ಭಾಗ್ಯದಾತೆ ಜನ್ಮದಾತೆ

ಭಾಗ್ಯದಾತೆ ಜನ್ಮದಾತೆ ತಾಯೆ ವಿಶ್ವಭಾರತಿ
ದಿಗ್ ದಿಗಂತದೊಳಗೆ ಎಸೆವ ನಿನ್ನ ಧವಳ ಕೀರುತಿ || ಪ ||

ನಿನ್ನ ಪರುಷ ಒಡಲಿನಿಂದ ಸಿಡಿದ ವೀರಕೇಶವ
ಜಾತಿ ಭೂತ ಅಳಿಸಲೆಂದೆ ಕಟ್ಟಿ ಸ್ನೇಹ ಸಂಘವ
ಹಿಂದು ಬಂಧು ಒಂದು ಎಂದ ನಮ್ಮ ಹಿರಿಯ ಬಾಂಧವ
ಅದನು ಉಳಿಸಿ ಬೆಳೆಸಿ ಮೆರೆದ ಪರಮ ಪೂಜ್ಯ ಮಾಧವ || 1 ||

ಬಡವ ಧನಿಕ ಉಚ್ಚ ನೀಚ ಎಂಬ ಭಾವ ಅಳಿಯಲಿ
ಒಂದೆ ಮಾತೆ ಮಕ್ಕಳೆಂಬ ಬಂಧು ಭಾವ ಬೆಳೆಯಲಿ
ಹಿಂದು ಶಕ್ತಿ ವಿಶ್ವಶಕ್ತಿ ಎಂಬ ಘೋಷ ಮೊಳಗಲಿ
ನಿನ್ನ ಘನತೆ ವಿಮಲ ಚರಿತೆ ವಿಬುಧರೆಲ್ಲ ಹೊಗಳಲಿ || 2 ||

ನಿನ್ನ ಅಡಿಗೆ ಸಿರಿಯ ಮುಡಿಗೆ ನಮ್ಮ ರಕ್ತತರ್ಪಣ
ನಿನ್ನ ಸತತ ಕ್ಷೇಮಕಾಗಿ ನಮ್ಮ ಪ್ರಾಣದರ್ಪಣ
ಅಜಯ ಶಕ್ತಿ ಅಮಿತ ಸ್ಫೂರ್ತಿ ನೀಡಿ ಪೊರೆ ಅನುದಿನ
ದುಷ್ಟಶಕ್ತಿ ಮೆಟ್ಟಿ ನಿಲ್ಲಲೆಮ್ಮ ಹಿಂದು ಚೇತನ || 3 ||

Leave a Reply

Your email address will not be published. Required fields are marked *

*

code