಭಗವಾ
ಧ್ವಜವಿದು ಜಗಕೆ ಬೋಧೆಯ ನೀಡುತ || 3 ||

ವ್ಯಕ್ತಿ ಕುಸುಮವ ಒಟ್ಟಿಗೆ ಕಟ್ಟುತ
ಸಮಷ್ಟಿರೂಪಿ ಮಾಲೆಯ ನೀಡುತ
ಭಾವ ಭಕ್ತಿಗಳ ಶಾಂತ ನೀಲಾಂಜನ
ಹೃದಯದಿ ಬೆಳಗುತಲಿರಲಿ ಚಿರಂತನ || 4 ||

ಭಾರತ ಮಾತೆಗೆ ಸಾಧಿಸೆ ಹಿತವ
ದೇಹವ ಶ್ರೀಗಂಧದವೊಲು ತೇಯುತ
ತನು ಮನ ಧನ ಸರ್ವಸ್ವ ಸಮರ್ಪಣ
ಅಹುದಹುದಿದೆ ಗುರುವಿಗೆ ನಿಜ ದಕ್ಷಿಣೆ || 5 ||

Leave a Reply

Your email address will not be published. Required fields are marked *