ರಾಷ್ಟ್ರೋನ್ನತಿಯೊಂದೇ ಧ್ಯಾನ

ರಾಷ್ಟ್ರೋನ್ನತಿಯೊಂದೇ ಧ್ಯಾನ
ಧ್ಯಾನಿಸಲಿ ಸದಾಮನ
ರಾಷ್ಟ್ರಜೀವನದಲ್ಲೆ ಜೀವ
ಜೀವನಾಂತವ ಕಾಣಲಿ || ಪ ||

ಭೋಗಮೋಹ ಸ್ವಾರ್ಥ ತೊರೆದು
ನವೆಯಲಿ ತನು ಪರಾರ್ಥಕ್ಕಾಗಿ
ಶ್ರೀಗಂಧದ ಮೇಲು ಸುಗಂಧ
ದಶದಿಶೆಗಳ ತುಂಬಲಿ || 1 ||

ಮನದಲಿಹ ಕಾರ್ಯಭಾವ
ಕ್ರಿಯಾಶೀಲವಾಗಲಿಲ್ಲಿ
ಕೃತಿಯ ಕೀರ್ತಿ ಗುಡಿಯ ನಾಡ
ಎಲ್ಲೆಡೆಯಲಿ ಹರಡಲಿ || 2 ||

ಅನ್ಯ ಯಜ್ಞಯಾಗವೇಕೆ
ಜೀವನದಿ ಯಜ್ಞ ತ್ಯಾಗ
ಬಂಧಿ ವಾನ ಆತ್ಮತೇಜ
ಇಂದು ಮುಕ್ತವೆನಿಸಲಿ || 3 ||

Leave a Reply

Your email address will not be published. Required fields are marked *