ಧ್ಯೇಯದಾ ಹಾದಿಗೆ ಬಾಳ ನಡಿಗೆ ಸಾಗಿದೆ
ಭಾವ ಹಣತೆ ಉರಿದಿದೆ ತಾಯ ಗುಡಿಯ ಬೆಳಗಿದೆ || ಪ ||
ಕರದಿ ಸಂಘಸೂತ್ರ ಹಿಡಿದು
ಭರದಿ ಹಿಂದುತೇರನೆಳೆದು
ತರತಮ ವಿಷ ಕಳೆಯ ಕೀಳಿ
ಪರಕೀಯತೆ ಪದರ ಸೀಳಿ
ಸಂಘಮಂತ್ರ ಜಪಿಸುತಾ ಬಂಧುಭಾವ ಬೆಳೆಸುತಾ || 1 ||
ಸ್ವಾರ್ಥ ಭಾವ ದೂರಗೊಳಿಸಿ
ಕೀರ್ತಿಮೋಹ ಬದಿಗೆ ಸರಿಸಿ
ಅರಳಿಸುತಲಿ ಶುದ್ಧ ಶೀಲ
ಅರ್ಪಿಸುತಲಿ ಬದ್ಧ ಬಾಳ
ಬನ್ನಿ ತಾಯಸೇವೆಗೆ ಉರಿಸಿ ಕಾಯ ದೀವಿಗೆ || 2 ||
ವ್ಯಕ್ತಿ ವ್ಯಕ್ತಿಗಳನು ಬೆಸೆದು
ಭಕ್ತಿ ಶಕ್ತಿಗಳನು ಹೊಸೆದು
ಕುಡಿದು ವೀರವ್ರತದ ಸುಧೆ
ದುಡಿದು ಸೃಜಿಸಿ ಕಾರ್ಯಪಡೆ
ಮಾಡಲಿಹೆವು ನನಸು ನಾಡಿನೇಳ್ಗೆ ಕನಸು || 3 ||