ಭಾರತಮಾತೆಯ ವೀರ ಸುಪುತ್ರರು ಸಾವನೆ

ಭಾರತ ಮಾತೆಯ ವೀರ ಸುಪುತ್ರರು ಸಾವನೆ ತುಳಿದವರೋ ಒಂದೇ ಬ್ರಹ್ಮ ತಪೋದಂಡದೊಳೇ ವೈರವ ಸೆಳೆದವರೋ || ಪ || ಶತಶತ ಸಂವತ್ಸರ ತಪದಲಿ ಪ್ರತಿಸೃಷ್ಟಿಯ ಗೈದವರೋ ಸತ್ಯಾಗ್ರಹದೊಳೆ ಕಡಲೊಡಲಾಳವನುಡುಗಿಸಿ ಹೊಯ್ದವರೋ || 1 || ಪಂಚ-ಮಹಾಭೂತಂಗಳ ಶಕ್ತಿಯನಡುಗಿಸಿ ಮೆರೆದವರೋ ವಂಚನೆಯಿಲ್ಲದೆ ರಣನೀತಿಯ ಸುವ್ರತವನು ಪೊರೆದವರೋ || 2 || ಹಾಲಾಹಲವನ್ನೀಂಟಿಯು ವಿಶ್ವಕೆ ಪ್ರಾಣವ ತೆತ್ತವರೋ ಕೋಲಾಹಲದೊಳೆ ದಯಶಾಂತಿಗಳನೆ ಲೋಕಕೆ ಇತ್ತವರೋ || 3 || ತ್ಯಾಗೌದಾರ್ಯದಿ ಮಾನವತೆಯನೇ ಬೆಳಗಿದ ವರಸುತರೋ ಭಾರತ ಸುಯಶೋಧ್ವಜವನೆ ಗಗನಕೆ ಎತ್ತಿದ ಬಲಯುತರೋ […]

Read More

ಭಾರತಮಾತೆಯ ವೀರ ಸುಪುತ್ರರು ಜಗವನು

ಭಾರತಮಾತೆಯ ವೀರ ಸುಪುತ್ರರು ಜಗವನು ಪಾವನ ಮಾಡುವೆವು ಮಾತೆಯ ಮಂಗಳ ಪದವನು ನಾವು ಬಿಡದರ್ಚಿಸುವೆವು ಸೇವಿಪೆವು || ಪ || ಮಾತೆಯ ಬಂಧನ ಕಡಿದೊಗೆಯುತ ನಾವ್ ಜನ್ಮವ ಸಾರ್ಥಕಗೊಳಿಸುವೆವು ವೀರರೆ ಏಳಿರಿ ಮುಂದಕೆ ಸಾಗಿರಿ ಮಾತೆಯ ರಕ್ಷಣ ಗೈಯುವೆವು || 1 || ರಾಮನು ಜನ್ಮವ ತಾಳುತ ಧರ್ಮವ ನೆಲೆಸಿದ ನಾಡಿದು ಭಾರತವು ಪಾತಿವ್ರತ್ಯದ ಮಹಿಮೆಯ ತೋರಿದ ಜಾನಕಿ ದೇವಿಯ ವರಗೃಹವು || 2 || ಕುರುಕ್ಷೇತ್ರದೊಳು ಸಾರಥಿಯಾಗಿ ಪಾಂಚಜನ್ಯವನ್ನೂದಿದನು ಜಯಭೇರಿಯನು ಹೊಡೆದಿಹ ವೀರನ ಶ್ರೀ ಕೃಷ್ಣನ […]

Read More

ಭಾರತ ಮಾತೆಗೆ ಜಯಹೇ

ಭಾರತ ಮಾತೆಗೆ ಜಯಹೇ ಭಾರತ ಮಾತೆಗೆ ಜಯಹೇ ಹಿಂದುಗಳೆಲ್ಲ ಭರದಿಂದ ಕೂಡಿ ಒಲವಿಂದ ಕೂಡಿ ಹಾಡಿ || ಪ || ನಿನ್ನಯ ಘನತೆಗೆ ನಿನ್ನಯ ಏಳ್ಗೆಗೆ ನಿನ್ನಯ ಸೊಬಗಿಗೆ ದುಡಿಯುತಲಿ ನಿನ್ನಯ ಹೆಸರಿಗೆ ನಿನ್ನಯ ರಕ್ಷೆಗೆ ಕಂಕಣ ಕಟ್ಟಿ ಹೋರಾಡಿ || 1 || ನಿನ್ನಯ ಉದರದಿ ಜನಿಸಿದ ನಾನು ನಿನ್ನಯ ಮಡಿಲಲಿ ನಲಿಯುತ ಬಾಳು ನಿನ್ನಯ ರಕುತದಿ ಕೂಡಿದ ನಾವು ಬಲದಿಂದ ಕೂಡಿ ಹಾಡಿ || 2 || ಜಾತಿಯ ತೊಡೆದು ಭೇದವ ಅಳಿಸಿ ದ್ವೇಷವ […]

Read More

ಭಾರತ ದೇಶದಿ ಜನಿಸುವ ಪುಣ್ಯವು ಜನುಮ

ಭಾರತ ದೇಶದಿ ಜನಿಸುವ ಪುಣ್ಯವು ಜನುಮ ಜನುಮದಲಿ ಇರಲೆಮಗೆ ಭಾರತ ಮಾತೆಯ ಸೇವೆಯ ಗೈಯುವ ಭಾಗ್ಯವು ದಿನದಿನ ಬರೆಲೆಮಗೆ || ಪ || ಇಲ್ಲಿಯ ನಡೆನುಡಿ ವಿಶ್ವಕೆ ಮಾದರಿ ನೆಲವಿದು ಕಲೆಗಳ ತವರೂರು ಬೇಲೂರಿನ ಗುಡಿ ಮಧುರೆಯ ಮಂದಿರ ಕುಶಲ ಕಲಾಕೃತಿಗಳ ಬೀಡು || 1 || ವಿಶ್ವೇಶ್ವರ ರಾಮಾನುಜರಂತೆ ಕುಶಲಮತಿಗಳುದಿಸಿಹರಿಲ್ಲಿ ಭಾರತಮಾತೆಯ ಕೀರ್ತಿಯ ಶಿಖರಕೆ ಏರಿಸಿ ಹರುಷದಿ ಜಯಚೆಲ್ಲಿ || 2 ||

Read More

ಭಾರತ ದೇಶದ ಉನ್ನತಿ ಶೌರ್ಯದಿ

ಭಾರತ ದೇಶದ ಉನ್ನತಿ ಶೌರ್ಯದಿ ಹಿಂದುಗಳೇ ಹಿಂದಾಗುವಿರೆ ? ಬರುವುದು ಕೇಸರಿಯುದರದಿ ಕೇಸರಿ ಎಂಬುದು ಮಾತೆಗೆ ತೋರುವಿರೆ ? || ಪ || ಗಗನವ ಚುಂಬಿಪ ಗಿರಿಗಳನಲುಗಿಸಿ ಸಾಗರದಲಿ ಸೇತುವೆ ಬಿಗಿದು ಸಾಗಿಸಿದಿರಿ ರಾಘವನನು ಲಂಕೆಗೆ ಅಗಣಿತ ಸಾಹಸವನು ಗೈದು ಕಡಲನು ಜಿಗಿದಾ ಹನುಮನ ಶಕ್ತಿ ಪರಾಕ್ರಮವಿಂದಿಗೆ ಉಡುಗಿಹುದೆ ? ಅಡಿಗಡಿ ತಾಯ್ವರಿಗಭಯದ ಮುದ್ರಿಕೆ ತೊಡಿಸುವ ಸಾಹಸ ಉಳಿದಿಹುದೆ ? ಭಾರ್ಗವ ರಾಮಗೆ ಜನನವನೀಯುವ ರೇಣುಕೆ ಎಂದಿಗೆ ಜನಿಸುವಳು ? ಜಗದಲಿ ದುಷ್ಟರ ಕಿರುಕುಳ ಕಳೆಯುವ ಅಭಯವ […]

Read More

ಭಾಗ್ಯದಾತೆ ಜನ್ಮದಾತೆ

ಭಾಗ್ಯದಾತೆ ಜನ್ಮದಾತೆ ತಾಯೆ ವಿಶ್ವಭಾರತಿ ದಿಗ್ ದಿಗಂತದೊಳಗೆ ಎಸೆವ ನಿನ್ನ ಧವಳ ಕೀರುತಿ || ಪ || ನಿನ್ನ ಪರುಷ ಒಡಲಿನಿಂದ ಸಿಡಿದ ವೀರಕೇಶವ ಜಾತಿ ಭೂತ ಅಳಿಸಲೆಂದೆ ಕಟ್ಟಿ ಸ್ನೇಹ ಸಂಘವ ಹಿಂದು ಬಂಧು ಒಂದು ಎಂದ ನಮ್ಮ ಹಿರಿಯ ಬಾಂಧವ ಅದನು ಉಳಿಸಿ ಬೆಳೆಸಿ ಮೆರೆದ ಪರಮ ಪೂಜ್ಯ ಮಾಧವ || 1 || ಬಡವ ಧನಿಕ ಉಚ್ಚ ನೀಚ ಎಂಬ ಭಾವ ಅಳಿಯಲಿ ಒಂದೆ ಮಾತೆ ಮಕ್ಕಳೆಂಬ ಬಂಧು ಭಾವ ಬೆಳೆಯಲಿ ಹಿಂದು […]

Read More

ಭರತವೀರ ಬಾಲರೇ ವೈರಿ ಘನ ಸಮೀರರೆ

ಭರತ ವೀರ ಬಾಲರೇ ವೈರಿ ಘನ ಸಮೀರರೆ ಏಳಿರೇಳಿರೇಳಿರೈ ಭರತಕೀರ್ತಿ ರನ್ನರೇ || ಪ || ಹರಪ್ರಿಯಾ ಕುಮಾರರೆ ಸುರಚಮೂಪ ಧೀರರೆ ಸುರಸುಜನ ಸುರಕ್ಷಸ್ಕಂದ ತಾರಕಾಂಧ ಸೂರ್ಯರೆ || 1 || ಸದಭಿಮಾನ ಶೂರರೆ ಸದಭಿಮನ್ಯು ವೀರರೆ ಗೆಲುವ ಪಣದಿ ಜೀವವಿಡುವ ಕುರುಚಮೂ ಕೃತಾಂತರೆ || 2 || ಗುರುಗೋವಿಂದ ಪುತ್ರರೆ ಪರಮತ್ಯಾಗ ಜೀವರೆ ಹುಗಿದ ಗೋಡೆಯೊಳಗೆ ನಿಂತ ಧರಮ ಕಾಪಿನಮರರೆ || 3 || ರಾಷ್ಟ್ರಹಿತಕೆ ದುಡಿಯಿರೋ ಅಸ್ತ್ರಶಸ್ತ್ರವೆತ್ತಿರೊ ಶತೃವಾರೆ ಬರಲಿ ಕರೆದು ಶಸ್ತ್ರದೂಟ ಬಡಿಸಿರೊ […]

Read More

ಭರತವರ್ಷದಿತಿಹಾಸ ಪುರುಷನಂತರಂಗ

ಭರತವರ್ಷದಿತಿಹಾಸ ಪುರುಷನಂತರಂಗ ತೆರೆಯಲಿ ಗತ ಸಹಸ್ರ ವರ್ಷದೆಲ್ಲ ವಿಸ್ಮೃತಿಯ ತೆರೆಯ ಹರಿಯಲಿ          || ಪ || ವಿವಿಧ ವಾದ ಹೊಕ್ಕಿರಿದ ಜಗದ ಜನರದೆಯ ದೀನ ನಾದ ಅಲೆದು ಬಂದು ತಂಗಿಹುದು ದಣಿದು ಹಿಮನಗದ ನೆಲದೊಳೀಗ ಸುಭಾಗಿ ಧಾರ್ಮಿಕರೆ ಕಾರ್ಮಿಕರೆ ಕರೆ ಕೇಳಿ ಮೇಲಕೇಳಿ ಅಳಲನಾಂತ ಜರ್ಝರಿತ ಭೀತ ಮಾನವತೆಗಭಯ ಹೇಳಿ        || 1 || ಅಂದಿನಿಂದಲೇನೇನು ನಂದಿತೀ ರಾಷ್ಟ್ರ ಹೃದಯದೊಳಗೆ ನಿದ್ದೆ ಕಳೆದು ಮೇಲೆದ್ದು ಬರಲಿ ನಮ್ಮದೇ […]

Read More

ಭರತಮಾತೆ ಓ ಅನಂತ ತ್ಯಾಗ ವಿಭವ ಶೋಭಿತೆ

ಭರತಮಾತೆ ಓ ಅನಂತ ತ್ಯಾಗವಿಭವ ಶೋಭಿತೆ ಜನ್ಮದಾತೆ ಓ ಅಸೀಮ ಶೌರ್ಯಸುಮನ ಪೂಜಿತೆ || ಪ || ನಚಿಕೇತ ಬಾಲ ಭರತ ಪಾರ್ಥಪುತ್ರರಾನನ ಹೂವು ಮುಡಿಗೆ ನಿನ್ನ ಗುಡಿಗೆ ಹಸುಳೆತಳಿರ ತೋರಣ ಭೀಮ ಭೀಷ್ಮ ರಾಮ ಶ್ಯಾಮ ದಿವ್ಯನಾಮ ಕೀರ್ತನ ಶಸ್ತ್ರಕ್ವಣನ ಸಮರಗಾನ ನಿನಗೇ ನಿವೇದನ || 1 || ಭರತಮಾತೆ ಜನ್ಮದಾತೆ ಹೇ ಅನಿಂದ್ಯ ವಂದಿತೆ ಧರ್ಮಪ್ರೀತೆ ಶೀಲಸ್ನಾತೆ ಧವಳ ಯಶಾಲಂಕೃತೆ ಭಕ್ತರಮಲ ಹೃದಯಕಮಲ ನಿನ್ನ ಚರಣಕರ್ಪಣೆ ಬಾಳೆನೆಲ್ಲ ರುಧಿರವೆಲ್ಲ ಆಗಲಿದೋ ಸಮರ್ಪಣೆ || 2 […]

Read More

ಭರತಭೂಮಿಯ ಅಮರ ದಿವ್ಯಾಗ್ನಿ

ಭರತಭೂಮಿಯ ಅಮರ ದಿವ್ಯಾಗ್ನಿ ಓ ಜ್ವಾಲೆ ನಿನ್ನೊಳಿಹುದೆಲ್ಲವನು ದಹಿಸುವನಂತ ಕಾವು || ಪ || ಹಿಂದುಗಳ ಹೃದಯಾಂತರಾಳದೊಳು ಇಹ ಜ್ವಾಲೆ ಘೋರ ಜ್ವಾಲಾಮುಖಿಯೆ ನಿನಗಿಲ್ಲ ಸಾವು || ಅ.ಪ || ಭೂಮ್ಯಾಂತರಿಕ್ಷಗಳನಾವರಿಸಿ ಮಾರ್ದನಿಸಿ ಚತುರ್ವೇದ ವೇದಾಂಗಗಳ ಜ್ಞಾನ ಹರಿಸಿ ಹೃದಯ ಹೃದಯೊಳುರಿದು ಹೊಮ್ಮುತಿಹ ಓ ಜ್ವಾಲೆ ನಿನ್ನೊಳಿದೆ ಕಲ್ಲುಗಳ ಕರಗಿಸುವ ಕಾವು || 1 || ಗೀತೆಯನು ಪಡೆದಿರುವ ಅಮರತೆಯ ಕುಡಿದಿರುವ ನಿನಗೆಂತು ಬಂದೀತು ಭಯ ಸಾವು ನೋವು ಆತ್ಮದಾರಾಧಕರ ಅಧಿದೈವ ಓ ಜ್ವಾಲೆ ನಿನ್ನೊಳಿದೆ ಜಲಧಿಗಳನಿಂಗಿಸುವ […]

Read More