ಶಾಖೆ ಎಂಬ ತಪಸಿನಲ್ಲಿ

ಶಾಖೆ ಎಂಬ ತಪಸಿನಲ್ಲಿ ಗುಣಗಳನ್ನು ಗಳಿಸುವಾ
ಸಾಮರಸ್ಯ ದಿಕ್ಕಿನಲ್ಲಿ ಬಾಳ್ವೆಯನ್ನು ಮಾಡುವಾ
ಜನರು ಒಂದು ದೇಶ ಒಂದು ಎಂಬ ಮಾತು ನಮ್ಮದು
ಅಧಮ ಪರಮ ಎಂಬ ವಾದ ಎಂದು ನಾವು ಒಲ್ಲೆವು || ಪ||

ಕೇಶವನಾ ಕಲ್ಪನೆಯ ರಾಷ್ಟ್ರ ಸಾಕಾರದಲೀ
ಮಿಂದೆವಿಂದು ಧ್ಯೇಯನಿಷ್ಠ ಕಾರ್ಯ ತತ್ಪರತೆಯಲೀ
ವಾಮಮಾರ್ಗ ದುರುಳ ಮಾರ್ಗ ಎಂದೆಂದೂ ಕ್ರಮಿಸೆವು
ದೇಶಭಕ್ತಿ ಎಂಬ ಮಂತ್ರ ಸತತ ನಾವು ಪಠಿಪೆವು || 1 ||

ದೇವನುದಿಸಿ ಬಂದ ನಾಡು ತ್ಯಾಗಭೂಮಿ ಭಾರತ
ಕರ್ಮಯೋಗಿಯಾಗ್ವ ನಾವು ಗೌರವವ ತೋರುತ
ರಾಮಕೃಷ್ಣರಾದಿಯಾಗಿ ತಾಯಿಮಾತೆ ಭಾರತೀ
ಇದುವೆ ಜೀವನಾದರ್ಶ ಅದುವೆ ನಮ್ಮ ಕೀರುತೀ || 2 ||

ವೀರರಾಗಿ ಮೆರೆವೆವು ಶೂರತನವ ತೋರ್ವೆವು
ವೈರಿಯೆದುರು ದಿಟ್ಟತನದಿ ಉತ್ತರವ ನೀಡ್ವೆವು
ಅಂದು ಇಂದು ಒಂದೆ ಗುರಿಯು ಓ ಹಿಂದು ವೀರನೇ
ಪರಮ ವೈಭವಕೆ ಒಯ್ವ ಹಾದಿ ಇದುವೆ ಪುತ್ರನೆ || 3 ||

Leave a Reply

Your email address will not be published. Required fields are marked *

*

code