ನವಭಾರತವನು ಕಟ್ಟಲು ಬನ್ನಿ

ನವಭಾರತವನು ಕಟ್ಟಲು ಬನ್ನಿ
ನವದಿಗಂತವನು ಮುಟ್ಟಲು ಬನ್ನಿ
ಅರಿಗಳ ಪಡೆಯನು ಮೆಟ್ಟಲು ಬನ್ನಿ
ದ್ರೋಹಿಗಳನು ಹೊರಗಟ್ಟಲು ಬನ್ನಿ || ಪ ||

ತಾಯ್ನೆಲದಿತಿಹಾಸದ ಗರ್ಭದಲಿ
ಹುದುಗಿದೆ ಸ್ಫೂರ್ತಿಯ ಹೊಂಬೆಳಕು
ಜಗವನೆ ಜಯಿಸಿದ ಸಾಹಸವೀರರ
ಶೌರ್ಯಪರಾಕ್ರಮಯುತ ಬದುಕು || 1 ||

ನಾಡಿನ ಐಕ್ಯ ಸಮಗ್ರತೆಯು
ಭೇದದಿ ಛೇದಿತಗೊಳದಿರಲಿ
ಹಿಂದುತ್ವದ ಬಂಧುತ್ವದ ಮಂತ್ರವು
ಎಲ್ಲೆಡೆ ಮಾರ್ದನಿಗೊಳುತಿರಲಿ || 2 ||

ಹೊಂಚನು ಹಾಕಿಹ ವಂಚಕರಿಪುಗಳ
ಸಂಚುಗಳೆಲ್ಲವನೆದುರಿಸಲು
ಮಿಂಚಿನ ವೇಗದಿ ಮುನ್ನಡೆಯೋಣ
ನಾಡಿನ ಗಡಿಗಳ ರಕ್ಷಿಸಲು || 3 ||

Leave a Reply

Your email address will not be published. Required fields are marked *

*

code