ಸಾಹಸದಿತಿಹಾಸವ ಬರೆಯೋಣ ಹೊಸಬಾಳಿನ ಹಾಳೆಯ ತೆರೆಯೋಣ || ಪ || ಭಾರತಮಾತೆಯ ಕುವರ ಕಿಶೋರರು ಬಂದು ಸೇರಿಹೆವು ಒಂದಾಗಿ ದೇಶ ಧರ್ಮಗಳ ಘನತೆಯ ಸಾರಲು ದುಡಿವೆವು ನುಡಿವೆವು ಒಂದಾಗಿ ಓ ಹಗಲುಗಳೇ, ಬಿಳಿ ಮುಗಿಲುಗಳೇ, ಸುಳಿಗಾಳಿಯ ಅಲೆಗಳೇ ಹರಸಿ ಬಂಧುತ್ವದ ಧ್ಯೇಯಾದರ್ಶಗಳೇ ಅಂತರಂಗವನು ಆವರಿಸಿ || 1 || ಧೈರ್ಯದ ಸ್ಥೈರ್ಯದ ಓ ಮೇರುಗಳೇ ಬೆಳೆಯಿರಿ ಭೀರುತೆಯನ್ನಳಿಸಿ ಸ್ನೇಹ ಸಲಿಲಗಳೇ ಜ್ಞಾನ ಸ್ರೋತಗಳೇ, ನಾಡಿ ನಾಡಿಯಲಿ ಸಂಚರಿಸಿ ನಾಳೆ ನಾಳೆಗಳು ಕಳೆದರು […]
ಸಾಸಿರ ಪದಯುಗ ಸಾಸಿರನೇತ್ರ ಸಾಸಿರ ಸಾಸಿರ ಶೀರ್ಷಾ ಸಾಕ್ಷಾತ್ಕರಿಸಿದೆ ಅಭಂಗ ಏಕತೆ ಸಮರಸತೆಯ ಸಂದೇಶ ವ್ಯಾಪಿಸಿ ವಿಶ್ವದ ತಲೆ ಎತ್ತಿಹ ಹೇ ಅಸೀಮ ಸಮಾಜ ಪುರುಷ || ಪ || ಎಲ್ಲಿದೆ ತರತಮ ಜಾತಿನೀತಿ ಕುಲ ಎಲ್ಲಿದೆ ಎಲ್ಲಿದೆ ಭಿನ್ನಮತ ಹಿಂದುತ್ವದಿ ನಿಜ ಬಾಂಧವರೆನಿಸಲು ಇಲ್ಲಿದೆ ಇಲ್ಲಿದೆ ಕರ್ಮಪಥ || 1 || ಸೃಷ್ಟಿಗೆ ಗೋಚರ ನವ ಮನ್ವಂತರ ಸೃಷ್ಟಿ ಸಿದ್ದಿಯ ಮಾರ್ಗಕೆ ಉದಯಿಸಿತೋ ಶಿವಶಕ್ತಿ ಸಕಲ ಜೀವಕುಲ ಸುಖವ ಕಾಣಲಿದೆ ಪ್ರಕೃತಿಗೆ ಮರು ವಿಶ್ವಾಸ || […]
ಸರ್ವ ಸುಂದರ ನಾಡು ವೀರವರ್ಯರ ಬೀಡು ಕರ್ಮಭೂಮಿಯ ನೋಡು ಭಾರತದೊಳಿಲ್ಲಿ || ಪ || ಸಾಗರದ ಅಂಚಿನಲಿ ಹಿಮಗಿರಿಯ ಪಾದದಲಿ ದಿವ್ಯ ಭೂಭಾಗವಿದು ಮೆರೆಯುತಿಹುದಿಲ್ಲಿ || 1 || ಪುಣ್ಯನದಿಗಳ ತಟದಿ ಭವ್ಯದೇಗುಲ ನೆಲೆಸಿ ಸರ್ವಶಕ್ತಿಯ ರೂಪ ಬೆಳಗುತಿಹುದಿಲ್ಲಿ || 2 || ವೇದ ಘೋಷವ ಗೈವ ಋಷಿವರ್ಯರಾಶ್ರಮವು ಸಾಧು ಸಂತರ ಬಾಳ್ವೆ ಸಾಗುತಿಹುದಿಲ್ಲಿ || 3 || ಸೌಜನ್ಯದಾ ಪುಷ್ಪ ಘಮಘಮಿಸಿ ಸೂಸಿರಲು ಸೌಹಾರ್ದದಾ ಎಲರು ಬೀಸುತಿಹುದಿಲ್ಲಿ || 4 || ವಿಶ್ವಶಾಂತಿಯ ನಾದ ಜಗಕೆಲ್ಲ […]
ಸಮಾಜಪುರುಷನ ಅಭಂಗ ಪೂಜೆಗೆ ಅಸಂಖ್ಯ ಕಮಲಗಳರಳುತಿವೆ ಅಸೀಮ ಸ್ಫೂರ್ತಿಯ ಸಶಕ್ತ ಯುವಕರ ಪ್ರಬುದ್ಧ ಹೃದಯಗಳರಳುತಿವೆ || ಪ || ಪ್ರಭಾತ ಭಾಸ್ಕರ ಮುದದಿಂದುದಿಸುತ ಪೂರ್ಣಾಕಾರದಿ ಬರುತಿಹನು ನವರಾಗದ ನವಗಾನದ ನವೀನ ಸಂದೇಶವನದೊ ತರುತಿಹನು ಅನಂತ ಪ್ರೇರಣೆ ದಿಗಂತ ತುಂಬುತ ಸಜೀವ ತಳೆಯುತಲಿದೆ ನಾಡು ಸನ್ಮಂಗಳ ಜಯಗಾನವ ಪಾಡುವ ರಣಕಹಳೆಗಳೆದ್ದಿವೆ ನೋಡು || 1 || ರಾಷ್ಟ್ರದ ದೈವಾರಾಧನೆ ಬಂದಿದೆ ಬೆಂಕಿಯ ಕೊಡು ನಿಜ ಜೀವನಕೆ ಪ್ರಜ್ವಲಿಸಲಿ ಯಜ್ಞದ ಜ್ವಾಲಾಪ್ರಭೆ ಧುಮುಕೊಮ್ಮೆಗೆ ಸಮರಾಂಗಣಕೆ ಈ ಜೀವನವಾಗಲಿ ಆಜ್ಯಾಹುತಿ ಭೂರಜಕಾಗಲಿ […]
ಸಮರಸ ಭಾವದ ಸರಿಗಮ ಸ್ವರದಲಿ ಹೊಸ ಹಾಡೊಂದನು ಹಾಡೋಣ ತರತಮವಿಲ್ಲದ ಸರಿಸಮ ಸೂತ್ರದಿ ಹೊಸ ನಾಡೊಂದನು ಕಟ್ಟೋಣ || ಪ || ಕುಡಿಯುವ ಜಲ ಉಸಿರಾಡುವ ಗಾಳಿ ನಡೆದಾಡುವ ನೆಲ ನಮಗೊಂದೇ ನಮ್ಮ ಶರೀರದ ಕಣಕಣಗಳಲಿ ಹರಿಯುವ ನೆತ್ತರು ತಾನೊಂದೇ || 1 || ಜಾತಿ ಭೇಧಗಳ ಮೇಲುಕೀಳುಗಳ ಬೇರು ಸಹಿತ ಕಿತ್ತೆಸೆಯೋಣ ಬಂಧುತ್ವದ ಭಾವೈಕ್ಯದ ನಂಟಲಿ ಹೃದಯ ಹೃದಯಗಳ ಬೆಸೆಯೋಣ || 2 || ಸೋಲು ಗೆಲುವುಗಳು ನೋವು ನಲಿವುಗಳು ಬದಲಿಸದಿರಲಿ ಬದ್ಧತೆಯ ರೋಷ ದ್ವೇಷಗಳ […]
ಸದ್ವಿಚಾರ ಧಾರೆಯಿಂದ ಚಿಮ್ಮಲಿ ಸ್ಫೂರ್ತಿ ನವೋತ್ಸಾಹದಿಂದ ಹೊರಗೆ ಹೊಮ್ಮಲಿ ಶಕ್ತಿ || ಪ || ಭವ್ಯ ರಾಷ್ಟ್ರಗುಡಿಯ ಶಿಲ್ಪಕಾರರು ನಾವು ದಿವ್ಯ ಪರಂಪರೆಯ ನವಕುಮಾರರು ನಾವು ನವ್ಯರು ನಾವು, ನವೋನವ್ಯರು ನಾವು ನಾವೆ ಇರಲು ತಾಯಿಗಿನ್ನು ಎಲ್ಲಿಯ ನೋವು? ಇನ್ನು ಎಲ್ಲಿಯ ನೋವು || 1 || ಪಾದಘಾತದಿಂದ ಅರಿಯ ತೊತ್ತಳತುಳಿದು ಬಾಹು ಬೆಳೆಸಿ ಭೂಮಿ ಬಾನಿನೆತ್ತರ ಬೆಳೆದು ಅರಳಿ ನಗುವೆವು, ಸಿರಿಯ ಮರಳಿ ತರುವೆವು ಅಳಿದ ಪಿತರ ಆತ್ಮತೃಪ್ತಿಗೊಳಿಸಿ ಮೆರೆವೆವು ತೃಪ್ತಿಗೊಳಿಸಿ ಮೆರೆವೆವು || 2 […]
ಶಾಖೆ ಎಂಬ ತಪಸಿನಲ್ಲಿ ಗುಣಗಳನ್ನು ಗಳಿಸುವಾ ಸಾಮರಸ್ಯ ದಿಕ್ಕಿನಲ್ಲಿ ಬಾಳ್ವೆಯನ್ನು ಮಾಡುವಾ ಜನರು ಒಂದು ದೇಶ ಒಂದು ಎಂಬ ಮಾತು ನಮ್ಮದು ಅಧಮ ಪರಮ ಎಂಬ ವಾದ ಎಂದು ನಾವು ಒಲ್ಲೆವು || ಪ|| ಕೇಶವನಾ ಕಲ್ಪನೆಯ ರಾಷ್ಟ್ರ ಸಾಕಾರದಲೀ ಮಿಂದೆವಿಂದು ಧ್ಯೇಯನಿಷ್ಠ ಕಾರ್ಯ ತತ್ಪರತೆಯಲೀ ವಾಮಮಾರ್ಗ ದುರುಳ ಮಾರ್ಗ ಎಂದೆಂದೂ ಕ್ರಮಿಸೆವು ದೇಶಭಕ್ತಿ ಎಂಬ ಮಂತ್ರ ಸತತ ನಾವು ಪಠಿಪೆವು || 1 || ದೇವನುದಿಸಿ ಬಂದ ನಾಡು ತ್ಯಾಗಭೂಮಿ ಭಾರತ ಕರ್ಮಯೋಗಿಯಾಗ್ವ ನಾವು ಗೌರವವ […]
ಶತಶತಮಾನದ ಕಲುಷವ ಗುಡಿಸುತ ಬನ್ನಿ ತಾಯ ಉಡಿಗೇ ಹಿಂದುತ್ವದಲಿ ಬಂಧುತ್ವದಲಿ ಒಂದಾಗಿ ಸಾಗಿ ಗುಡಿಗೆ || ಪ || ತೊಲಗಿಸಿ ತರತಮ ದೋಷ, ಮೊಳಗಿಸಿ ಸಮತೆಯ ಘೋಷ ನಮ್ಮೊಳಗಿಲ್ಲವು ಭೇದ, ಆಗದು ಗೆಳೆತನ ಛೇದ ದೈನ್ಯತೆ ಮಲಿನತೆ ನೀಗುತ ನಡೆವೆವು ನಮಿಸಿ ತಾಯ ಅಡಿಗೇ ಪದ ಜೋಡಿಸುತ ಭುಜಗೂಡಿಸುತ ಒಂದಾಗಿ ಸಾಗಿ ಗುಡಿಗೆ || 1 || ಕುಡಿಯುವ ಎದೆಹಾಲೊಂದೇ, ನುಡಿಯುವ ಸವಿಮಾತೊಂದೇ ಪುಂಗವ ಪುರುಷರ ಆಂಶ, ನಮ್ಮದು ಋಷಿಮುನಿ ವಂಶ ಮಾತೆಯ ವೈಭವ ಸಾಧನೆಗಾಗಿ ಒಂದುಗೂಡಿ […]
ಶಕ್ತಿಸ್ವರೂಪಿಣಿ ಭಾರತಮಾತೆಯ ದುರ್ಜಯ ಪುನರವತಾರ ಮೂಡುತ್ತಿದೆ ಭಾರತದಲ್ಲೆಲ್ಲೆಡೆ ನವಚೈತನ್ಯದ ಸಂಚಾರ || ಪ || ಮಕ್ಕಳ ಮೈಮರೆವಿನ ಯುಗ ಕಳೆದಿದೆ ಅಳಿದಿದೆ ಅಳುಕಿನ ತಿಮಿರ ಏಕಾತ್ಮತೆಯರುಣ ಪ್ರಭೆ ಮೂಡಿದೆ ಅಡಗಿದೆ ಒಡಕಿನ ಕುಹಕ ಶತ್ರುವಿನಾಶದ ಆಶ್ವಾಸನೆಯಿದೆ ಜಗಕಿದೆ ಶಾಂತಿಯ ಶಪಥ ವಿಜಯದ ಗಳಿಗೆಯಿದೋ ಸಮೀಪಿಸಿದೆ ಮುನ್ನುಗ್ಗಿದೆ ಯುವಪಥಕ || 1 || ಸಾವಿಲ್ಲದ ನಾಡಿನ ಸುತರೆದ್ದರು ಯಜ್ಞದ ಸಿದ್ಧತೆಗೆ ಹಿಂದುತ್ವದಮರ ಗಂಗೆ ಹರಿದಿದೆ ಸೃಷ್ಟಿಯ ಏಳಿಗೆಗೆ ಯುಗಯುಗಗಳ ಇತಿಹಾಸದ ವಿಜಯದ ವೈಭವ ಶಿಖರಕ್ಕೆ ನವ ಇತಿಹಾಸದ ಧ್ವಜವನೇರಿಸುವ […]
ಶಕ್ತಿ ಪರಾಕ್ರಮ ಆವಾಹನೆಗೆ, ಕಂಕಣ ಧರಿಸಿ ಸಾಧಕರೆ ಹಿಂದುತ್ವದ ಆರಾಧಕರೆ || ಪ || ಚಂಡಮುಂಡರಾ ದಂಡನು ದಂಡಿಸಿ ರುಂಡವ ಖಂಡಿಸಿ ಚೆಂಡಾಡಿ ದುಷ್ಟರ ದಮನಿಸಿ ಕಷ್ಟಕೆ ಸಿಲುಕಿಹ ಶಿಷ್ಟ ಶಕ್ತಿಯನು ಕಾಪಾಡಿ || 1 || ಕಂಟಕವಳಿಸಿ ಸಂಕಟ ನೀಗಲು ಟೊಂಕವ ಕಟ್ಟುವ ಸಮಯವಿದು ಜಡತೆಯ ಜಯಿಸಿ ಸ್ವಾರ್ಥವ ದಹಿಸಿ ಮುನ್ನಡೆಯುವ ಸುಮಹೂರ್ತವಿದು || 2 || ಬಹುರಾಷ್ಟ್ರೀಯರ ಸಂಚಿನ ಸುಳಿಯಲಿ ನಾಡೆಮದು ಮುಳುಗದೆ ಇರಲಿ ಸ್ವತ್ವ ಸ್ವದೇಶೀ ಸ್ವಾವಲಂಬನೆಯ ದಿವ್ಯಮಂತ್ರ ಮೊಳಗುತಲಿರಲಿ || 3 […]