ಎಂಥ ಸುಮಧುರ ಬಂಧನ

ಎಂಥ ಸುಮಧುರ ಬಂಧನ ಸಂಘಕಿಂದು ಬಂದೆನಾ ನಾಡ ಕೀರ್ತಿಯ ಉಳಿಸಿ ಬೆಳೆಸಲು ಐಕ್ಯವೊಂದೇ ಸಾಧನಾ        || ಪ || ನಡೆಯಲಾರದೆ ತೆವಳುತಿದ್ದೆನು ನಡಿಗೆ ಕಲಿಸಿತು ಸಂಘವು ನುಡಿಯಲಾರದೆ ತೊದಲುತಿದ್ದೆನು ನುಡಿಯ ಉಲಿಸಿತು ಸಂಘವು ಪಡೆದೆ ಉನ್ನತ ಜ್ಞಾನ ಸದ್ಗುಣ ಲಭಿಸಿ ಸಜ್ಜನ ಸಂಗವು          || 1 || ಗುರಿಯ ಅರಿಯದೆ ತಿರುಗುತಿದ್ದೆನು ಮರೆತು ತನುವಿನ ಪರಿವೆಯ ಗುರುವು ದೊರೆಯದೆ ಮರುಗುತಿದ್ದೆನು ಪಡೆದೆ ಸದ್ಗುರು ಭಗವೆಯ ದಾರಿ ದೀಪದ […]

Read More

ಉಚ್ಚಕಂಠದೊಳು ಉಚ್ಚರಿಸಿ

ಉಚ್ಚಕಂಠದೊಳು ಉಚ್ಚರಿಸಿ ಸಜ್ಜನಶಕ್ತಿಯನೆಚ್ಚರಿಸಿ ದಿವ್ಯಮಂತ್ರವ ಘೋಷಿಸುವಾss ‘ಕೃಣ್ವಂತೋ ವಿಶ್ವಮಾರ್ಯಂ’ || ಪ || ಜಗದ ಆದಿ ಪ್ರಾಚೀನ ಸಮಯದಿಂ ಮಂತ್ರವೆಮಗೆ ಸಂಗಾತಿ ದೂರದೂರಕೂ ಕಂಪು ತುಂಬಿರುವ ಆರ್ಯಧರ್ಮದಾ ಖ್ಯಾತಿ ಕಾಲಚಕ್ರವದು ತಿರುಗಿರೆ ಭರದಿ ಮರೆಯಾಯಿತು ಆದರ್ಶ ನವ ಸೂರ್ಯೋದಯ ತಂದಿಹುದಿಂದು ಪ್ರಭಾತದುಜ್ವಲ ಸ್ಪರ್ಶ ಯುಗದ ಸವಾಲನು ಉತ್ತರಿಸಿ ಸಜ್ಜನಶಕ್ತಿಯನೆಚ್ಚರಿಸಿ || 1 || ವೇದಕಾವ್ಯ ಉಪನಿಷದ್‍ವಾಕ್ಯಗಳು ತೋರಿವೆ ಬಾಳಿನ ಗುರಿಯಾ ರಾಮಾಯಣ ಪಾವನ ಗೀತಾಮೃತ ಹರಿಸಿವೆ ಜ್ಞಾನದ ಝರಿಯಾ ಜಗದುದ್ದಗಲದಿ ಕಂಗೊಳಿಸುತಲಿಹ ಸಂಸ್ಕೃತಿಯಾ ಅವಶೇಷಗಳು ನವನಿರ್ಮಾಣಕೆ ಪ್ರೇರಣೆ […]

Read More

ಈ ಆತ್ಮ ಅವಿನಾಶಿ ಪರಮಾತ್ಮನಂಶ

ಈ ಆತ್ಮ ಅವಿನಾಶಿ ಪರಮಾತ್ಮನಂಶ ತವಕಾಯ ಕೈಲಾಸ ನೀನೇ ಮಹೇಶ ಈ ತತ್ವ ಚಿರಸತ್ಯ ಓ ಸಾಧಕಾ ಮನುಜತ್ವದಮರತ್ವದಾರಾಧಕಾ || ಪ || ಅಂಗಾಂಗಗಳ ದಾಸ ನೀನಾಗಬೇಡ ಬಂಗಾರ ಶೃಂಗಾರಗಳ ಮೋಹ ಬೇಡ ಪಂಚೇಂದ್ರಿಯದ ಸಂಚಿಗೊಳಗಾಗಬೇಡ ವಿಷಯಾದಿ ವಿಷವ್ಯಾಧಿಗೀಡಾಗಬೇಡ || 1 || ಕಡಿವಾಣ ಹಾಕಯ್ಯ ನಿನ್ನಾಸೆಗಳಿಗೆ ಬಿಡುಬಾಣ ನಿನ್ನಾರು ಅರಿವರ್ಗಗಳಿಗೆ ಹಿರಿದಾದ ಆದರ್ಶ ಕಣ್ಮುಂದೆ ಇರಲಿ ಸರಿದಾರಿಯಲಿ ಸಾಗು ಬಂದದ್ದು ಬರಲಿ || 2 || ಆರೋಗ್ಯವೇ ಭಾಗ್ಯ ಬೇರೆಲ್ಲ ಮಿಥ್ಯ ಆನಂದದಧಿಕಾರಿ ನೀನಾಗು ನಿತ್ಯ […]

Read More

ಅರ್ಪಿಸುತಿಹೆವೀ ಸೌಧವನಿಂದು

ಅರ್ಪಿಸುತಿಹೆವೀ ಸೌಧವನಿಂದು ಸಾಧಕ ನಿನ್ನಯ ಪಾವನ ಸ್ಮೃತಿಗೆ ತನುಮನಧನ ಜೀವನವ ಸಮರ್ಪಿಸಿ ಅಭಿನವ ಭಾರತ ಕಟ್ಟುವ ಕೃತಿಗೆ ಸೇವೆಯ ಸುಮಧುರ ಸಂಸ್ಕೃತಿಗೆ || ಪ || ದೃಢಸಂಕಲ್ಪದ ಇಟ್ಟಿಗೆಯಿಂದ ಕಟ್ಟಿದ ಸುದೃಢ ಭವನವಿದು ಸಾಸಿರ ಹೃದಯದ ಸಾಗರ ಮಥನದಿ ಹೊಮ್ಮಿದ ಅಮೃತಕಲಶವಿದು ಸೇವೆಯ ಸುಧೆಯನು ಉಣಿಸುವೆವಿಂದು ಬಾಯಾರಿದ ಹತಭಾಗ್ಯ ಜನತೆಗೆ ತನು ಮನ ಧನ … || 1 || ನಿನ್ನಯ ಘನ ಆದರ್ಶದ ಬದುಕಿನ ಸಾಹಸಗಾಥೆಯ ಪುಟಪುಟವೂ ಜಡತೆಯ ನೀಗಿಸಿ ಸ್ಫೂರ್ತಿಯ ನೀಡಿದೆ ಧ್ಯೇಯಮಾರ್ಗದಲಿ ಕ್ಷಣಕ್ಷಣವೂ […]

Read More

ಅರುಣನು ನಿನ್ನಲಿ ಪಡಿಮೂಡಿಹನೋ

ಅರುಣನು ನಿನ್ನಲಿ ಪಡಿಮೂಡಿಹನೋ ನೀನೇ ಅರುಣನ ಆವರಿಸಿಹೆಯೋ ತರುಣಜನಾಂಗಕೆ ಸ್ಫೂರ್ತಿಯ ತುಂಬಲು ನೀ ಭಾರತ ಭುವಿಗವತರಿಸಿದೆಯೋ ಓ ಕೇಸರಿ ಜಗವಂದ್ಯನೆ … ಗುರು ಕೇಸರಿ ಶತವಂದನೆ || ಪ || ಬಾನ್‍ಧರೆ ಬೆಸೆಯುವ ಬಾಂಧವನಾಗಿ ಕಂಗೊಳಿಸಿಹೆ ಬಾನಂಗಳದಿ ಹಿಂದುತ್ವದ ಸಂಚಾಲಕನಾಗಿ ಮೆರೆಯುತಿಹೆ ಹಿಂದೂ ನೆಲದಿ ನಿನ್ನ ವಿಹಂಗಮ ರೂಪವ ಬಿಂಬಿಸಿ ಪಾವನವಾಗಿವೆ ಸಾಗರ ಜಲಧಿ || 1 || ಗುರಿಯನು ಅರಿಯದೆ ತಿರುಗುವ ಜನಕೆ ಬಾಳಿನ ರೀತಿಯ ತೋರಿರುವೆ ದೈನ್ಯ ನಿರಾಶೆಯ ಪೊರೆಯನು ಹರಿದು ನಾಡಿನ ಭೀತಿಯ […]

Read More

ಅರಳಲಿದೆ ನವಭಾರತ ದೇಶ

ಅರಳಲಿದೆ ನವಭಾರತ ದೇಶ ಕಗ್ಗತ್ತಲ ಒಡಲಿಂದ ಬೆಳಗಲಿದೆ ಭುವಿಯಂಗುಲ ಅಂಗುಲ ಹಿಂದುತ್ವದ ಪ್ರಭೆಯಿಂದ || ಪ || ಮನುಜನ ಜನುಮವ ಸಾರ್ಥಕಗೊಳಿಸಿಹ ಮುನಿಜನರಮೃತ ವಾಣಿ ಅನುಜತ್ವದ ಆದರ್ಶವ ಸಾರಿದ ಕಾವ್ಯಗಳದ್ಭುತ ಶ್ರೇಣಿ ಚಿಮ್ಮಲಿದೆ ಚೈತನ್ಯದ ಚಿಲುಮೆ ಪ್ರಾಚೀನದ ನೆಲೆಯಿಂದ || 1 || ಶತಶತಮಾನದ ಆ ಗತವೈಭವ ಭೂಗತವಾಗುವ ಮುನ್ನ ಜಾಗೃತಗೊಳಿಸಿ ಸುಷುಪ್ತ ಜನಾಂಗವ ಸಮಯವು ಮೀರುವ ಮುನ್ನ ಉದಿಸಲಿದೆ ನವ ಹಿಂದುಸಮಾಜ ಶತ ಅವಶೇಷಗಳಿಂದ || 2 || ಹಬ್ಬಿದ ಮಬ್ಬಲಿ ಗುರಿಯನು ತಪ್ಪಿದ ಮೌಢ್ಯವನಪ್ಪಿದ […]

Read More

ಹೊಸ ದ್ವೀಪದಿ ಹೊಸ ದೀಪವ ಸೃಜಿಸುವಾ

ಹೊಸ ದ್ವೀಪದಿ ಹೊಸ ದೀಪವ ಸೃಜಿಸುವ ಜೀವನ ಜಲಧಿಯ ನಾವಿಕನೇ || ಪ || ಹೊಸ ಹೊಸ ಗ್ರಹದೊಳು ಗೃಹಗಳ ರಚಿಸುವ ಮನ ಗಗನದ ವೈಮಾನಿಕನೇ || ಅ.ಪ || ಕಾದಿವೆ ಕಡಲಾಳದಿ ಜಲಚರಗಳು ಅಲೆಗಳು ಶಿಲೆಗಳು ಜೋಪಾನ ತಾರಾಲೋಕದಿ ಮಹಲುಗಳೆನಿತೋ ಮರೆಯಾಗಿಹುದಲ ಸೋಪಾನ || 1 || ನಿಶೆ ನೀರದ ಬಿರುಗಾಳಿಯು ಕವಿಯಲು ಸಾಹಸವೊಂದೇ ಪ್ರಿಯ ಬಂಧು ಸಾಗರದೇರಿಳಿತಕೆ ತೆರೆ ಹೊಡೆತಕೆ ಯಾತ್ರೆಯ ತೊರೆಯದಿರೆಂದೆಂದೂ || 2 || ಅಗಸದಂಚಿನ ಮುಗಿಲಿನ ಮಿಂಚಿನ ಸಂಚಾರವೆ ಮಿದುಳೊಳಗಿರಲು […]

Read More

ಹೊಣೀ ಹೊತ್ನಡೀ ಜರಾ ನೀ ಮುಂದ ಮುಂದ

ಹೊಣೀ ಹೊತ್ನಡೀ ಜರಾ ನೀ ಮುಂದಾs ಮುಂದಾs ತುಸ ಮುಂದಾ ಮುಂದಾs ಮಾಡೀ ನಡೀ ನೀನು ಈಗ ಛಂದಾ || ಪ || ರಾಷ್ಟ್ರದ ಭವಿತವ್ಯ, ತಿಳ್ಕೋ ನಿ ಹ್ಯಾಂಗ ? ನುಡಿದಂತೆ ನಡಿಯಾಲು ಕಲಿ ನೀ ಈಗ ಮಾಡೋಣ್ಣಡೀ, ರತ್ ಆಗೋಣ್ಣಡೀ ಹಾಡಿ ಕೂಡಿ ಪಾಡಿ ಕಾಪಾಡೋಣ್ಣಡೀ || 1 || ಓ ದಾರಿಗನೇ ನಿನಗ್ಯಾತರ್ ಚಿಂತೀ ಕಲ್ಲ ಗುಡ್ಡಧಾಂsಗ ನೀ ಖಡೀ ನಿಂತೀ ಬೀಸ್ತದ್ ಗಾಳಿ, ಮ್ಯಾಲೆ ಹೊಡಿತದ್ ಮಳೀ ಆದ್ರೂssಭಿ ನಿಲ್ಲಪ್ಪ ಖಡೀ […]

Read More

ಹೊಂಬಣ್ಣದ ಬೆಳಕಿನಲ್ಲಿ

ಹೊಂಬಣ್ಣದ ಬೆಳಕಿನಲ್ಲಿ ಎಳೆ ಬಿಸಿಲಿನ ಕಿರಣದಲ್ಲಿ ಓಂಕಾರದ ರೂಪದಲ್ಲಿ ಭಾಗ್ಯೋತ್ಸವ ನಿನಗೆ ಭಾಗ್ಯೋತ್ಸವಾ ಭಾಗ್ಯೋತ್ಸವಾ ತಾಯೆ ಭಾಗ್ಯೋತ್ಸವಾ || ಪ || ಹಿಮಗಿರಿಯ ಮಾಲೆಯಾಗಿ ಸಾಗರವೇ ಸೆರಗಾಗಿ ಪೈರು ಪಚ್ಚೆ ಹಸುರಾಗಿ ನಿಂತಿರುವೆ ಭವ್ಯವಾಗಿ ಭಾಗ್ಯೋತ್ಸವ ನಿನಗೆ ಭಾಗ್ಯೋತ್ಸವಾ ಭಾಗ್ಯೋತ್ಸವಾ ತಾಯೆ ಭಾಗ್ಯೋತ್ಸವಾ || 1 || ಕವಿ ಹಾಡಿನ ರಾಗದಲ್ಲಿ ಮರಿದುಂಬಿಯ ಗುಂಗಿನಲ್ಲಿ ಕೋಗಿಲೆಯ ಕಂಠದಲ್ಲಿ ಕಂದಮ್ಮನ ಅಳುವಿನಲ್ಲಿ ಭಾಗ್ಯೋತ್ಸವ ನಿನಗೆ ಭಾಗ್ಯೋತ್ಸವಾ ಭಾಗ್ಯೋತ್ಸವಾ ತಾಯೆ ಭಾಗ್ಯೋತ್ಸವಾ || 2 || ಕೇಸರಿಯ ವರ್ಣದಿಂದ ಕಂಗೊಳಿಪ […]

Read More

ಹೇ ತಾಯೇ ಹೊರಟಿಹೆನು ಈ ನಾಡ ಗಡಿಗೆ

ಹೇ ತಾಯೇ ಹೊರಟಿಹೆನು ಈ ನಾಡ ಗಡಿಗೆ ಜಯ ಮಾಲೆಯ ನಾ ತರುವೆ ನಿನ್ನಾ ಮುಡಿಗೆ ನಿನ್ನಾ ಹಾಡುವವರಿಗೆ ನಾ ನಮಿಸುತಿಹೆನು ಯಶಗೊಳಲಿ ನಾ ಎಂದು ಹರಸು ನೀನು || ಪ || ಈ ನಾಡ ಗಡಿಯಲ್ಲಿ ಆ ದುಷ್ಟ ಸಂಚು ಅವಗೆ ನಾ ಮಾಡುವೆನು ಸರಿಯಾದ ಹೊಂಚು ವೀರ ರಕ್ತವ ಪಡೆದ ಮಾತೆಯುsss ನೀನು ನಿನ್ನೆದೆಯ ಹಾಲಿನಲಿ ಬೆಳೆದೆss ನಾನು || 1 || ಹಿಂದೊಮ್ಮೆ ಬಂದಿತ್ತು ಸ್ವಾತಂತ್ರ್ಯ ಕರೆಯು ಹಿರಿಮೆಯಲಿ ಬೆಳೆದಿತ್ತು ಈ ನಾಡ […]

Read More