ಸರಸ್ವತೀ……. ಸಮಿತಿಯ ಸಾರಥಿ

ಸರಸ್ವತೀ…….. ಸಮಿತಿಯ ಸಾರಥಿ
ಮಮತಾಮಯಿ ನೀವ್ ಮಧುರ ಸ್ಮೃತಿ || ಪ ||

ಲಕ್ಷ್ಮೀಯನಂದು ಸಂಧಿಸಿದಾ ದಿನ
ಗಂಗಾಯಮುನೆಯರ ಅದ್ಭುತ ಮಿಲನ
ರಾಷ್ಟ್ರಚಿಂತನೆಗರ್ಪಿತ ಜೀವನ
ಸಾರ್ಥಕ ಭಾವದಿ ಸರ್ವ ಸಮರ್ಪಣ || 1 ||

ಶಿಸ್ತಿನ ಬದುಕಿಗೆ ನಿರ್ಮೋಹದ ಬೆಡಗು
ಕ್ರಿಯಾಶೀಲೆಗೆ ಮೃದುವಾಣಿಯ ಸೊಬಗು
ಆತ್ಮೀಯತೆಯ ಅನುಪಮ ಪುನುಗು
ಕಷ್ಟನಷ್ಟದಿ ಧೈರ್ಯದ ಮೆರುಗು || 2 ||

ಏನಿದು ತಾಯೇ ನಿಮ್ಮಯ ಮೋಡಿಯು
ಹೃನ್ಮನ ಸೆಳೆಯುವ ಸರಳ ಸ್ವಭಾವವು
ಮಾತಿಗೆ ನಿಲುಕದ ಮಾತೃತ್ವದ ಸುಧೆಯು
ಸುಮದಲಿ ಬೆರೆತ ಸೌಗಂಧದ ಪರಿಯು || 3 ||

ಭಾರತ ವಿಭಜನೆ ಸ್ತ್ರೀಯರ ಬವಣೆ
ಸ್ತ್ರೀಯರಿಗಂದು ನೀವೇ ರಕ್ಷಣೆ
ತುರ್ತು ಪರಿಸ್ಥಿತಿ ಹಲವರ ಬಂಧನ
ಮನೆಮನೆಯಲ್ಲೂ ನಿಮ್ಮದೇ ಸಾಂತ್ವನ || 4 ||

ಭಾರತದೆಲ್ಲೆಡೆ ಹರಡಿದ ಕಾರ್ಯವು
ದೃಢ ನಿಶ್ಚಯವೇ ವಿಜಯದ ಸೂತ್ರವು
ಆರದು ನೀವು ಹಚ್ಚಿದ ಸೊಡರು
ಮಾಸದು ನೆನಪು ನಿತ್ಯವೂ ಹಸಿರು || 5 ||

Leave a Reply

Your email address will not be published. Required fields are marked *

*

code