ಸಂಘಶಕ್ತಿಯ ಸೀಮೋಲ್ಲಂಘನ

ಸಂಘಶಕ್ತಿಯ ಸೀಮೋಲ್ಲಂಘನ
ಹಿಂದುನವೋದಯ ಸಂಕ್ರಮಣ
ಮನ ಮನೆಗಳ ಬಂಧುತ್ವದ ಮಿಲನ
ಸಮರಸಗಂಗೆಯ ಅವತರಣ
ಸೀಮೋಲ್ಲಂಘನ… ನವಯುಗ ಸಂಕ್ರಮಣ || ಪ ||

ಸಾಸಿರ ವರುಷದ ಸಂಘರ್ಷದ ಸೆಲೆ
ಸ್ವಾತಂತ್ರ್ಯದ ಗಳಿಕೆಯ ಘನ ಹಿನ್ನಲೆ
ರಾಷ್ಟ್ರಸಮರ್ಪಿತ ಜೀವನವೇ ಬೆಲೆ
ನಾಡನಾಗಿಸಲು ಹಿಂದುತ್ವದ ನೆಲೆ || 1 ||

ಪತಿತರು ದೀನರು ದೇವಸಮಾನ
ನಿರತ ಸೇವೆಯೇ ಪರಮ ಸಾಧನ
ಪಂಥ ಪಕ್ಷ ಮತ ಒಡಕಿಗೆ ಕಾರಣ
ಬೆರೆತು ನಡೆಸುವಾ ಸಮರಸ ಜೀವನ || 2 ||

ಬಲ ಎಲ್ಲಿಹುದೋ ಬೆಲೆ ಅಲ್ಲಿಹುದು
ಒಗ್ಗೂಡಿದ ನಡೆ ಬಲ ತರುತಿಹುದು
ನಿತ್ಯಸಾಧನೆಯ ಪಥ ದಿಟವಿಹುದು
ಪರಮವೈಭವವು ನನಸಾಗುವುದು || 3 ||

Leave a Reply

Your email address will not be published. Required fields are marked *

*

code