ಭರತಮಾತೆಯ ಮಮತೆಯುಡುಗೊರೆ ಯೋಗವೆಂಬೀ ವಿಸ್ಮಯ ಅರಿತು ಜಗವು ಅಪ್ಪಿಕೊಂಡಿದೆ ಫಲವು ಅದ್ಭುತ ಅಕ್ಷಯ || ಪ || ಇರದು ಇತಿಮಿತಿ ಗುರು ಪತಂಜಲಿ ತೋರಿಕೊಟ್ಟರು ಹಾದಿಯ ಭರದಿ ಕಾಡಿಗೆ ಜನತೆಯೆಲ್ಲೆಡೆ ವಿಶ್ವ ಯೋಗದ ಸುದಿನವ || ಅ.ಪ || ಬರಿಯ ತನುವನು ಮಣಿಪ ಪರಿಣಿತಿ ಅಷ್ಟೆ ಅಲ್ಲವು ಯೋಗವು ಹರಹು ಶರಧಿಯು ಮುಗಿಲ ಪರಿಧಿ ಉತ್ತುಂಗ ಮೇರು ಶಿಖರವು ಉಸಿರು ಉಸಿರಲಿ ಬಸಿರಿನಲ್ಲೂ ಜೀವ ಚೇತನ ವೃದ್ಧಿಯು ನೂರು ಜಂಜಡ ದೇಹಕೆಲ್ಲ ಇಂದು ಬೇಕಿದೆ ಧ್ಯಾನವು || […]
ಯೋಗದ ಬೆಳಕಲಿ ಸಾಗೋಣ ಸುಯೋಗಿಗಳಾಗಿ ಬದುಕೋಣ ಯೋಗಾಚಾರ್ಯರ ಸ್ತುತಿಸೋಣ ಪತಂಜಲಿ ಮುನಿಗಳ ನಮಿಸೋಣ || ಪ || ಅಷ್ಟಾಂಗ ಯೋಗದ ಆಲದ ಮರದಡಿ ಅಷ್ಟಮದಗಳ ತ್ಯಜಿಸುತಲಿ ಅನುದಿನ ಯಮ-ನಿಯಮಗಳೊಡಗೂಡಿ ರಾಷ್ಟ್ರದ ಧ್ಯಾನವ ಮಾಡೋಣ || 1 || ನರನಾಡಿಗಳೆಲ್ಲವ ತುಂಬಿಹ ಉಸಿರಿಗೆ ನವ ಚೈತನ್ಯವ ನೀಡುತಲೀ ತನು-ಮನ-ಪ್ರಾಣಗಳೆಲ್ಲವ ನಾವು ಭಾರತ ಮಾತೆಗೆ ನೀಡೋಣ || 2 || ಯೋಗದ ದಿನವಿದು ಸಂಕೇತ ಎನ್ನುತ ಜಗದಗಲವು ಹಣತೆಯ ಹಚ್ಚೋಣ ಅರಿವಿನ ಪ್ರತ್ಯಾಹಾರದ ಜೊತೆಯಲಿ ನಾಡಿನ ಕೀರ್ತಿಯ ಮೆರೆಸೋಣ || […]
ವ್ಯಾಯಾಮ ಯೋಗದಾ ಸರಳ ಕ್ರಮ ತಿಳಿಯುವಾ ಅಣ್ಣಾ ತಮ್ಮಾ ಎಲ್ಲಾ ಬನ್ನಿ || ಪ || ಮೇಲೆತ್ತಿರಿ ಹಿಮ್ಮಡಿಯ ಕಾಲಿಂ ಮಿತಕಾಲ್ ನಿಂತಲ್ಲಿಯೆ ಓಟ ಕಾಲ್ಬೆರಳಿನ ಸ್ಪರ್ಷ || 1 || ಹೆಜ್ಜೆಯ ಕೆಳಗೂರಿ ಮೇಲೆತ್ತಿರಿ ನಂತರವೆ ಬಾಗಿಸಿ ಮಂಡಿಯನು ತೂಗಿಸಿ ದೇಹವನು || 2 || ಪೂರ್ಣ ಬೈಠಕ್ ಹೊಡೆದು ಬಾಗಿಸಿ ಸೊಂಟವನು ಅರಳಿಸಿ ಬಾಹುವನು ಮಡಿಸಿ ಮೊಣಕೈಗಳನು || 3 || ಕೊರಳನು ಬಾಗಿಸಿ ನೆಲದೊಳು ಕೈಯಿಟ್ಟು ಮಾಡಿರಿ ಶ್ವಸನವ ನೆನಪಿಟ್ಟು ನೆನಪಿಟ್ಟು || […]
ಮನದ ದಮನವಿದಲ್ಲ ಪ್ರಶಮನದ ಸದುಪಾಯ ಚಿತ್ತಚಾಂಚಲ್ಯವನು ತಡೆವ ಭಿತ್ತಿ ಸ್ವಸ್ಥತನು ಮನದಲ್ಲಿ ಶಕ್ತ ರಾಷ್ಟ್ರೀಯತೆಯು ಏಕಾತ್ಮಭಾರತದ ದಿವ್ಯ ದೃಷ್ಟಿ || ಪ || ಯಮ ನಿಯಮ ಆಸನವೇ ಗುರಿಯಲ್ಲ ಮಾರ್ಗವಿದು ಮನಸುಗಳ ಸಮನಿಸುವ ಸಮಾಜಯೋಗ ಧ್ಯಾನ ಜಪಗಳ ಆಚೆ ಶ್ವಾಸ ಸಾಧನೆಯಾಚೆ ವಿಶ್ವವನೆ ಜೋಡಿಸುವ ವಿಶ್ವಾಸ ಯೋಗ || 1 || ಶೂನ್ಯತೆಯ ಚಿಹ್ನೆಯದು ಪೂರ್ಣತೆಯ ಪ್ರತಿರೂಪ ತ್ಯಾಗಮಾರ್ಗದಿ ಪೂರ್ಣದೆಡೆಗೆ ಪಯಣ ಉನ್ನತದ ಚಿಂತನೆಯ ಸರಳ ಸುಂದರ ಬದುಕು ವಿಶ್ವದೇಕಾತ್ಮತೆಯ ಭಾವಯಾನ || 2 ||
ನಡೆಯುವಾ ನಡೆಯುವಾ ಮುಂದೆ ಮುಂದೆ ನಡೆಯುವಾ ಯೋಗ ಯೋಗದಿಂದ ನಡೆದು ಯೋಗಚಿತ್ತರಾಗುವ || ಪ || ರಾಗ ದ್ವೇಷಗಳನು ತೊರೆದು ಮಾಗಿದಂಥ ಮನವ ಪಡೆದು ಸಾಗಿದಂತೆ ಗೆಲುವ ನಲಿವ ತ್ಯಾಗಬಲವ ಹೊಂದುವಾ || 1 || ಮಿಡಿವ ಎದೆಯ ಹಿಡಿತ ಗಳಿಸಿ ತುಡಿವ ಮನಕೆ ದೃಢತೆ ಕಲಿಸಿ ಜಡತೆ ಪಡೆದ ತನುವ ದುಡಿಸಿ ಪ್ರಾಣಶಕ್ತಿಗಳಿಸುವಾ || 2 || ಯೋಗೀಶ್ವರ ಯೋಗೇಶ್ವರ ಪತಂಜಲಿಯ ಭಾರತಕೆ ಬಾಗುತ್ತಲಿ ಸಾಗುತ್ತಲಿ ಭಾರತರೇ ಆಗುವಾ || 3 || ಪಂಚತಂತ್ರದಾ ಪ್ರಪಂಚ […]
ಬೆಳಗಿನ ಜಾವದಿ ಬಲಗಡೆ ಹೊರಳುತ ಮೇಲಕೆ ಏಳೋ ನನ ಕಂದಾ…. ಕರಗಳನುಜ್ಜಿಕೋ ಕಣ್ಗಳಿಗೊತ್ತಿಕೊ ದಿನ ಮೊದಲಾಗಲಿ ಮುದದಿಂದ || ಪ || ಲಕ್ಷ್ಮೀ ಸರಸ್ವತಿ ಗೌರೀ ಮಾತೆಯು ಕರತಲದಲ್ಲಿಯೇ ನೆಲಸಿಹರು ಅನುದಿನ ಮರೆಯದೆ ದರ್ಶನಗೈದರೆ ಸಂತಸದಿಂದಲೇ ಹರಸುವರು || 1 || ಗಿರಿ ಪರ್ವತಗಳು ಮಾತೆಯ ಸ್ತನಗಳು ಸ್ತನ್ಯವು ಹರಿಯುವ ಜಲಧಾರೆ ನೆಲವನು ತುಳಿಯುವ ಮೊದಲೇ ಬೇಡಿಕೊ ಕ್ಷಮೆಯನು ತಾಯಲಿ ಮನಸಾರ || 2 || ಶೌಚವ ಮುಗಿಸು ಹಲ್ಲನು ಉಜ್ಜು ಸ್ನಾನವ ಬೇಗನೆ ನೀ ಮುಗಿಸು […]
ಸಂಘ ದೀಪ್ತಿಯ ಪಿಡಿದು ಹೊರಟಿಹ ನಿಮಗಿದೋ ಶುಭ ಕಾಮನೆ ವಿವಿಧ ಮನಗಳು ಒಂದುಗೂಡಿವೆ ಧ್ಯೇಯ ಸಮರಸ ಸಾಧನೆ || ಪ || ಭೀಮ ರಾಯರು ಗಾಂಧಿತಿಲಕರು ಸಂಘ ಸಲಿಲದಿ ಮಿಂದರು ಸುದಾಮ ಶಾಮರ ರಾಮಹನುಮರ ಅಭಂಗ ಏಕತೆ ಕಂಡರು || 1 || ಮಾತನಾಡದೆ ಮಾಡಿತೋರುವ ಸಂಘ ಸೂತ್ರವು ಅನುಪಮ ಬಂಧ ಬೆಳೆಯಿತು ಭಾವ ಬೆಸೆಯಿತು ಕಂಪು ಬಿಸಿತು ವನಸುಮ || 2 || ಭಜನೆ, ಭೋಜನ ವಚನ ಗೀತೆಗೂ ಒಂದು ಮಾಡುವ ಬಲವಿದೆ ಆಟ ಪಾಠವೂ […]
ಶ್ರೀಗುರು ಭಗವೆಯ ದರುಶನದೀಕ್ಷಣ ಜಾಗೃತಗೊಂಡಿತು ಕರ್ತೃತ್ವ ಭಾವಪುಟಗಳಲಿ ಭೂಪಟವರಳಿತು ಮಣ್ಣಿನೊಳುದಿಸಿತು ಮಾತೃತ್ವ || ಪ || ಭಗವೆಯ ಮೌನದ ಭಾಷೆಗೆ ಭಾಷ್ಯವು ಋಷಿಗಳ ಬದುಕಿನ ರೀತಿ ಅಸಿಧಾರಾ ವ್ರತ ಜೀವನ ನಡೆಸಿದ ಮಹೋನ್ನತ ತ್ಯಾಗದ ನೀತಿ || 1 || ದಿಟದಿತಿಹಾಸದ ಪುಟಪುಟ ತುಂಬಿದೆ ಛಲ-ಬಲ- ವಿಕ್ರಮ ಚರಿತೆ ಶತಶತಮಾನದ ಕಥನವ ಬರೆದಿದೆ ಹಿಂದುತ್ವದ ಜೀವನ ಸರಿತೆ […]
ಅಸದಳ ಕಾರ್ಯವ ಸಾಧಿಸಿ ತೋರುವ ಯುವಮನಸುಗಳೇ ಮೇಲೇಳಿ ಕನಸಲಿ ಅರಳಿಹ ಚಿತ್ತಾರಗಳಿಗೆ ರಂಗನು ತುಂಬಲು ಎದ್ದೇಳಿ || ಪ || ತ್ಯಾಗಸ್ವಭಾವದಿ ಸೇವೆಯ ಗುಣದಲಿ ನಮಗೆಣೆಯಿಲ್ಲ ಸರಿಮಿಗಿಲು ಬಲದಾರಾಧನೆ ನಿತ್ಯವು ನಡೆದಿದೆ ಕೊಡಲಿಗೆ ಮಣಿಯಿತು ಪಡುಗಡಲು || 1 || ಶಂಕರ ಮಧ್ವರ ಸಿದ್ಧಾಂತಗಳಿವೆ ನಾರಾಯಣ ಗುರು ಉಪದೇಶ ಕನಕನಿಗೊಲಿದ ಮುರುಳಿಯ ನಾದದಿ ಸಮರಸತೆಯ ಸ್ವರವಿನ್ಯಾಸ || 2 || ಎದ್ದಿಹ ತರುಣನೆ ನಿಲ್ಲದೆ ಮುನ್ನಡೆ ಕೇಳದೆ ಸಂತನ ಉದ್ಘೋಷ ಪಡುವಣ ಕಡಲಿನ ಮೊರೆತಕೆ ಮರುದನಿ ಭಾರತ […]
ಸಂಘಶಕ್ತಿಯ ಸೀಮೋಲ್ಲಂಘನ ಹಿಂದುನವೋದಯ ಸಂಕ್ರಮಣ ಮನ ಮನೆಗಳ ಬಂಧುತ್ವದ ಮಿಲನ ಸಮರಸಗಂಗೆಯ ಅವತರಣ ಸೀಮೋಲ್ಲಂಘನ… ನವಯುಗ ಸಂಕ್ರಮಣ || ಪ || ಸಾಸಿರ ವರುಷದ ಸಂಘರ್ಷದ ಸೆಲೆ ಸ್ವಾತಂತ್ರ್ಯದ ಗಳಿಕೆಯ ಘನ ಹಿನ್ನಲೆ ರಾಷ್ಟ್ರಸಮರ್ಪಿತ ಜೀವನವೇ ಬೆಲೆ ನಾಡನಾಗಿಸಲು ಹಿಂದುತ್ವದ ನೆಲೆ || 1 || ಪತಿತರು ದೀನರು ದೇವಸಮಾನ ನಿರತ ಸೇವೆಯೇ ಪರಮ ಸಾಧನ ಪಂಥ ಪಕ್ಷ ಮತ ಒಡಕಿಗೆ ಕಾರಣ ಬೆರೆತು ನಡೆಸುವಾ ಸಮರಸ ಜೀವನ || 2 || ಬಲ ಎಲ್ಲಿಹುದೋ ಬೆಲೆ […]