ಭಾರತದೇಕತೆ ಏಳಿಗೆಗಾಗಿ

ಭಾರತದೇಕತೆ ಏಳಿಗೆಗಾಗಿ
ದೃಢಸಂಕಲ್ಪವ ತೊಟ್ಟಿಹೆವು
ಭೇದವ ಮರೆತು ಐಕ್ಯದಿ ಬೆರೆತು
ಹೊಸನಾಡೊಂದನು ಕಟ್ಟುವೆವು || ಪ ||

ತೆಂಕಣ ಜಲಧಿಯ ಅಲೆಗಳ ಮೊರೆತ
ಉಕ್ಕಿಸಿದೆ ನವ ಉತ್ಸಾಹ
ಉತ್ತರದಳಲಿಗೆ ಉತ್ತರ ನೀಡಲು
ಕಿತ್ತೊಗೆಯಿರಿ ಭಯ ಸಂದೇಹ || 1 ||

ಗಿರಿನದಿಗಳು ವನಸಿರಿಯಾಭರಣ
ಪ್ರಕೃತಿಯು ನೀಡಿದ ವರದಾನ
ನಾಡಿನ ಗೌರವ ರಕ್ಷಣೆಗಾಗಿ
ಅರ್ಪಿಸಿ ತನುಮನಧನ ಪ್ರಾಣ || 2 ||

ಕಳಚಿರಿ ಉಗ್ರರ ಗೋಮುಖವ್ಯಾಘ್ರರ
ಭೀಕರ ದ್ರೋಹದ ಮುಖವಾಡ
ಮೊಳಗಲಿ ಹಿಂದುತ್ವದ ಜಯಘೋಷ
ಚದುರಲಿ ಭೀತಿಯ ಕಾರ್ಮೋಡ || 3 ||

Leave a Reply

Your email address will not be published. Required fields are marked *

*

code