ಭಾರತಿ ನಿನ್ನಯ ಅಡಿಗಳಿಗೆ ಪೊಡಮಡುವೆ ನಾ ಅಡಿಗಡಿಗೆ ಜನನಿ ಓ ಜನನೀ ಜನನಿ ಜನ್ಮಭೂಮಿ || ಪ || ಜನ್ಮ ಜನ್ಮದಾ ಪುಣ್ಯದ ಫಲವು ಕರುಣೆಯ ತೋರಿದ ಒಲವಿನ ಬಲವು ಬಂದಿಹೆ ಧರೆಗೆ ನಿನ್ನೊಡಲೊಳಗೆ ಕೋಟಿ ಕೋಟಿ ಜನ ಸೋದರರೆನಗೆ || 1 || ಮೇಲೆ ಹಿಮಾಚಲ ಕಾಲಡಿ ಕಡಲು ಬಂಗಾರದ ನಿಧಿ ತುಂಬಿದ ಒಡಲು ಶ್ರೀಗಂಧದ ಸೌಗಂಧವು ತುಂಬ ಏನೆಂಬೆನು ನೀ ಸ್ವರ್ಗದ ಬಿಂಬ! || 2 || ಉಜ್ವಲ ಕಲೆ ಸಂಸ್ಕೃತಿಗಳ ನಾಡು ಕೆಚ್ಚೆದೆ […]
ಧೀರ ಪಥವನೆ ಹಿಡಿದು ವಿಜಯ ನಿಶ್ಚಿತವೆಂದು ಅಸುರ ಸಂತಾನವನು ಅಳಿಸಲೆಂದು ಹೊರಟೆವು ರಣಾಂಗಣಕೆ ಕಾದಲೆಂದು ಕೀರ್ತಿಕಳಶವ ತಾಯ್ಗೆ ತೊಡಿಸಲೆಂದು || ಪ || ರಣಭೇರಿ ಗರ್ಜನೆಯು ಸಿಡಿಲ ಕರತಾಡನವು ಸಾಹಸದ ಪಡೆ ನಮದು ಅಮರವಂಶ ಮೃತ್ಯುಂಜಯರು ನಾವು ಈಶ್ವರಾಂಶ || 1 || ವೀರವ್ರತಿಗಳು ನಾವು ಸಾವಿರದ ಸಂತತಿಯು ಭರತಮಾತೆಯ ಅಭಯ ಖಡ್ಗಹಸ್ತ ಸಮರ ಭೂಮಿಯು ನಮಗೆ ತೀರ್ಥಕ್ಷೇತ್ರ || 2 || ಭರತಕುಲದಭಿಮಾನ ತರುಣಗಣದುತ್ಥಾನ ಮನುಕುಲಕೆ ಹಿಂದುತ್ವದಭಯದಾನ ಮೊಳಗಲಿದೆ ಭಾರತಿಯ ವಿಜಯಗಾನ || 3 ||
ಮುಂದೆ ಬರಲಿ ತರುಣ ಶಕ್ತಿ ಮನವನೊಂದುಗೂಡಿಸಿ ‘ವಂದೇಮಾತರಂ’ ಎಂಬ ಪರಮಮಂತ್ರ ಘೋಷಿಸಿ || ಪ || ದೇಶಕಾಗಿ ಪ್ರಾಣತೆತ್ತ ದಿವ್ಯ ಆತ್ಮವೆಲ್ಲವೂ ಕೇಳುತಿಹವು ತಮ್ಮ ಶೌರ್ಯ ತ್ಯಾಗವೆಲ್ಲಿ ಹೋದವು ಏಳಿ ಮೇಲಕೇಳಿ ಕಾಲ ಕಳೆವ ಸಮಯವಲ್ಲವು ಹಿಂದೆ ಸಾಗಲೆಮ್ಮ ತುಳಿವ ಧೂರ್ತ ಶಕ್ತಿಯೆಲ್ಲವು || 1 || ಗುರಿಯ ತೋರಿ ಗುರುವೆ ಇದ್ದ ಬೆನ್ನ ಹಿಂದೆ ರಕ್ಷೆಗೆ ಕುರಿಯ ತೆರೆದಿ ಕೈಯ್ಯ ಚಾಚುತಿಹರು ಇಂದು ಭಿಕ್ಷೆಗೆ ಕರೆದು ಅನ್ನ ನೀಡಬಲ್ಲ ಬಲವು ಇಲ್ಲಿ ತುಂಬಿದೆ ಜರಿದು ಕೀಳುಗೈವಿರೇಕೆ […]
ಮಾಧವನ ಚಿತ್ತದಲ್ಲಿ ಅರಳಿದ್ದ ಚಿತ್ರಗಳೇ ನನ್ನಲ್ಲೂ ನೆಲಸ ಬನ್ನಿ ಜಗದಗಲ ಭಿತ್ತಿಯಲಿ ಭಾರತಿಯನೆತ್ತರಿಪ ಕಾಯಕವ ಕಲಿಸ ಬನ್ನಿ || ಪ || ಋಷಿಯವನು ನಡೆದಿದ್ದ ಸ್ಥಿರಪಥವ ಹಿಡಿದಿದ್ದ ಗುರಿಯೆಡೆಗೆ ನೆಟ್ಟ ದೃಷ್ಟಿ ಕೇಶವನು ಕಲಿಸಿದ್ದ ಸಂಘಸೂತ್ರದಿ ಹೆಣೆದ ಯುವ ಮನವ ಮುಟ್ಟಿ ತಟ್ಟಿ ಅವನ ಕಾರ್ಯದ ತುಡಿತ ಸರ್ವಸ್ಪರ್ಶದ ಮಿಡಿತ ನನ್ನಲ್ಲೂ ನೆಲೆಸ ಬನ್ನಿ || 1 || ದೇಶ ಒಡೆದಾ ಗಳಿಗೆ ನಡೆದೆ ನೊಂದೆಡೆ ಬಳಿಗೆ ಸಂತ ಸಂತೈಸಿ ನಿಂತ ಸಂಘ ಮುರಿವ ತಂತ್ರಗಳಿಗೆ ಹಿಡಿದ […]
ಧ್ಯೇಯದಾ ಹಾದಿಗೆ ಬಾಳ ನಡಿಗೆ ಸಾಗಿದೆ ಭಾವ ಹಣತೆ ಉರಿದಿದೆ ತಾಯ ಗುಡಿಯ ಬೆಳಗಿದೆ || ಪ || ಕರದಿ ಸಂಘಸೂತ್ರ ಹಿಡಿದು ಭರದಿ ಹಿಂದುತೇರನೆಳೆದು ತರತಮ ವಿಷ ಕಳೆಯ ಕೀಳಿ ಪರಕೀಯತೆ ಪದರ ಸೀಳಿ ಸಂಘಮಂತ್ರ ಜಪಿಸುತಾ ಬಂಧುಭಾವ ಬೆಳೆಸುತಾ || 1 || ಸ್ವಾರ್ಥ ಭಾವ ದೂರಗೊಳಿಸಿ ಕೀರ್ತಿಮೋಹ ಬದಿಗೆ ಸರಿಸಿ ಅರಳಿಸುತಲಿ ಶುದ್ಧ ಶೀಲ ಅರ್ಪಿಸುತಲಿ ಬದ್ಧ ಬಾಳ ಬನ್ನಿ ತಾಯಸೇವೆಗೆ ಉರಿಸಿ ಕಾಯ ದೀವಿಗೆ || 2 || ವ್ಯಕ್ತಿ ವ್ಯಕ್ತಿಗಳನು […]
ಜೀವನ ತುಂಬಿದೆ ವಿಫಲತೆಗಳ ರಾಶಿ ಸಫಲತೆ ಹತ್ತಿರ ಹತ್ತಿರವಾಗುತ್ತಲೆ ದಾರಿಯಿಂದ ದೂರಕೆ ಬಿಟ್ಟೆನು ನೂಕಿ; ಏನಿದು, ಮೂರ್ಖತನಯೇನಿದು? …. ಅಲ್ಲಲ್ಲ! ಸಫಲತೆ ವಿಫಲತೆಗಳ ನೀತಿ ನಾನರಿಹುದೇ ಬೇರೆಯ ರೀತಿ ಕ್ರಾಂತಿಯ ಶೋಧಕ ನಾ ಮನಸಾರೆ ಮೆಚ್ಚುವುದಿಚ್ಛಿಸುವುದೇ ಬೇರೆ ಅವಿರತ ಸೇವೆಯ, ತ್ಯಾಗದ ನವನಿರ್ಮಾಣದ ದಾರಿ ನಾ ಸಮಗ್ರ ಕ್ರಾಂತಿಯ, ಸಂಘರ್ಷದ ಪಥ ಸಂಚಾರಿ ಜಗವಾವುದ ವಿಫಲತೆಯೆನ್ನುವುದೋ ಅದೆ ಶೋಧಕನೇರಿದ ಮಜಲುಗಳು ಗಗನದವರೆಗೂ ಎಣಿಕೆಗೆ ನಿಲುಕದ ಮಹಲುಗಳು ಏರಲು ಬೇಕೆನಿಸಿತೋ ಗುರಿ ಸೇರಲು ಸೋಪಾನಗಳು ಎದುರಾಗುವ ತೊಡಕಿಗೆ, ದಣಿವಿಗೆ […]
ಮಗೂ ! ನೀನು ಪುಸ್ತಕದಲ್ಲಷ್ಟೇ ಓದಿದೆ ನಾನೊ-ಕಣ್ಣಾರೆ ಕಂಡಿದ್ದೆ, ತಂದೆ ಮಗ ಹೊತ್ತು ತರುವುದನು, ದೂರದ ಪಯಣ, ಅರಿಯದ ಹಾದಿ, ಕಲ್ಲುಮುಳ್ಳಿನ ನಡೆ, ಬನ್ನ ಬವಣೆಯ ದಿನ, ಇಳಿವ ಬೆವರು, ಸುರಿವ ರಕುತ ಬಾಗಲಿಲ್ಲ ದೇಹ, ಸೋಲಲಿಲ್ಲ ಜೀವ, ತಂದೆ ಮಗ ಹೊತ್ತು ಹೊತ್ತು ತಂದಿದ್ದರು ಕತ್ತೆ, ಮಗೂ!, ನಾನೊ, ಪಡುವಲದಂಚಿನ ಸವೆದ ಚಂದಿರ ನೀನೊ ಉದಯಗಿರಿಯಲಿ ಕಣ್ತೆರವ ನೇಸರು ಉತ್ಸಾಹ ಸಾಹಸದ ಉರಿವ ನಾಲಗೆ ನಿನ್ನೆದೆಯನಾಳಿದೆ. ಕಾಲ ಬೆತ್ತಲಾಗಿ ನೀಡಿ ನಿಂತಿದೆ. ನಿನಗೆ ಬೇಕೇ ಬೇಕಣ್ಣ […]
ನಿನ್ನ ಗದ್ದೆಗೆ ನೀರು ತರುವ ನಾಲೆಗಳೆಲ್ಲ ಬಂದು, ಬೇಕಾದದ್ದು ಬಿತ್ತಿ ಬೆಳೆದುಕೋ ಬಂಧು ಬೆನ್ಮೂಳೆ ಮುರಿದು ಬಳಿಕ ಬಡಕೊಳ್ಳುತ್ತೇನೆ ಬಾನುಲಿ ; ಎರಡೂ ಕಾಲಿನ ಮೆಲೆ ನಿಲ್ಲಲೇ ಬೇಕೆಂಬ ತೊದಲುಲಿ ಆನತಾ ವಿರೋಧಿದಳಗಳ ಪಿತೂರಿ. ಕಾನೂನು ಮನ್ನಿಸುವ ಜನ ನಾಲ್ಕೂ ಕಾಲಲ್ಲಿ ನಡೆದರೇ ಚಂದ, ಬೀಳುವಪಾಯ ಕಮ್ಮಿ, ಸರ್ವದಾ ಸಾಷ್ಟಾಂಗ ಪ್ರಣಾಮದ್ದೇ ಭಂಗಿ. ಹೇಳಿದ ಹಾಗೆ ಕೇಳಿ ಬಾಲ ಮುದುರಿ ಕುಳಿತರೇನೇ ಲಾಭ : ಹೊಟ್ಟೆಗಿಷ್ಟು ಹಿಟ್ಟು ಜುಟ್ಟಿಗೆ ಪ್ಲಾಸ್ಟಿಕ್ ಮಲ್ಲಿಗೆ ಸಿಗುತ್ತದೆ ಹೆದರಬೇಡಿ ನಾಳೆಗೆ. ಸ್ವಾತಂತ್ರೋತ್ಸವಕ್ಕೆ […]
ಸಾವಿರದಳ ಕಮಲಿನಿ ಓ ಭಾರತಿ ತಾಯೆ ನಿನಗೆ ಇದೋ ಜೀವದಾರತಿ || ಪ || ನೂರು ನುಡಿಗಳಿಂದ ಕಂದರನ್ನು ಕರೆವ ವಾಗ್ವಿದೆ ಹಲವು ರೀತಿ ಹಾಡಿ ಹಾಲನೂಡಿ ಪೊರೆವ ಶಾರದೆ ಕೈಯ ಹಿಡಿದು ಅಡಿಯನಿರಿಸಿ ಮುನ್ನಡೆಸುವಧಾರಿಣಿ ತೊದಲ ನುಡಿಸಿ ಕೇಳಿ ಹರ್ಷ ತಾಳಿ ನಲಿವ ತಾರಿಣಿ… || 1 || ತಪ್ಪಿದಾಗ ಮಕ್ಕಳು ರಣ ಚಂಡಿಯಾಗಿ ಖಂಡಿಸಿ ಮತ್ತೆ ಕರೆದು ಲಲ್ಲೆಗರೆದು ಕಣ್ಣನೊರೆಸಿ ಮುದ್ದಿಸಿ ನಮ್ಮ ಸೋದರತ್ವವನ್ನು ನಮಗೆ ಮನನಗೊಳಿಸುತ ಮನೆಯ ನಿಲ್ಲಿಸಮ್ಮ ತಾಯೆ ನಮ್ಮನ್ನೆಲ್ಲ ಒಲಿಸುತಾ […]
ಯೋಗೇಶ್ವರ ಕೃಷ್ಣನಂತೆ ರಾಷ್ಟ್ರಶಕ್ತಿ ಎದ್ದಿದೆ ಧನುರ್ಧಾರಿ ಪಾರ್ಥನಂತೆ ವೀರ ಘೋಷ ಗೈದಿದೆ || ಪ || ಏಕಪುರುಷನಂತೆ ದೇಶ ತಲೆಯನೆತ್ತಿ ನಿಂತಿದೆ ವೈರಿಗದು ಕಾಲಪಾಶವಾಗಿ ಕತ್ತು ಸುತ್ತಿದೆ || 1 || ಧರ್ಮವನ್ನೆ ಹಿಡಿದು, ತನ್ನ ಶೌರ್ಯಮೆರೆದ ವೈರಿಯು ನಾಶವನ್ನು ಕರೆದು ಕರಗಿದಂತೆ ಆಯ್ತು ಕೃತ್ಯವು || 2 || ಜಗದ ಜನಸ್ತೋಮವೆಲ್ಲ ನಮ್ಮ ಹಿಂದೆ ನಿಂತಿದೆ ಸತ್ಯಧರ್ಮ ಶಾಂತಿ ಪ್ರೀತಿ ನಮಗೆ ಶಕ್ತಿ ಇತ್ತಿದೆ || 3 || ದೇಶಕ್ಕಾಗಿ ಸರ್ವತ್ಯಾಗಗೈಯೆ ಜನರು ಸಿದ್ಧರು ಅಂತಿಮ […]