ನುಗ್ಗಿ ಮುನ್ನಡೆ, ಶಿರಬಾಗಿ ಭಗವಗೆ ಮುನ್ನುಗ್ಗಿ ಮುನ್ನಡೆ, ಶಿರಬಾಗಿ ಭಗವಗೆ ಹಳ್ಳಿ ಹಳ್ಳಿಗೆ ಹೋಗಿ ಸಂಘ ಶಾಖೆಯ ಮಾಡಿ ಒಗ್ಗಟ್ಟಿನಲ್ಲಿಹ ನಮ್ಮ ಬಲವನು ತೋರಿ || ಪ || ಕಾಶ್ಮೀರ ಕಬಳಿಸಲು ಪಾಕಿಗಳು ಕಾದಿಹರು ಅಸ್ಸಾಮಲಿ ದ್ರೋಹಿಗಳು ನುಸುಳಿ ಬೇರು ಬಿಟ್ಟಿಹರು ಖಲಿಸ್ಥಾನಕಾಗಿ ನಡೆವ ಮಾರಣ ಹೋಮವ ನೋಡು ಎಚ್ಚರಾಗೋ ನೀ ಮರೆತು ತುಚ್ಚವಾದ ಭೇದಭಾವ || 1 || ಜಗದಗಲ ಹಿಂದುಗಳು ನನ್ನೆಚ್ಚಿನ ಬಂಧುಗಳು ಅವರ ನೋವೆ ನನಗೆ ನೋವು ಅವರ ನಲಿವೆ ನನಗೆ ನಲಿವು […]
ಹುಟ್ಟಿನಿಂದಲೇ ಜಾತಿ ಹಣೆಪಟ್ಟಿ ಹಚ್ಚುತ್ತ ಮುಟ್ಟದೆ ಅಟ್ಟುವುದು ಸರಿಯೇ? ಅಂತರಿಕ್ಷಕ್ಕೆ ಅಡಿಯಿಟ್ಟ ನರನಿಂದು ಅಂತರವ ತೋರುವುದು ತರವೇ? || ಪ || ಪ್ರಾಣಿ ಪಕ್ಷಿಯಲಿನಿತು ಐಕ್ಯಮತ್ಯದ ಭಾವ ಸಣ್ಣಿರುವೆ ತೆರೆಸೀತೆ ಕಣ್ಣ ಅಣು ಅಣುವ ಸೃಷ್ಟಿ ಮಾಡಿರಲು ಮಾದೇವ ಮತ್ತೇಕೆ ಅಸ್ಪೃಶ್ಯ ವರ್ಣ || 1 || ತರತಮದ ಮೌಢ್ಯ ಮನುಕುಲದ ಜಾಡ್ಯ ಅಳಿಸೋಣ ಹರಿಸುತ್ತ ಒಲವ ಗುರುತಿಸುತ ಆತ್ಮ ಬೆಸೆಯುತ್ತ ಸ್ನೇಹ ಗಳಿಸೋಣ ಏಕತೆಯ ಬಲವ || 2 || ಸೇವೆಯೇ ವ್ರತವು ದುಡಿಮೆಯೇ ಬಲವು […]
ಮನುಕುಲದೇಳಿಗೆ ಸಾಧಿಸ ಹೊರಟೆವು ಪ್ರಭಾತ ಕಿರಣಗಳರಳಿಸುತ ಶೋಷಿತ ಪೀಡಿತ ದಲಿತ ಜನಾಂಗದ ಭಾಗ್ಯೋದಯವನು ನಿರ್ಮಿಸುತಾ || ಪ || ಮೈ ಬೆವರಿನ ಜಲಪಾತವ ಧುಮುಕಿಸಿ ಹೊನ್ನನು ಸೃಜಿಪೆವು ಮಣ್ಣಿನಲಿ ಕಗ್ಗಲ್ಲೊಳು ಸುರಪ್ರತಿಮೆಯ ನಿರ್ಮಿಸಿ ಹೂವರಳಿಸುವೆವು ಮುಳ್ಳಿನಲಿ ಸತತ ಪರಿಶ್ರಮ ಸುರಿಸುತ ನಡೆವೆವು ವೈಭವ ಶಿಖರಕೆ ಧಾವಿಸುತಾ || 1 || ಯಾರೊಬ್ಬರ ಬಾಯ್ತುತ್ತನು ಕಸಿವುದು ಸಲ್ಲದು ಬೇಕಿಲ್ಲವು ನಮಗೆ ನ್ಯಾಯಕೆ ನೀತಿಗೆ ಹೋರಾಡುತಲಿರುವೆವು ನಾವ್ ಕಡೆಯುಸಿರಿನವರೆಗೆ ನಮ್ಮಯ ಹಿತವನು ಪರಹಿತದೊಂದಿಗೆ ಬೆಸೆವೆವು ಸಮರಸ ಸಾಧಿಸುತ || 2 […]
ತಾಯೇ ವಂದಿಸುವೆ ಜಲಭರಿತೆ ಫಲಭರಿತೆ ತೆಂಕಣದ ತಂಬೆಲರ ಸರಿತೆ ಸೊಂಪಿಡಿದ ಪೈರು ಪಚ್ಚೆಯ ತವರ್ಮನೆಯೆ ಹೇ ತಾಯೆ ! ಬೆಳ್ದಿಂಗಳಲಿ ಮಿಂದು ಮಿರುಗುವಿರುಳನುಟ್ಟವಳೆ ಹೂ ಚಿಗುರು ಮುಡಿದ ತರುಲತೆಗಳನೆ ತೊಟ್ಟವಳೆ ಇನಿನಗೆಯ ಜೇನ್‍ದನಿಯ ಸುಖದಾತೆ ವರದಾತೆ ಹೇ ಮಾತೆ! ಕಂಠಕೋಟಿಯ ಸಿಂಹಗರ್ಜನೆ ಸಿಡಿಸಿ ಬಾಹುಕೋಟಿಯ ಶಸ್ತ್ರಚಾಲನೆ ನಡೆಸಿ ರೌದ್ರರೂಪವ ತಳೆವ ಭೈರವಿಯೆ ನೀನು ಅಬಲೆಯೆ ತಾಯೆ ? ಸರ್ವಬಲ ಸಂಪನ್ನೆ ಶರಣು ಅಭಯಾವರಣೆ ವೈರಿಕುಲಧ್ವಂಸಿನಿಯೆ, ತಾಯೆ ! ನೀ ವಿದ್ಯೆ ನೀ ಧರ್ಮ ನೀ ಹೃದಯ ನೀನಾತ್ಮ […]
ಓ ನನ್ನ ಚೇತನ ಆಗು ನೀ ಅನಿಕೇತನ ರೂಪ ರೂಪಗಳನು ದಾಟಿ ನಾಮ ಕೋಟಿಗಳನು ಮೀಟಿ ಎದೆಯ ಬಿರಿಯೆ ಭಾವದೀಟಿ ಓ ನನ್ನ ಚೇತನ ನೂರು ಮತದ ಹೊಟ್ಟ ತೂರಿ ಎಲ್ಲ ತತ್ತ್ವದೆಲ್ಲೆ ಮೀರಿ ನಿರ್ದಿಗಂತವಾಗಿ ಏರಿ ಓ ನನ್ನ ಚೇತನ ಎಲ್ಲಿಯೂ ನಿಲ್ಲದಿರು ಮನೆಯನೆಂದು ಕಟ್ಟದಿರು ಕೊನೆಯನೆಂದು ಮುಟ್ಟದಿರು ಓ ಅನಂತವಾಗಿರು ಓ ನನ್ನ ಚೇತನ ಅನಂತ ತಾನ್ ಅನಂತವಾಗಿ ಆಗುತಿಹನೆ ನಿತ್ಯಯೋಗಿ ಅನಂತ ನೀ ಅನಂತವಾಗು ಆಗು ಆಗು ಆಗು ಆಗು ಓ ನನ್ನ […]
ನಾಡದೇವಿಯ ಆರಾಧನೆ, ಸುತ ಕೋಟಿ ಧನ್ಯತೆ ಅಭಿವಂದನೆ ಮಾನಸ ಸರಸಿನ ಭಾವಕಮಲ, ಅರಳಿ ತಳೆದ ಪರಿಕಲ್ಪನೆ || ಪ || ಭಾಷೆ ಬೇರೆ, ವೇಷ ಬೇರೆ, ವೃತ್ತಿ ಬೇರೆ, ಪ್ರವೃತ್ತಿ ಬೇರೆ ಅಂಗುಲಂಗುಲ ನೆಲದಾ ಮತಿಯ, ಕೃತಿ ಸಂಸ್ಕೃತಿಯ ಗತಿಯು ಬೇರೆ ಉಸಿರಿನ ಪ್ರಾಣ ಗಾಳಿಯು ಒಂದೇ, ಹಸುರಿನ ಜೀವ ನೆಲ ಜಲ ಒಂದೇ ಹರಿಯುವ ರಕ್ತದ ಕಣಕಣ ಒಂದೇ, ನಾಡ ದೇವಿಯ ಪೂಜೆಗೆ ಸಮರಸ ಮಂತ್ರ ಸುಮಾರ್ಚನೆಯೊಂದೇ || 1 || ಅಳಿಸುವ ಅಸಮತೆ ಗಳಿಸುವ […]
ಹೃದಯವನರಳಿಸಿ ಜಗವನೆ ಬೆಳಗುವ ಸಂಕಲ್ಪಗಳವತರಿಸುತಿವೆ ಸಂಕ್ರಮಣಕೆ ತಹತಹಿಸುತಿವೆ || ಪ || ಶೋಧಿಸಿ ಸೋಲಿನ ಮೂಲಗಳ ಭೇದಿಸಿ ನೂರು ಸವಾಲುಗಳ ಛೇದಿಸಿ ಛಲವ ಪ್ರಚೋದಿಸಿ ಬಲವ ಸಾಧಿಸಿ ತರುವೆವು ಜಯದೊಲವ || 1 || ಸಮರಸತೆಯ ಚಿರ ಸಂದೇಶ ಬಾಳಿದ ಹಿರಿಯರ ಆದರ್ಶ ಮರಳಲಿ ಧರೆಗೆ ಕಾಲದ ಕರೆಗೆ ಕರಗಲಿ ಭ್ರಮೆಯ ಕರಾಳ ಹೊಗೆ || 2 || ಪುಟಿದೇಳಲಿ ನೆಲದಭಿಮಾನ ಪುಟಗೊಳ್ಳಲಿ ತಾರುಣ್ಯಧನ ರಕ್ತದ ಕಣಕಣ ಸುರಿಯೆ ಸಮರ್ಪಣ ಶಕ್ತಗೊಳಲಿ ಸುತ ಜಾಗರಣ || 3 […]
ಹೂ ಹರೆಯದ ಹೊಂಗನಸುಗಳೆ ಏಳಿ ಏಳಿ ಎಚ್ಚರಾಗಿ ಕನಸು ಕಂಗಳೆ ಕತ್ತಲೆಗಿದು ಸಾವು ಸುತ್ತಲು ಮುಂಜಾವು ಕರೆವಳುಷಾದೇವಿ ಮಂಗಳೆ ಸುಮಂಗಳೆ ಎಚ್ಚರಾಗಿ ಕನಸು ಕಂಗಳೆ || ಪ || ನೋವಿನಿರುಳು ನರಳಿ ನರಳಿ ಸರಿದಿದೆ ನಗುವು ನಲಿವಿಗಾಗಿ ಕದವ ತೆರೆದಿದೆ ಸೂತ್ರಬದ್ಧ ಕಾರ್ಯ ನಮ್ಮ ಎದುರಿದೆ ಲೋಕ ನಮ್ಮ ನಿಲುವಿಗಾಗಿ ಕಾದಿದೆ ಅಬಲ ಶಕ್ತಿಯಲ್ಲ, ಸಬಲರು ನಾವೆಲ್ಲಾ ಹಗಲಿಗರಳಬೇಕು ನೈದಿಲೆ || 1 || ಹುಲಿಯ ಮಣಿಸಿ ಹಲ್ಲೆಣಿಸಿದ ಭರತ ಬಲ ಚಕ್ರವ್ಯೂಹ ಮುರಿದಾ ಅಭಿಮನ್ಯು ಛಲ […]
ಹುಡುಕುವ ಬಳ್ಳಿ ಹರಿದಾಡಿ ಬಂದು ಕಾಲ ತೊಡರಿದ್ಹಾಂಗ ಬಯಸಿದ ಮುಕುಟ ಬೆಳಗಾಗ ಬಂದು ಶಿರವನಡರಿದ್ಹಾಂಗ ಅಖಂಡ ತಾಯಿಯ ಕನಸು ಕಲ್ಪನೆಯ ಸಾಕಾರದ ಸುಗ್ಗಿ… ಬಂತೇ ತಾನಾಗಿ || ಪ || ಪಂಜಾಬದಿ ನೋಡ, ಮಂಜು ಮುಸುಕಿದ ಮೋಡ ಪಂಜಾಬದಿ ನೋಡ ಸಂಜೆಯಿಂದ ಮರುಸಂಜೆಯ ತನಕ ಕೊಲ್ಲತಾರ ಸುದ್ದಿ ಹಂಚಿಕೆ ಹಾಕಿ ದೇಶವ ಮುರಿಯಲು ಮಾಡತಾರ ಬುದ್ಧಿ ನಾಡಿಗೆ ತಂದರು ಕೇಡ, ಇದು ಪಾಕಿಯ ಕೈವಾಡ ಪಾಕಿ ಬರಲವರ ಕುಟ್ಟಿ ನೆತ್ತಿಯಾ ಮೆಟ್ಟಿ, ಗಡಿಯ ಹೊರಗಟ್ಟಿ ಈ ನಾಡ […]
ಹಿಂದುತ್ವದ ಜಯಘೋಷವ ಮೊಳಗಿಸಿ ನಾಡನು ಜಾಗೃತಗೊಳಿಸೋಣ ಗ್ರಾಮ ನಗರ ಗಿರಿ ಕಾನನದಲ್ಲಿ ಸಾತ್ವಿಕ ಬೆಳಕನು ಬೀರೋಣ ಪುನರಪಿ ದಿಗ್ದೆಸೆಯಲಿ ಪುರುಷಾರ್ಥದ ಕಲ್ಪನೆ ತೆರೆತೆರೆ ವ್ಯಾಪಿಸಲಿ ಪಲಾಯನಕಿನಿತೂ ಆಸ್ಪದವಿಲ್ಲ ಪಾರ್ಥಸಾರಥಿಯ ನಾಡಿನಲಿ || ಪ || ಭಾಷೆಯು ವೇಷವು ಎಲ್ಲವು ಭಿನ್ನ ಆದರು ಬದುಕು ಏಕರಸ ಸಾವಿರ ವರ್ಷದ ಸಮರ ವಿಜೇತ ಪಾವನ ಹಿಂದೂ ಜೀವರಸ ಸಂಘರ್ಷದ ಸಮರಾಂಗಣದಲ್ಲಿ ಮೂಡುತಲಿದೆ ನವ ವಿಶ್ವಾಸ ಗ್ರಾಮ ಗ್ರಾಮಕೂ ಪ್ರತಿಹೃದಯಕ್ಕೂ ಹಿಂದೂ ರಾಷ್ಟ್ರದ ಸಂದೇಶ || 1 || ಜಾತಿಮತಗಳ ಧನಿಕ […]