ಸಂಘಗಂಗೆಯ ಭುವಿಗೆ ಇಳಿಸಿಹ

ಸಂಘ ಗಂಗೆಯ ಭುವಿಗೆ ಇಳಿಸಿಹ ನವ ಭಗೀರಥನೇ ಹಿಂದು ಮನುವನು ಒಂದುಗೊಳಿಸಿಹ ವೀರ ಕೇಶವನೇ || ಪ || ವೈದ್ಯ ಪದವಿಯ ಪಡೆದು ನೋಡಿದೆ ನಾಡ ನಾಡಿಯನು ಸಂಘದೌಷಧ ನೀಡಿಕಳೆಯಲು ಭೇದ ಭಾವವನು ವ್ಯಕ್ತಿವ್ಯಕ್ತಿಯ ಬೆಸೆದು ನಡೆಸಲು ಸಂಘ ದಾರಿಯಲಿ ಇರುಳು ಕಳೆವುದು ಬೆಳಕು ಹರಿವುದು ನಾಡ ಬಾನಿನಲಿ || 1 || ದೀನದುರ್ಬಲ ಮನಸಿನಾಳದಿ ಧೈರ್ಯ ತುಂಬಿಸಲು ಒಡೆದು ಹೋಗಿಹ ಹಿಂದು ಜನತೆಯ ಒಂದುಗೂಡಿಸಲು ನಿತ್ಯಶಾಖೆಯ ಐಕ್ಯಸೂತ್ರವ ನೀಡಿ ತೋರಿಸಿಹೆ ಹಿಂದು ದೇಶದ ಪರಮವೈಭವ ಮತ್ತೆ […]

Read More

ಶತಶತಮಾನದ ಜಯಜಯಗಾನದ

ಶತಶತಮಾನದ ಜಯಜಯಗಾನದ ಯಶ ಸಮ್ಮಾನದ ಪ್ರಹರಿ ಹೃದಯಾಕಾಶದ ಉದಯಾನಲ ಭಗವಾ ವಿಜಯವಿಹಾರಿ || ಪ || ದಿನ ದಿನದರುಣೋದಯ ರಾಗದೊಳು, ನಾಡಿಗೆ ನಡೆದಿಹ ತಪ ತ್ಯಾಗದೊಳು, ಸಿಂಧೂ ತೀರದ ಶತಯಾಗದೊಳು ಘೋಷಿತಗೊಳುತಿದೆ ದೇಶದಲಿ, ಜ್ವಾಲಾಜಿಹ್ವೆಯ ಘನಗಂಭೀರ ಸ್ವರ ಬಾಳಿನ ಗುರಿ ಬಿತ್ತರಿಸುತಲಿ ಬಾನೆತ್ತರಕೇರಿದೆ ಭಗವಾ ಪ್ರಖರ || 1 || ದಿವ್ಯ ತಪೋವನದಾಧಾರ ಧನ, ನೃಪ ಪೀಠಂಗಳ ಚೇತನ ಪ್ರಾಣ, ತವ ದಕ್ಷಿಣಾ ತನು ಮನ ಧನ ಪ್ರಾಣ ರಾಷ್ಟ್ರಾರ್ಚನೆಗರಳುತಲಿರಲಿ, ಭೂಮಾತೆಯ ಒಡಲೀಯುವ ಬಹು ಜನುಮ ಪಾವನ […]

Read More

ವೀರ ಪರಂಪರೆ ಸ್ಮರಿಸುತ

ವೀರ ಪರಂಪರೆ ಸ್ಮರಿಸುತ ಧ್ಯೇಯದ ಪಥದಲ್ಲಿ ಈ ಮಣ್ಣಿನ ಗುಣದಲಿ ಬೆಳೆಯುತ ನಾವು ಏರುವ ಜಗದಲ್ಲಿ ಹಾರುವ ನಭದಲ್ಲಿ ಮೇಲೇರುವ ಜಗದಲ್ಲಿ ಹಾರುವ ನಭದಲ್ಲಿ || ಪ || ರಾಷ್ಟ್ರದ ಉನ್ನತಿಗಾಗಿಯೆ ನಾವು ಬದುಕುವ ಎಂದೆಂದೂ ತಾಯಿಗಾಗಿ ಬಲಿತರ್ಪಣ ನೀಡಲು ಹಿಂಜರಿಯೆವು ಎಂದೂ ಹಿಂದೂ ರಕ್ಷೆಯ ದೀಕ್ಷೆಯ ಧರಿಸಿದ ನಾವೆಲ್ಲರೂ ಒಂದೂ ಅರ್ಪಿಸಿ ಬದುಕ ಆನಂದದಲಿ ಮಾತೆಯ ಮಡಿಲಲ್ಲಿ ಧ್ಯೇಯದ ನುಡಿಯಲ್ಲಿ ಮೇಲೇರುವ ಜಗದಲ್ಲಿ ಹಾರುವ ನಭದಲ್ಲಿ || 1 || ಬೆವರನು ಸುರಿಸಿ ನೆತ್ತರ ಹರಿಸಿ […]

Read More

ವಿಶ್ವವನಾಹ್ವಾನಿಸುತಿರುವೆವಿದೋ

ವಿಶ್ವವನಾಹ್ವಾನಿಸುತಿರುವೆವಿದೋ – ಬರುವವರಿದ್ದರೆ ಬರಲಿಲ್ಲಿಗೆ ಭಾರತಕೆಂದು ಸ್ನೇಹಕು ಬದ್ಧರು ಸಮರಕು ಸಿದ್ಧರು ನಾವೆಂದು || ಪ || ಶತಶತಮಾನದ ಹಗೆಯುನ್ಮಾದದ ಕಾಲನ ಹೆಡೆಗಳ ಕಾಲಡಿ ತುಳಿದು ನಿಂತ ಪರಂಪರೆ ಶತಶತ ಸಂಖ್ಯೆಯ ಸಮರವನೆದುರಿಸಿಯೂ ಇಲ್ಲುಳಿದು || 1 || ಬಾಯಾರಿದೆ ಬಾಯ್ದೆರೆದಿದೆ ಭಾರತ ಇದು ಚಿರದಾಹಿತ ಜ್ವಾಲಾಮುಖಿಯು ಅರಿದಹನಾತುರ ಘೋರ ಭಯಂಕರ ಉರಿಜಿಹ್ವೆಯ ಯಜ್ಞೇಶ್ವರ ಶಿಖೆಯು || 2 || ಹೊಂಗಿರಣದ ಹೇಮೋಜ್ವಲ ಕೇತನ ಸಾವನು ಸೋಲನು ದಹಿಸುತ ಬೆಳೆದು ಇದೊ ಹಾರಿದೆ ನಭಕೇರಿದೆ ಭಗವಾ ಬಿಸಿನೆತ್ತರ […]

Read More

ವಿಮಲ ಮಾತೆ, ಪ್ರೇಮ ದಾತೆ

ವಿಮಲ ಮಾತೆ ಪ್ರೇಮ ದಾತೆ | ದೇವಿ ಜನನಿ ಭಾರತೀ || ಪ || ಧವಳ ತೇಜ ಕೇಶರಾಶಿ | ದಿವ್ಯ ಮುಕುಟಧಾರಿಣಿ ಗಿರಿಜನೇತ್ರೆ ಅಚಲಪಾಲೆ ಭವ್ಯ ವದನ ಮಾನಿನೀ || 1 || ಸಿಂಧು ಜಲದಿ ವಿಪುಲಧಾರೆ | ಶುಭ್ರಜಲಜ ಚುಂಬಿನೀ ನಿರುತ ನೀಲ ವರ್ಣರೂಪಿ | ಚತುರ ಸೀಮ ಚಾರಿಣೀ || 2 || ಸ್ವರ್ಣ ಸೂರ್ಯ ಕೀರ್ತಿ ಕಿರಣ | ಪೂರ್ಣ ತೇಜ ವಂದಿತೆ ಸೋಮ ಸುಧಾ ವರ್ಷ ಭರಿತ | ರಜತ […]

Read More

ವಿಜಯದಾಯಿ ಸಂಕ್ರಾಂತಿಯಿದು

ವಿಜಯದಾಯಿ ಸಂಕ್ರಾಂತಿಯಿದು || ಪ || ನವ ರವಿ ಬೆಳಗು ಪಾವನ ಶುಭದಿನ ತೊಳೆಯುತ ತನುಕೃತಿ ವಾಙ್ಮತಿ ಹೃನ್ಮನ ದೋಷವ ಕಳೆಯುತ ನಿರ್ಮಲಗೊಳಿಸಿ ವ್ರತ ಕೈಗೊಳ್ಳುವ ಕಾಲವಿದು || 1 || ಗೌರವ ವೈಭವ ಕಲಿತನ ಧೀಧನ ಚಿರ ಸುಖ ತುಂಬಿದ ಇತಿಹಾಸದ ಘನ ಪುನರಪಿ ಪಡೆಯಲು ಮೇಲ್ಮೆಯಗಳಿಸಿ ಕದಲದೆ ಕಾದುವ ಕಾಲವಿದು || 2 || ಗುರಿ ಸಾಧಿಸುತಿಹ ವರವ್ರತಿಯೋಧನ ಕೊರಗಿದ ಆಶೆಯ ಪುನರುಜ್ಜೀವನ ನೂತನ ಸ್ಫೂರ್ತಿಯ ಧೈರ್ಯವ ಬೆಳೆಸಿ ದುಂದುಭಿ ಮೊಳಗಿಪ ಕಾಲವಿದು || […]

Read More

ವರ್ಧಿಸಲಿ ವೇಗದಲಿ

ವರ್ಧಿಸಲಿ ವೇಗದಲಿ ಭರತಭೂವಲಯದಾರಾಧನೆ ಯಶಭರಿತ ಧ್ಯೇಯರತ ಶತಕೃತ ಮಹಾಪ್ರಲಯಸಾಧನೆ || ಪ || ದೀರ್ಘ ಕಾಳಿಮೆ ಕಳೆದು ಧ್ಯೇಯಭಾಸ್ಕರನೊಲಿದು ಸಾಧಕರದೀ ಯಾತ್ರೆ ಫಲಿಸುವನಕ ಬಲಿದಾನ ಬಲದಾನ ಜ್ಞಾನಗಳ ಬಸಿರಿಂದ ರಾಷ್ಟ್ರರವಿ ಪುನರುದಿಸಿ ಬರುವ ತನಕ || 1 || ದೇಶ ಧರ್ಮದ ಧ್ವಜದ ಸನ್ಮಾರ್ಗದರ್ಶನದ ಪ್ರಭೆಯ ಸ್ವೀಕರಿಸಿ ಸೌಭಾಗ್ಯ ತರಲು ಖಳದನುಜ ರಾಜ್ಯದಲಿ ಅರುಣಜಲದಾಜ್ಯದಲಿ ಧ್ಯೇಯದೀಪವನಿರಿಸಿ ಉರಿಸುತಿರಲು || 2 || ಹೃದಯ ಹೃದಯದ ಬಿಂದು ಒಂದಾಗುತೈತಂದು ಪ್ರಬಲ ಸಿಂಧೂ ರೂಪ ಧರಿಸುವಂತೆ ಶಸ್ತ್ರಾಸ್ತ್ರ ಸ್ಪರ್ಧೆಯಲಿ ನಿಯತಿಯಾಣತಿ […]

Read More

ವರುಷ ಸಾಸಿರ ಮೊದಲು

ವರುಷ ಸಾಸಿರ ಮೊದಲು || ಪ || ಹರುಷ ಗುಪ್ತರ ರಥ ಪದಾತಿಗಳ ದಿವ್ಯಾಭರಣಗಳ ಸ್ವರ್ಣಯುಗ ಮುಗಿದು ಹಗಲಿಳಿದು ಮುಗಿಲೋಳಿಯೊಲು ಹಗೆ ಕವಿದು ಮಗಧ ದೇಶದ ನಗುವ ನಂದನವು ನೀರಿರದ ನೆರಳಿರದ ಮಸಣವಾಗುತಲಂದು ನಿನಗಾಯ್ತು ವನವಾಸ ಓ, ಸ್ವಾತಂತ್ರ್ಯ ಪುರುಷ ! ಮರೆಯಾಯ್ತು ರಾಮನಾಳಿದ ಭಾರತದ ಹರುಷ, ಬರಿದಾಯ್ತು ಆದರ್ಶವೆನಿಸಿದೀ ಭರತವರುಷ || 1 || ವಿಜಯನಗರದೊಳೊಮ್ಮೆ ನೀನಾದೆ ಅತಿಥಿ ರಜಪೂತಾನದಿ ಕಳೆದೆ ಹಲಕೆಲವು ದಿನವ ಕಡಲತೀರದ ಪಡುವನಾಡಿನಲಿ ಕೊಂಕಣದ ಕಾಡಿನಲಿ ಶಿವನ ಗೌರವದ ಸಹವಾಸದಲಿ ಮೆರೆದೆ; […]

Read More

ವರ ಭವ್ಯ ಭಾರತದ ನಿರ್ಭೀತ ಸಂತತಿಗೆ

ವರ ಭವ್ಯ ಭಾರತದ ನಿರ್ಭೀತ ಸಂತತಿಗೆ ಸಂಗ್ರಾಮ ಸಂಗೀತ ಹಾಡುವಾಸೆ ರಣಭೇರಿ ಕಹಳೆಗಳ ಘನ ಘೋರ ಗರ್ಜನೆಗೆ ನಲಿದು ನರ್ತಿಸು ಹೋರಾಡುವಾಸೆ || ಪ || ಮಾವನತೆಯುದ್ಧಾರ ಮಾತೃವೈಭವಕಾಗಿ ಬೆವರು ನೆತ್ತರ ಸುರಿಸಿ ದುಡಿಯುವಾಸೆ ದೇಶಹಿತ ಧರ್ಮಹಿತ ಸರ್ವಜಗಹಿತಕಾಗಿ ಕಲಿತನದಿ ಕಾದಾಡಿ ಮಡಿಯುವಾಸೆ || 1 || ಸವ್ಯಸಾಚಿಯ ತೆರದಿ ದಿವ್ಯಾಸ್ತ್ರಗಳ ಪಡೆದು ಮರಳಿ ಕುರುಕ್ಷೇತ್ರದೊಳು ನಿಲ್ಲುವಾಸೆ ಭೋರ್ಗರೆವ ಪಾಂಚಜನ್ಯದಾ ರಣಘೋಷವನು ಭೂಮಂಡಲದಿ ಬಿತ್ತರಿಸುವಾಸೆ || 2 || ಧ್ಯೇಯದೇವನ ಪದದಿ ಅರ್ಚನೆಯ ಹೂವಾಗಿ ಧನ್ಯತೆಯ ಸಂತೃಪ್ತಿ […]

Read More

ವಂದೇ ಜನನಿ ಜನ್ಮಭೂಮಿಯೆ

ವಂದೇ ಜನನಿ ಜನ್ಮಭೂಮಿಯೆ ಜಯತು ಭಾರತ ಮಾತಾ….ss || ಪ || ಸಸ್ಯ ಶ್ಯಾಮಲೆ ನೀ ಸುಜಲ ಸುಫಲೆ ನೀ ಚಿರಸುಖ ನೀಡು ಮಾತೆ….ss ಗಂಗಾ, ಸಿಂಧು, ಕೃಷ್ಣೆ, ಕಾವೇರಿ ತುಂಗಭದ್ರಾ ಪುಣ್ಯ ಗೋದಾವರಿ ಪೋಷಿಪರು ಈ ನಾಡು….ss ಉತ್ತರದೆತ್ತರ ಭವ್ಯ ಹಿಮಾಲಯ ಮೂಡಣ ಪಡುವಣ ಗಿರಿಕಂದರಾಲಯ ರಕ್ಷಿಪರು ಈ ನಾಡು….ss ಪುಣ್ಯ ಪುರುಷರ ನಿತ್ಯ ಹುತಾತ್ಮರ ಸತ್ಯ ಸನಾತನನಾಡು ….ss || 1 || ಧರ್ಮ ಸಂಸ್ಕೃತಿ ಸಂಗೀತ ಸಾಹಿತ್ಯ ಗೀತೆ ರಾಮಾಯಣ ಸಾರಿವೆ ಸತ್ಯ […]

Read More