ಸಂಘ ಪ್ರವಾಹದ ಸತತ ಧಾರೆಯಲಿ

ಸಂಘ ಪ್ರವಾಹದ ಸತತ ಧಾರೆಯಲಿ
ಒಂದಾಗುವಾ ನಾವು
ಶಕ್ತಿಯ ಬೆಳೆಯಿಸುವಾ ನಾವು || ಪ ||

ಈಶನ ಶಿರದಿಂ ಇಳಿದಿಹ ಧಾರೆ
ನಾಕದಿ ಇಳೆಗೆ ಹರಿದಿಹ ಧಾರೆ
ಹೃದಯದ ಕಲ್ಮಷ ತೊಳೆಯುವ ಧಾರೆಯೊ-
ಳೊಂದಾಗುವ ನಾವು || 1 ||

ಕಠಿಣ ಶಿಲೆಗಳ ಕೊರೆಯುತ ಹರಿವ
ವಿರೋಧವೆಲ್ಲವ ನುಂಗುತ ನಡೆವ
ರಿಪು ಭಯಂಕರ ನಾದದ ಧರೆಯೊ-
ಳೊಂದಾಗುವ ನಾವು || 2 ||

ಹರಿಯುವೆಡೆಯಲಿ ತಂಪನು ತರುವ
ಹಚ್ಚ ಹಸಿರನು ತೋರುತಲಿರುವ
ಸೌಖ್ಯ ಸಮೃದ್ಧಿಯ ಹರಡುವ ಧಾರೆಯೊ-
ಳೊಂದಾಗುವ ನಾವು || 3 ||

ಬಿಂದು ಬಿಂದುಗಳೈಕ್ಯವೆ ಸಿಂಧು
ಅಜೇಯ ಶಕ್ತಿಯ ಮೂಲವಿದೆಂದು
ಜಗಕಿದ ತೋರಿದ ಸಂಘ ಪ್ರವಾಹದ-
ಳೊಂದಾಗುವ ನಾವು || 4 ||

Leave a Reply

Your email address will not be published. Required fields are marked *

*

code