ಸನ್ನುತವಾಗಲಿ ಉನ್ನತಿಗೇರಲಿ

ಸನ್ನುತವಾಗಲಿ ಉನ್ನತಿಗೇರಲಿ ಭಾರತಭೂಮಿಯ ವೈಭವವು
ರಾಷ್ಟ್ರ ಸಮಾಜಕೆ ಸೇವೆಯು ಸಲ್ಲಲಿ ಸಾರ್ಥಕವಾಗಲಿ ಜೀವನವು || ಪ ||

ಸ್ವಧರ್ಮ ಗೌರವ ಸ್ವದೇಶಪ್ರೇಮವ ದಿನದಿನವೂ ಕೃತಿಗಿಳಿಸೋಣ
ಭಗವಂತನ ವರವನ್ನೀ ಬಾಳನು ಮಾತೆಯ ಹಿತಕಾಗಿರಿಸೋಣ || 1 ||

ಒಳಹೊರಗೆಲ್ಲೆಲ್ಲಿಯು ನಡೆಯುತಲಿದೆ ಹಿಂದೂ ಜೀವನದಪಮಾನ
ಅದೊ ನೋಡಿರಿ ಕ್ಷಣಕ್ಷಣವೂ ಬರುತಿದೆ ನಮ್ಮಯ ಭುಜಬಲಕಾಹ್ವಾನ || 2 ||

ಉತ್ಸಾಹದೊಳೇಳಿರಿ ಧ್ವಂಸ ವಿನಾಶದ ತಡೆಗಾಗಿ
ಬೆಳೆಸಿದ ನೆಲಜಲದೊಳಗನುರಾಗವ ತಾಳುವ ಅನುಶಾಸಿತರಾಗಿ || 3 ||

Leave a Reply

Your email address will not be published. Required fields are marked *

*

code