ನಡೆಯುವಾ ನಡೆಯುವಾ (ಯೋಗ ನಡಿಗೆ ಗೀತೆ)

ನಡೆಯುವಾ ನಡೆಯುವಾ ಮುಂದೆ ಮುಂದೆ ನಡೆಯುವಾ
ಯೋಗ ಯೋಗದಿಂದ ನಡೆದು ಯೋಗಚಿತ್ತರಾಗುವ || ಪ ||

ರಾಗ ದ್ವೇಷಗಳನು ತೊರೆದು ಮಾಗಿದಂಥ ಮನವ ಪಡೆದು
ಸಾಗಿದಂತೆ ಗೆಲುವ ನಲಿವ ತ್ಯಾಗಬಲವ ಹೊಂದುವಾ || 1 ||

ಮಿಡಿವ ಎದೆಯ ಹಿಡಿತ ಗಳಿಸಿ ತುಡಿವ ಮನಕೆ ದೃಢತೆ ಕಲಿಸಿ
ಜಡತೆ ಪಡೆದ ತನುವ ದುಡಿಸಿ ಪ್ರಾಣಶಕ್ತಿಗಳಿಸುವಾ || 2 ||

ಯೋಗೀಶ್ವರ ಯೋಗೇಶ್ವರ ಪತಂಜಲಿಯ ಭಾರತಕೆ
ಬಾಗುತ್ತಲಿ ಸಾಗುತ್ತಲಿ ಭಾರತರೇ ಆಗುವಾ || 3 ||

ಪಂಚತಂತ್ರದಾ ಪ್ರಪಂಚ ಯೋಗಧಾಮಕೊಯ್ಯಲಿ
ಪಂಚಭೂತ ಯೋಗ ಸಿದ್ಧಿಸುನಾದಪ್ರಿಯ ನೀಡಲಿ || 4 ||

Leave a Reply

Your email address will not be published. Required fields are marked *