ವೀರ ಪರಂಪರೆ ಸ್ಮರಿಸುತ

ವೀರ ಪರಂಪರೆ ಸ್ಮರಿಸುತ ಧ್ಯೇಯದ ಪಥದಲ್ಲಿ
ಈ ಮಣ್ಣಿನ ಗುಣದಲಿ ಬೆಳೆಯುತ ನಾವು ಏರುವ ಜಗದಲ್ಲಿ
ಹಾರುವ ನಭದಲ್ಲಿ ಮೇಲೇರುವ ಜಗದಲ್ಲಿ ಹಾರುವ ನಭದಲ್ಲಿ || ಪ ||

ರಾಷ್ಟ್ರದ ಉನ್ನತಿಗಾಗಿಯೆ ನಾವು ಬದುಕುವ ಎಂದೆಂದೂ
ತಾಯಿಗಾಗಿ ಬಲಿತರ್ಪಣ ನೀಡಲು ಹಿಂಜರಿಯೆವು ಎಂದೂ
ಹಿಂದೂ ರಕ್ಷೆಯ ದೀಕ್ಷೆಯ ಧರಿಸಿದ ನಾವೆಲ್ಲರೂ ಒಂದೂ
ಅರ್ಪಿಸಿ ಬದುಕ ಆನಂದದಲಿ ಮಾತೆಯ ಮಡಿಲಲ್ಲಿ
ಧ್ಯೇಯದ ನುಡಿಯಲ್ಲಿ ಮೇಲೇರುವ ಜಗದಲ್ಲಿ ಹಾರುವ ನಭದಲ್ಲಿ || 1 ||

ಬೆವರನು ಸುರಿಸಿ ನೆತ್ತರ ಹರಿಸಿ ಹೋರಾಡುವ ಕೆಚ್ಚು
ಕಲಿತನ ಮೆರೆಸಿ ರಣರಂಗದಲಿ ಶತ್ರುಗಳಾ ಚಚ್ಚು
ವಿಜಯೀ ರಾಷ್ಟ್ರದ ಅಮರ ಜನಾಂಗದ ಆರಾಧನೆ ಹುಚ್ಚು
ಧನ್ಯತೆ ಪಡೆಯುವ ಹೂವಿನ ತೆರದಲಿ ಮಾತೆಯ ಅಡಿಯಲ್ಲಿ
ಪ್ರೀತಿಯ ಒಡಲಲ್ಲಿ ಮೇಲೇರುವ ಜಗದಲ್ಲಿ ಹಾರುವ ನಭದಲ್ಲಿ || 2 ||

Leave a Reply

Your email address will not be published. Required fields are marked *