ಪರಮ ವೈಭವ ಸಾಧನೆ ನಿನಗದೇ ಅಭಿನಂದನೆ || ಪ || ಸ್ವಾರ್ಥತೆಯು ಲವಲೇಶವಿಲ್ಲದ ವಿಮಲಧ್ಯೇಯದ ಮೂರ್ತಿ ನೀನು ಭರತಭೂಮಿಯ ಭಾಗ್ಯಭಾಸ್ಕರ ಯುವಜನಾಂಗದ ಸ್ಫೂರ್ತಿ ನೀನು || 1 || ಕಾಯವದು ಕಾಷಾಯರಹಿತ ಜೀವನವು ಘನತ್ಯಾಗಭರಿತ ಶಿಷ್ಟ ಉಡುಗೆಯ ಸಂತ ನೀನು, ಕರ್ಮಯೋಗಿ ಮಹಂತ ನೀನು || 2 || ದಿವ್ಯಧ್ಯೇಯದ ಪಥದಿ ಕ್ರಮಿಸಿದೆ ಅರೆಕ್ಷಣವು ವಿಶ್ರಮಿಸದೆ ಪತನಗೊಂಡಿಹ ನಾಡನೆತ್ತಲು ಬಾಳಿನುದ್ದಕು ಶ್ರಮಿಸಿದೆ || 3 || ಮನಮನದ ಕಿರುದೆರೆಯ ಮೇಲೆ ಮೂಡಿರಲು ತವ ಭಾವಚಿತ್ರ ಅನ್ಯಸ್ಮಾರಕವೇಕೆ ನಿನಗೆ […]
ಅಂತ್ಯವಿಲ್ಲದ ಸಂತ ನಿನ್ನಯ ಚಿಂತನೆಯದು ಚಿರಂತನ ಅಖಿಲವಿಶ್ವದ ಸಕಲ ಮನುಕುಲ ನೀಡಿತದಕೆ ಸ್ಪಂದನ ನಿನ್ನಡಿಗೆ ಶತವಂದನ || ಪ || ವೇಷಭೂಷಣ ಸಡಿಲ ಸರಳ ಧ್ಯೇಯನಿಷ್ಠೆಯು ಮಾತ್ರ ಅಚಲ ತನ್ನ ಮೋಕ್ಷದ ವಾಂಛೆ ತ್ಯಜಿಸಿ ಗೈದ ಕಾರ್ಯ ಅಗಾಧ ಅತುಲ || 1 || ಭರತಭೂಮಿಯ ಅಗಲ ಉದ್ದಕು ಚಲಿಸಿದ ಪರಿವ್ರಾಜಕ ಸಾಧಕರ ಸಂತತಿಯ ಬೆಳೆಸಿದ ಸಂತ ಜನರಧಿನಾಯಕ || 2 || ಯತಿಯೆ ನಿನ್ನಯ ಸ್ಮೃತಿಯು ನಮಗೆ ರಾಷ್ಟ್ರಕಾರ್ಯಕೆ ಪ್ರೇರಣೆ ನೀನು ತೋರಿದ ಪಥದಿ ಚಲಿಸಿ […]
ಜಯಜಯ ಅಭಿನವ ಋಷಿವರ ಮಾಧವ ನಿನ್ನಯ ಚರಣಕೆ ನಮೋ ನಮೋ || ಪ || ಜನ್ಮಜಾತ ಅನುಪಮ ಪ್ರತಿಭಾನ್ವಿತ ಧೀಮಂತಿಕೆಯ ಪ್ರತಿರೂಪ ಪೂರ್ಣ ಜೀವನವ ಮುಡಿಪಾಗಿರಿಸಿದೆ ಅಳಿಸಲು ಮಾತೆಯ ಸಂತಾಪ || 1 || ಭುಜಗಳ ಗಡಿಯನು ದಾಟಿದ ಸೊಂಪಿನ ಕೇಶರಾಶಿಯ ಲಾಸ್ಯದಲಿ ದೇಶವಿದಕೆ ಹೊಸ ದಿಶೆಯನು ತೋರಿದೆ ಹಿಂದುತ್ವದ ನವಭಾಷ್ಯದಲಿ || 2 || ಸರಳ ಜೀವನ ಉದಾತ್ತ ಚಿಂತನ ನಿನ್ನಯ ಬಾಳ ವಿಶೇಷತೆಯು ನವಭಾರತ ನಿರ್ಮಾಣದ ಕಾರ್ಯದಿ ಸಾಧಕ ಜನಕದು ಪ್ರೇರಣೆಯು || 3 […]
ಕ್ರೋಧನದ ದಶಮಿಯಿದು ಎಂದಿನಂತಲ್ಲ ಸಂಭ್ರಮದ ಪರ್ವವಿದು ಪಾಲ್ಗೊಳ್ಳಿರೆಲ್ಲ ದಿಗ್ವಿಜಯಗೈಯಲಿದು ನೀಡುತಿದೆ ಸ್ಫೂರ್ತಿ ಮುನ್ನುಗ್ಗಿ ಸಾಧಿಸಲು ಘನಧ್ಯೇಯ ಪೂರ್ತಿ || ಪ || ಶೂನ್ಯದೊಳು ಸೃಷ್ಟಿಯನು ಗೈದ ಮಾಂತ್ರಿಕನಾರು ? ಮಸಣದೊಳು ನಂದನವ ನಿರ್ಮಿಸಿದ ಕಲಿ ಯಾರು ? ಜನಮನದಿ ನಾಡೊಲವ ಬಿತ್ತಿದನು ಕೇಶವನು ಅವನತಿಯ ಸುಳಿಯಿಂದ ಎತ್ತಿದನು ದೇಶವನು || 1 || ಗಾಢಾಂಧಕಾರದಲಿ ಮುಳುಗಿರಲು ಯುವಜನತೆ ಭರವಸೆಯ ಬೆಳಕನ್ನು ಬೀರಿಹುದು ಈ ಹಣತೆ ಧ್ಯೇಯದುಜ್ವಲ ಪ್ರಭೆಯ ಮನಮನದಿ ಪಸರಿಸುತ ದಿವ್ಯಸಂಘದ ಜ್ಯೋತಿ ಉರಿಯುತಿದೆ ಅನವರತ || […]
ಭಾರತದೇಕತೆ ಏಳಿಗೆಗಾಗಿ ದೃಢಸಂಕಲ್ಪವ ತೊಟ್ಟಿಹೆವು ಭೇದವ ಮರೆತು ಐಕ್ಯದಿ ಬೆರೆತು ಹೊಸನಾಡೊಂದನು ಕಟ್ಟುವೆವು || ಪ || ತೆಂಕಣ ಜಲಧಿಯ ಅಲೆಗಳ ಮೊರೆತ ಉಕ್ಕಿಸಿದೆ ನವ ಉತ್ಸಾಹ ಉತ್ತರದಳಲಿಗೆ ಉತ್ತರ ನೀಡಲು ಕಿತ್ತೊಗೆಯಿರಿ ಭಯ ಸಂದೇಹ || 1 || ಗಿರಿನದಿಗಳು ವನಸಿರಿಯಾಭರಣ ಪ್ರಕೃತಿಯು ನೀಡಿದ ವರದಾನ ನಾಡಿನ ಗೌರವ ರಕ್ಷಣೆಗಾಗಿ ಅರ್ಪಿಸಿ ತನುಮನಧನ ಪ್ರಾಣ || 2 || ಕಳಚಿರಿ ಉಗ್ರರ ಗೋಮುಖವ್ಯಾಘ್ರರ ಭೀಕರ ದ್ರೋಹದ ಮುಖವಾಡ ಮೊಳಗಲಿ ಹಿಂದುತ್ವದ ಜಯಘೋಷ ಚದುರಲಿ ಭೀತಿಯ ಕಾರ್ಮೋಡ […]
ನವಭಾರತವನು ಕಟ್ಟಲು ಬನ್ನಿ ನವದಿಗಂತವನು ಮುಟ್ಟಲು ಬನ್ನಿ ಅರಿಗಳ ಪಡೆಯನು ಮೆಟ್ಟಲು ಬನ್ನಿ ದ್ರೋಹಿಗಳನು ಹೊರಗಟ್ಟಲು ಬನ್ನಿ || ಪ || ತಾಯ್ನೆಲದಿತಿಹಾಸದ ಗರ್ಭದಲಿ ಹುದುಗಿದೆ ಸ್ಫೂರ್ತಿಯ ಹೊಂಬೆಳಕು ಜಗವನೆ ಜಯಿಸಿದ ಸಾಹಸವೀರರ ಶೌರ್ಯಪರಾಕ್ರಮಯುತ ಬದುಕು || 1 || ನಾಡಿನ ಐಕ್ಯ ಸಮಗ್ರತೆಯು ಭೇದದಿ ಛೇದಿತಗೊಳದಿರಲಿ ಹಿಂದುತ್ವದ ಬಂಧುತ್ವದ ಮಂತ್ರವು ಎಲ್ಲೆಡೆ ಮಾರ್ದನಿಗೊಳುತಿರಲಿ || 2 || ಹೊಂಚನು ಹಾಕಿಹ ವಂಚಕರಿಪುಗಳ ಸಂಚುಗಳೆಲ್ಲವನೆದುರಿಸಲು ಮಿಂಚಿನ ವೇಗದಿ ಮುನ್ನಡೆಯೋಣ ನಾಡಿನ ಗಡಿಗಳ ರಕ್ಷಿಸಲು || 3 ||
ಹೊಸ ನಾಡನು ಕಟ್ಟುವಾ ಹೊಸ ಜಾಡನು ಮೆಟ್ಟುವಾ ಹೊಸ ದಿಗಂತಗಳನು ದಾಟಿ ಭರದಿ ಗುರಿಯ ಮುಟ್ಟುವಾ || ಪ || ಹೊಸ ಹರೆಯದ ಕ್ಷಣಕ್ಷಣ ಬಿಸಿ ನೆತ್ತರ ಕಣ ಕಣ ಮುಡಿಪಾಗಲಿ ಗೈಯಲು ನಾಡಿನ ಹಿತರಕ್ಷಣ || 1 || ಸುತ್ತಲಿರುವ ಬಡತನ ಜಡತೆ ಮೌಢ್ಯ ಹಗೆತನ ಕಿತ್ತೊಗೆಯಲು ಟೊಂಕ ಕಟ್ಟಿ ಸುಮುಹೂರ್ತವು ಈ ದಿನ || 2 || ಹಿಂದು ಹಿತವೆ ನಾಡ ಹಿತ ಮರೆತರೆ ಅನಾಹುತ ಪೊಳ್ಳು ಜಾತ್ಯತೀತತೆ ಕಿತ್ತೊಗೆಯಲಿ ಭಾರತ || 3 […]
ದಶದಿಶೆಗಳಲೂ ಮಾರ್ದನಿಗೊಳ್ಳಲಿ ನಾಡಿನ ಜಯಜಯಘೋಷ ಯುಗಯುಗಗಳ ಜಡತೆಯ ಕಿತ್ತೊಗೆದು ತಲೆ ಎತ್ತಲಿ ಈ ದೇಶ… ಇದು ಕಾಲದ ಸಂದೇಶ || ಪ || ಗತ ಇತಿಹಾಸದ ಪುಟಪುಟ ತುಂಬಿಹ ಸಾಹಸಗಾಥೆಯ ಸ್ಫೂರ್ತಿ ತರುಣ ಜನಾಂಗದ ಹೃದಯಾಂಗಣದಲಿ ಉಕ್ಕಲಿ ದೇಶದ ಭಕ್ತಿ… ಅದುವೇ ನಾಡಿಗೆ ಶಕ್ತಿ || 1 || ಆಕರ್ಷಣೆಯ ಮಾಯಾಮೃಗಗಳು ನಲಿದಿರೆ ಸಾಸಿರ ಸಂಖ್ಯೆಯಲಿ ಆಧುನಿಕತೆಯ ಹಿಂಬಾಲಕರನು ಹಿಡಿದಿಡಬೇಕು ಅಂಕೆಯಲಿ… ಶತರಾವಣರಿಹ ಲಂಕೆಯಲಿ || 2 || ವಿಧವಿಧ ವಾದ ವಿವಾದದ ಝಳದಿಂ ರಾಷ್ಟ್ರೀಯತೆಯನು ರಕ್ಷಿಸಲು […]
ಮಾತೃಭೂಮಿಯ ಸ್ಥಾನಮಾನ ಸಂರಕ್ಷಣೆಗೆ ಕಟಿಬದ್ಧರಾಗಿ ಬನ್ನಿ ಶತ್ರುಪಡೆಯೊಡ್ಡಿರುವ ಸಾಸಿರ ಸವಾಲುಗಳ ಎದುರಿಸಲು ಭರದಿ ಬನ್ನಿ… ಸಂಘಟಿತರಾಗಿ ಬನ್ನಿ || ಪ || ಹಿಂದುತ್ವದ್ಹೆಮ್ಮರದ ಬೇರುಗಳು ಒಣಗುತಿವೆ ನೀರುಣಿಸಬೇಕು ನಾವೇ ಭಾರತಾಂಬೆಯ ಒಡಲ ಬೇಗುದಿಯ ನೀಗಿಸುತ ತಂಪುಣಿಸಬೇಕು ನಾವೇ || 1 || ಚರಿತೆ ದಾಖಲಿಸಿರುವ ಅಪಜಯದ ಸಾಲುಗಳ ಗೆಲುವಾಗಿ ಬದಲಿಸೋಣ | ಧ್ಯೇಯ ಮಾರ್ಗದೊಳಿರುವ ವಿಘ್ನ ಹೆಬ್ಬಂಡೆಗಳ ಒಗ್ಗೂಡಿ ಕದಲಿಸೋಣ || 2 || ವಾಮಮಾರ್ಗವ ಪಿಡಿದ ಸಾಮ್ಯವಾದದ ಕುಟಿಲ ಜಾಲವನು ಬಯಲುಗೊಳಿಸಿ | ಮುಗ್ಧತೆಯ ಮುಸುಕಿರುವ […]
ಬಲವರ್ಧನೆಗೆ ಪರಿವರ್ತನೆಗೆ ಭಾರತಿಯ ಆರಾಧನೆಗೆ | ಪಣವನು ತೊಟ್ಟಿಹೆವು ನಾವು ಕಂಕಣ ಕಟ್ಟಿಹೆವು || ಪ || ನೋವೇ ಇರಲಿ ನಲಿವೇ ತರಲಿ ಸೋಲೇ ಇರಲಿ ಗೆಲುವೇ ಬರಲಿ ಧೈರ್ಯದಿ ಮುನ್ನುಗ್ಗಿ ಭರದಿ ಗುರಿಯನು ಮುಟ್ಟುವೆವು || 1 || ಭಾಷೆಯ ನೂರು ಭಾವನೆಯೊಂದೇ ವೇಷವು ವಿವಿಧ ಸಂಸ್ಕøತಿಯೊಂದೇ ಭೇದಗಳೆಲ್ಲವನು ಮನದಿಂ ದೂರಕೆ ಅಟ್ಟುವೆವು || 2 || ದಿನ ಪರ್ಯಟನೆ ಜನಸಂಘಟನೆ ಕಾಯಕಕೆಂದೂ ಇಲ್ಲ ಕೊನೆ ಸ್ವಾಭಿಮಾನಯುತ ನೂತನ ರಾಷ್ಟ್ರವ ಕಟ್ಟುವೆವು || 3 ||