ಹೃದಯ ಸಿಂಹಾಸನದ ಮೇಲೇರು ಬಾ ದೇವಿ – ಓ ಭಾರತದ ಸ್ವಾತಂತ್ರ್ಯದಧಿ ದೇವಿ ! ದಾಸ್ಯ ಶೃಂಖಲೆಯೆಲ್ಲ ನಿನ್ನಂಘ್ರಿ ಸ್ಪರ್ಶಕ್ಕೆ ಸಿಡಿದೊಡೆದು ಬೀಳುವುದು ಸೀಳು ಹೋಳಾಗಿ || ಪ || ಅಡಿಯಿಡಲು ಎಡೆದೊರೆಯದೆಂದು ಬೆದರುವೆಯೇಕೆ ಎಡೆಗೊಡರು ದ್ರೋಹಿಗಳು ಎಂಬ ಭಯವೇನು ? ಅಡಿಗೊಂದು ತಲೆ ಬುರುಡೆ ಬಲಿನೀಡಿ ನಡೆಸುವೆವು ಭಯವೇಕೆ ಬಾರಮ್ಮ ಬೆದರೆದೆಯೆ ನೀನು || 1 || ಪಟ್ಟಿಹೆವು ಕಡು ಕಷ್ಟ ಪಟ್ಟ ಕಟ್ಟಲು ನಿನಗೆ ಬೇಗನೀ ಬಲಿಪೀಠದಾ ಮೆಟ್ಟಿಲೇರಿ ಬಿಡು ದಿಟ್ಟತನದಿಂದಡಿಯ ಮುಂದಿಟ್ಟು ದುಷ್ಟರನು […]
ಹಿಂದುರಾಷ್ಟ್ರಕೆ ಬಂದೆರಗುತಲಿವೆ ತೊಂದರೆಗಳ ಮಹಾಪೂರಾ ಅಂತಿಹ ಹಿಂದು ನುಡಿಯುವನಿಂದು ಸಂಘಟನೆಯೇ ಪರಿಹಾರ || ಪ || ಅತಿಜಾತೀಯತೆ ಆರ್ಥಿಕ ಅಸಮತೆ ಸಾಮಾಜಿಕ ವಿಷಮತೆಯ ವ್ಯಥೆ ಪ್ರಾಂತವನೊಡೆಯುವ ಪಂಥವನೆಸೆಯುವ ಭಾಷಾ ದ್ವೇಷದ ನಿತ್ಯ ಕಥೆ ಸ್ವಾರ್ಥವ ಮೆರೆಸುವ ರಾಷ್ಟ್ರವ ಮರೆಸುವ ಬದುಕಿನ ಕಾಳಗ ಘನಘೋರ || 1 || ಅಸಾಮಿನಲಿ ಬುಸುಗುಡತಲಿದೆ ಅರಾಜಕತೆಯ ವ್ಯವಹಾರ ಕಾಶ್ಮೀರದ ಆ ಕಣಿವೆಗಳೆಡೆಯಲಿ ದುಷ್ಟ ವೈರಿಯ ಫೂತ್ಕಾರ ನಾಡಿನ ಉದ್ದಗಲದಿ ಪಿಡುಗಾಗಿದೆ ನೀತಿರಹಿತ ಭ್ರಷ್ಟಾಚಾರ || 2 || ಐಕ್ಯತೆಯುಳಿಸಲು ಕೇಶವ ಕಲಿಸಿದ […]
ಹಿಂದೂರಾಷ್ಟ್ರದ ಪರಮ ವೈಭವದ ಸಾಧನಮಾರ್ಗದಲೀss ನವಚೈತನ್ಯದ ನವತೇಜಸ್ಸಿನ ಶಕ್ತಿಯು ಇಹುದಿಲ್ಲೀss || ಪ || ನವೋತ್ಸಾಹ ನವಿರೇಳುತಿದೆ ಹಿಂದು ಭೂಮಿಯಾ ಕಣಕಣದಲ್ಲಿ ಸಹಸ್ರವರ್ಷದ ದೌಭಾಗ್ಯದ ಕಲೆ ಅಳಿಯುವುದು ಜನಮನದಲ್ಲಿ ಹಿಂದು ಸಮಾಜವು ವಿರಾಟಶಕ್ತಿಯ ಶೀಘ್ರದಿ ಮೆರೆವುದು ಜಗದಲ್ಲಿ ಚೇತನರೂಪಿ ಭಗವಾಧ್ವಜವು ಹಾರುವುದು ಪ್ರತಿ ಊರಲ್ಲಿ || 1 || ಸಾಧು ಸಂತರು ಹೊರಟಿಹರಿಂದು ಹಿಂದು ಚೇತನವ ಬಡಿದೆಬ್ಬಿಸಲು ತರುಣ ಕೋಟಿಯು ಕಂಕಣಬದ್ಧರು ಪರಮವೈಭವದ ರಾಷ್ಟ್ರಕಟ್ಟಲು ಜನಸಾಗರವು ಉಕ್ಕಿ ಹರಿವುದು ಸಮಾಜದೇಕತೆ ನಭಕೆ ಸಾರಲು ಬಡವ ಬಲ್ಲಿದ ಪಂಡಿತ […]
ಹಿಂದೂ ನಾವು ಭೀತಿಯದಾರದು ಜಗದೀ ನಮಗಿಂದು ಭಗವಾಧ್ವಜವೇ ಪ್ರಾಣ ನಮ್ಮದು ಜೀವನ ಪುಷ್ಪದೊಳರ್ಚಿಪೆವಿಂದು || ಪ || ಹುಕ್ಕ ಬುಕ್ಕರು ವೀರ ಶಿವಾಜಿ ಪ್ರತಾಪ ಪುಲಿಕೇಶಿ, ಹೋ ಪ್ರತಾಪ ಪುಲಿಕೇಶೀ ಪ್ರಾಣಗಳರ್ಪಿಸಿ ಹಿಂದೂ ಧರ್ಮದ ಕೀರ್ತಿಯ ಜಗದೊಳು ಬೀರಿದರಂದು || 1 || ತಳೆದೆವು ಜನ್ಮವ ಭಾಗ್ಯವಿದೆಮ್ಮಯ ಹಿಂದೂಸ್ಥಾನದಲಿ, ಹೋ…. ಹಿಂದೂ ಹಿಂದೂ ಘೋಷವ ಗೈಯುತ ಜಗವನು ಪಾವನ ಮಾಡುವೆವಿಂದು || 2 || ಹಿಂದೂ ಬಂಧುಗಳೆಲ್ಲರು ಕಲೆಯುತ ಶಕ್ತಿಯ ಗಳಿಸುತಲಿ, ಹೋ….. ಹಿಂದುತ್ವದ ಶ್ರೀ ವಿಜಯ […]
ಹಿಂದೂ ನಾವು ನೂತನ ಯುಗವನು ನಿರ್ಮಿಸಿ ನಡೆಸುವ ಸೂತ್ರಕರು ಹಿಂದೂ ವೀರರು ನಮ್ಮನು ತಡೆಯುವ ಬಂಧನವೆಲ್ಲಿದೆ, ಎದುರಾರು ? || ಪ || ಬಹು ಬಲಶಾಲಿಯು ಅಂತಃಕರಣವು ನಮ್ಮಯ ಬಲ ನಮ್ಮೊಳಗಿಹುದು ಬಹುವಿಧ ಬಾಧೆಯ ದುಃಖಕೆ ಬೆದರೆವು ಎದೆಗಾರಿಕೆ ನಮ್ಮೊಳಗಿಹುದು ಆಸುರವೃತ್ತಿಯ ರಾಗದ್ವೇಷದ ಮಾಯಾ ಮೋಹಕೆ ಹಗೆ ನಾವು ಸಾಸಿರ ಆಸೆಯ ಮುರಿಯುತ ಸುಖಸುಮ ಶಯ್ಯೆಯನೊದೆಯುತ ನಡೆಯುವೆವು || 1 || ಚಿಂತೆಯ ಕಂತೆಯ ಬೇಗೆಯು ಬಾರದು ನಿರ್ಮಲ ಕರ್ಮಠ ಮನದಲ್ಲಿ ಸಂತತ ಶಾಂತದಿ ನಡೆದಿರೆ ಒಂದರೆ […]
ಹಿಂದುಸ್ಥಾನದಿ ಹಿಂದೂ ಎನ್ನಲು ಭಯವೇತಕೆ ನಮಗೆ? ಒಂದಾಗಲು ಪಣವಿಂದೇ ತೊಡುವೆವು ಕಾಯದೆ ಕಡೆಗಳಿಗೆ || ಪ || ಬರಿಕಚ್ಚಾಟದಿ ಕರೆಸುವುದುಂಟೇ ಈ ಘಜನೀ ಘೋರೀ ಪಾವನನೆಲದಿ ಬಾಳುವುದುಂಟೇ ಅಭಿಮಾನದ ಮಾರಿ? ನೆನೆಯುವ ಹಿಂದಿನ ವೈಭವ ಜಗವನೆ ಆಳಿದ ಇತಿಹಾಸ ಮರೆಯುವ ಸೋಲನು ಗೆಲ್ಲುವ ಛಲದಲಿ ಮೂಡಲಿ ಆವೇಶ || 1 || ತುಂಬಲಿ ನದಿಗಳು, ಗಿರಿಕಾನನಗಳು ಎಲ್ಲೆಲ್ಲೂ ಹಸಿರು ನಿಲಲಿ ಮತಾಂತರ ಸೊಗಸಿನ ಜೀವನ ತಂದಿರೆ ಹೊಸ ಉಸಿರು ಮೊಳಗಲಿ ಓಂಕಾರದ ವರನಾದವು ಗಗನವನೂ ಮೀರಿ ಭಾವೈಕ್ಯದ […]
ಹಿಂದುಸ್ಥಾನದಿ ಹಿಂದುಗಳೆಲ್ಲರೂ ಒಂದೇ ನಾವು ಎನ್ನಿರೊ ಹಿಂದು ಧರ್ಮದ ಪುಣ್ಯ ಪತಾಕೆಯ ವಿಶ್ವದಿ ಹಾರಿಸ ಬನ್ನಿ ವಂದೇ ಮಾತರಂ ವಂದೇ ಮಾತರಂ || ಪ || ಹಿಂದುಸ್ಥಾನದ ಹಿಂದು ಸಂಶಯವಿನ್ನೇತಕೆ ಬಂಧು ನಮ್ಮ ಪರಂಪರೆ ಹಿಂದು, ನಮ್ಮ ರಕ್ತದ ಕಣಕಣ ಹಿಂದು ಇತಿಹಾಸವ ಸ್ಮರಿಸೋಣ ವಂದೇ ಮಾತರಂ ನಿಜಮಾರ್ಗವ ಹಿಡಿಯೋಣ ವಂದೇ ಮಾತರಂ ಇತಿಹಾಸ ಪರಂಪರೆ ಸಂಸ್ಕೃತಿ ಸ್ಮರಿಸಿ ಭಾರತ ಕಟ್ಟೋಣಾ || 1 || ರಾಮಕೃಷ್ಣರಾ ನೀತಿ ಸಿದ್ಧಾಂತದ ಭಾರತ ನೀತಿ ಶ್ರೀ ಭಗವದ್ಗೀತೆಯ ಸ್ಫೂರ್ತಿ […]
ಹಿಂದು ರಾಷ್ಟ್ರ ರಕ್ಷಿಸಲು ಖಡ್ಗ ಹಿಡಿಯೋ ಧೀರ ಶತ್ರು ಇರಲಿ ಮಿತ್ರ ಬರಲಿ ಸಾಗು ಮುಂದೆ ವೀರ || ಪ || ಅನಾದಿ ಕಾಲದಿಂದ ಬಂದ ಹಿಂದು ಸಂಸ್ಕೃತಿ ಬುನಾದಿಯಿಂದ ಎತ್ತಿಹಿಡಿದು ಧರ್ಮದಾ ವೃತಿ ಅಧರ್ಮ ಮಾರ್ಗದಲ್ಲಿ ನಡೆದ ವೀರರವನತಿ ಸ್ವಶಕ್ತಿ ಇಳಿದ ರಾಷ್ಟ್ರವೆಲ್ಲ ಪರರ ಆಹುತಿ || 1 || ರಾಷ್ಟ್ರವನ್ನು ಕಬಳಿಸುವಾ ದುಷ್ಟ ದುರಾಕ್ರಮಕರು ಮೂಲೆ ಮೂಲೆಗಳಿಗು ಹರಡಿ ವಂಚಿಸುತಲಿ ಇರುವರು ದರ್ಪದಿಂದ ವೀರತ್ವದ ನಮ್ಮ ರಾಷ್ಟ್ರ ಸುಡುವರು ಇಂಥ ಹೀನ ಜನರ ಹೃದಯ […]
ಹಿಂದು ಓ ಹಿಂದು ಹಿಂದು ಓ ಹಿಂದು ಹಿಂದುಸ್ಥಾನದಿ ವಾಸಿಪರೆಲ್ಲ ಬನ್ನಿರಿ ಡಂಗುರ ಹೊಡೆಯುವ ಇಂದು ಹಿಂದುಗಳೆಲ್ಲ ಎಂದಿಗೂ ಒಂದೆಂದು || ಪ || ಏಳು ಬಣ್ಣಗಳು ಒಂದಾಗುವಂತೆ ಸಪ್ತಸ್ವರಗಳಾ ಸಂಗೀತದಂತೆ ದೇವನೊಬ್ಬ ಹಲನಾಮಗಳಂತೆ ವಿವಿಧತೆಯಲ್ಲಿ ಏಕತೆಯಂತೆ || 1 || ಜಾತಿ ಬಂದಿದೆ ಹುಟ್ಟಿನ ಜೊತೆಗೆ ಎಂದಿಗೂ ಬೇಡ ಭೇದ ಭಾವನೆ ನೆಲಜಲ ಗಾಳಿ ಬೆಳಕುಗಳೆಮಗೆ ಸಮಾನ ಮಾನ್ಯತೆ ನೀಡುವ ಹಾಗೆ || 2 || ಶಂಖ ಜಾಗಟೆ ನಗಾರಿ ಮದ್ದಳೆ ಧರ್ಮದುಂದುಭಿ ಮೊಳಗಲಿ ಎಲ್ಲೆಡೆ […]
ಹಳೆಯಬೀಡಿನ ಬಳಿಯ ಹೊಯ್ಸಳೇಶನ ಗುಡಿಯ ಹೊರವಲಯದಲಿ ಹೋಳುಹೋಳಾಗಿ ಗೋಳಿಡುತ || ಪ || ಪಾಳು ಬಿದ್ದಿಹ ಕಲ್ಲುಗಳ ಕಣ್ದೆರೆದು ನೋಡು ! ಹಾಳು ಹಂಪೆಯ ಪಾಳಿನೊಳಗೊಮ್ಮೆ ಓಡಾಡಿ ಅಂದಳಿದ ಮಾತೆಯರ ಕಂಬನಿಯೆ ಕಲ್ಲಾಯ್ತೊ ಎಂದೆನಿಪ ಆ ಮೂಕ ರೋದನದುಲಿಯ ಕೇಳು – ಮನಗೊಟ್ಟು ಕಿವಿಗೊಟ್ಟು ಕೇಳು ; ಏಳು ಭಾರತೀಯ ಮೇಲೇಳು ! || 1 || ಬೇಲೂರ ಬಾಲೆಯರ ಬೆಡಗು ಬಿನ್ನಾಣಗಳ ಕೈಯಾರ ಕೆಡಿಸಲಾಶಿಸಿದ ಕೇಡಿಗಳಾರು ? ಜಗದಚ್ಚರಿಯ ಶಿಲ್ಪ ಸೌಂದರ್ಯ ಮೂರ್ತಿಗಳ ಅಂದಚಂದಗಳನಳಿಸಲೆಳೆಸಿದ ಖಳನಾರು […]