ವಿರಸವ ಮರೆತು ಸರಸದಿ ಬೆರೆತು ಅಭಿನವ ಭಾರತ ಕಟ್ಟೋಣ | ತರತಮವಿಲ್ಲದ ಸಮರಸ ಭಾವದಿ ಸ್ವರ್ಗವನಿಲ್ಲೆ ರಚಿಸೋಣ || || ಪ || ಮೇಲುಕೀಳುಗಳ ಕಿತ್ತೊಗೆದು ಸರ್ವಸಮಾನತೆ ಸಾಧಿಸುವ | ಏಳುಬೀಳುಗಳ ಹಾದಿಯಲಿ ಏಳುಬೀಳುಗಳ ಹಾದಿಯಲಿ || || 1 || ಎದೆಗುಂದದೆ ನಾವ್ ಮುನ್ನಡೆವ ಮಾನವ ನಿರ್ಮಿತ ಭೇದಗಳು ಧರ್ಮದ ಅನುಮತಿ ಅದಕಿಲ್ಲ | ನಾಡಿನ ನೈಜ ಸುಧಾರಣೆಗೆ ಅನ್ಯರ ಆಶ್ರಯ ಬೇಕಿಲ್ಲ || || 2 || ಜಾತೀಯತೆಯನು ಬದಿಗಿರಿಸಿ ರಾಷ್ಟ್ರೀಯತೆಯನು ಬಲಪಡಿಸಿ ಹಿಂದುತ್ವದ ಹೊಂಬೆಳಕಿನಲಿ […]
ಭರತ ಮಾತೆಯ ಮಮತೆಯುಡುಗೊರೆ ಯೋಗವೆಂಬ ವಿಸ್ಮಯ ಅರಿತು ಜಗವು ಅಪ್ಪಿಕೊಂಡಿದೆ ಫಲವು ಅಮಿತವು ಅಕ್ಷಯ ಇರದು ಇತಿಮಿತಿ ಗುರುಪತಂಜಲಿ ತೋರಿಕೊಟ್ಟರು ಹಾದಿಯ ನೂರು ಜಂಜಡ ಭರದಿ ಕಳೆಯಲು ಮಾಡಬೇಕಿದೆ ಯೋಗವ || ಪ || ಯೋಗ ಕೊಟ್ಟಿಹ ಸ್ವಸ್ಥ ಬದುಕನು ನುಂಗದಿರಲಿ ಮಲಿನತೆ ನಾಗರೀಕತೆ ಮೆರಗು ತರಲಿ ನಗರದಲ್ಲಿನ ಶುಭ್ರತೆ ಬಡವ ಬಲ್ಲಿದ ಭೇದ ತೊಡೆದಿಹ ಯೋಗದಿಂದಲೇ ಧನ್ಯತೇ ಬೆಂಗಳೂರಿಗೆ ಭಂಗತಾರದೇ ಕೂಡಿ ಮಾಡುವ ಸ್ವಚ್ಛತೆ || 1 || ಸಾಮರಸ್ಯವು ಸ್ನೇಹ ಪ್ರೀತಿಯು […]
ನನ್ನ ದೇಹದ ಬೂದಿ ಗಾಳಿಯಲಿ ತೂರಿಬಿಡಿ ಹೋಗಿ ಬೀಳಲಿ ಬತ್ತ ಬೆಳೆಯುವಲ್ಲಿ ಬೂದಿ ಗೊಬ್ಬರದಿಂದ ತೆನೆಯೊಂದು ನೆಗೆದುಬರೆ ಧನ್ಯವಾಯಿತು ಹುಟ್ಟು ಸಾವಿನಲ್ಲಿ || ಪ || ನನ್ನ ದೇಹದ ಬೂದಿ ಹೊಳೆಯಲ್ಲಿ ಹರಿಯಬಿಡಿ ತೇಲಿ ಬೀಳಲಿ ಮೀನ ಬಾಯಿಯಲ್ಲಿ ಮುಷ್ಠಿ ಬೂದಿಯ ತಿಂದು ಪುಷ್ಪವಾಗಲು ಮೀನು ಧನ್ಯವಾಯಿತು ಹುಟ್ಟು ಸಾವಿನಲ್ಲಿ || 1 || ನನ್ನ ದೇಹದ ಬೂದಿ ಕೊಳದಲ್ಲಿ ಬೀರಿಬಿಡಿ ತಾವರೆಯು ದಿನದಿನವು ಅರಳುವಲ್ಲಿ ಬೂದಿ ಕೆಸರನು ಕೂಡಿ ಹೊಸ ಪಂಕಜವು ಮೂಡೆ ಧನ್ಯವಾಯಿತು ಹುಟ್ಟು […]
ನಮನ ನಿನಗೆ ಕನ್ನಡ ತಾಯೆ | ಅರ್ಪಿಸುವೆ ಮೊದಲ ತೊದಲ ನುಡಿಗಳ ಮಾಲೆ || ಲೋಕ ಲೋಕ ವಿನುತ ಕವಿ ಕುಲ ಸಂಪ್ರೀತೆ | ಹೃದಯ ತುಂಬಿ ನಾ ಪೊಡಮಡುವೆ ತಾಯೆ ನಿನಗೆ || ಪ || ಪಂಪನ ನೃಪತುಂಗನ ನುಡಿ ಕನ್ನಡ | ರನ್ನಪೊನ್ನ ಜನ್ನರ ಸವಿಗನ್ನಡss || ಮುದ್ದಣ ಕುಮಾರವ್ಯಾಸ ಕನ್ನಡ | ಮುಗ್ಧ ಜನರ ಮುದ್ದು ಭಾಷೆ ಕನ್ನಡ || ಭಾವದ ಅಂಗಳಕೆ | ಭಾಷೆಯ ಹೊಂಬೆಳಕೆ || ಕರ್ನಾಟಕ ಜನಮನದೊಲವೇ || 1 || […]
ಓ ತಾಯಿ ಭಾರತಿ ನಿನಗೆ ಜೀವದಾರತಿ ಚಿರಂತನವು ಬೆಳಗುತಿರಲಿ ನಿನ್ನ ನಾಡ ಕೀರುತಿ ನಿನ್ನ ಮಾನ ರಕ್ಷಣ ನಮ್ಮ ಪ್ರಾಣ ಅರ್ಪಣ ನಿನ್ನ ನಾಡ ಗುಡಿಗೆ ನಮ್ಮ ಬೆವರು ರಕ್ತ ತರ್ಪಣ ನಮಗೆ ನೀನೆ ಪ್ರೇರಣ ಜೀವಶಕ್ತಿ ಧಾರಣ ನಮ್ಮ ಮಾನ ಕೀರ್ತಿಗೆಲ್ಲ ತಾಯೆ ನೀವೆ ಕಿರಣ ಕಡಿದೆವೆಲ್ಲ ಬಂಧನ ನಾಡು ಇಂದು ನಂದನ ನಿನ್ನ ಚರಣ ಕಮಲದಲ್ಲಿ ತಾಯೆ ನಮ್ಮ ವಂದನ ಪಡೆಯಲೆಂದು ಬಿಡುಗಡೆ ತೆತ್ತೆವಂದು ತನುಮನ, ಪಡೆದುದನ್ನು ಕಾಯಲೆಂದು […]
ದಶಮಾನದ ಸಂಭ್ರಮ ದಶಮಾನದ ಸಂಭ್ರಮ ಕೇಶವನಾ ಹರಕೆಯಿಂದ ಲೋಕಹಿತದ ಬಯಕೆಯಿಂದ ರೂಪುಗೊಂಡ ಕುಂಜಕೆ ಪ್ರೇರಣೆಯ ಪುಂಜಕೆ ದಶಮಾನದ ಸಂಭ್ರಮ ದಶಮಾನದ ಸಂಭ್ರಮ || ಪ || ಬೆಳಗು ಸಂಜೆ ಭಗವೆರಶ್ಮಿ ಮಂಗಲಮಯ ಪರಿಸರ ತೆರೆದ ಬಯಲು ಸೆಳೆವ ನಿಲುವು ನೋಟವಿದು ಮನೋಹರ ವರವಿಶಾಲ ಕುಂಜಕೆ ಬೆಳಕಿನೊಂದು ಪುಂಜಕೆ || 1 || ಬಾಲಮನಕೆ ಮೋದವೆರೆದು ತರುಣರೆದೆಗೆ ಸ್ಫೂರ್ತಿಯ ಹಿರಿಯರೊಲಿದು ಹರಸುವಂತೆ ಬರೆದು ಮೇಲುಪಂಕ್ತಿಯ ಗರಿಮೆ ಪಡೆದ ಕುಂಜಕೆ ಚೈತನ್ಯದ ಪುಂಜಕೆ || 2 || ಹಸಿರು ಹೊತ್ತ ಹೂಗಿಡ ಮರ, ಮಾತೃಕೇಂದ್ರ […]
ಕೇಶವನ ಬಾಳೆಮಗೆ ಪ್ರೇರಣೆಯ ದೀಪ ಮಾಧವನ ಸಾಧನೆಯು ಆದರ್ಶ ರೂಪ || ಪ || ಈಶ್ವರೀಯವು ನಮ್ಮ ದೇಶಧರ್ಮದ ಕಾರ್ಯ ಜನಮನವ ಜೋಡಿಸುವ ಸವಿನುಡಿಯು ವಿನಯ ವ್ಯಕ್ತಿತ್ವ ಕರ್ತೃತ್ವ ಅರ್ಪಿತವು ಸರ್ವಸ್ವ ‘ಯಾಚಿ ದೇಹೀ ಯಾಚಿ ಡೋಳ’ ಸಂಕಲ್ಪ || 1 || ಶುದ್ಧ ಜಂಗಮ ಸ್ನೇಹಿ ಲೌಕಿಕದಿ ನಿರ್ಮೋಹಿ ಆಧ್ಯಾತ್ಮದಲಿ ರಕ್ತಿ ಅತುಲ ಧೀ ಶಕ್ತಿ ಹೆಜ್ಜೆ ಗುರುತುಗಳೆಲ್ಲ ಯುಗದೃಷ್ಟಿ ನವಸೃಷ್ಟಿ ಸದ್ದಿರದೆ ಸರಿವ ಬಗೆ ‘ಮೈ ನಹೀಂ ತೂ ಹೀ’ || […]
ದೇಶ ಒಂದೆ ಧ್ಯೇಯ ಒಂದೆ ಭಾಷೆ ನೂರು ಭಾವ ಒಂದೆ ನನ್ನ ಹೆಮ್ಮೆಯ ನಾಡಿದು ಮನ ತಣಿಸೆ ಚೆಲುವ ಬೀಡಿದು || ಪ || ಸಿಂಧೂನದಿಯ ಮಣ್ಣಿನಿಂದ ಹಿಮಾಲಯದ ತಪ್ಪಲಲ್ಲೂ ಕಾಶ್ಮೀರದ ಕಣಿವೆಯಿಂದ ಕನ್ಯಾಕುಮಾರಿಯಲ್ಲೂ ಸೇವೆಯೆಂಬ ಯಜ್ಞದಲ್ಲಿ ಭಾರತಾಂಬೆಯ ಗೆಲುವಿಗಾಗಿ ಪ್ರಾಣರಾಷ್ಟ್ರಕೆ ಅರ್ಪಿತ ಬದುಕು ದೇಶಕೆ ಸಮರ್ಪಿತ || 1 || ಕೆಂಪು ಕಪ್ಪು ಮಣ್ಣಿದು ಹಸಿರು ಹೊತ್ತ ನಾಡಿದು ಗೌರಿ ಶಂಕರ ಶಿಖರವಿಹುದು ನೂರು ನದಿಯ ಭುವಿಯಿದು ಕೋಟಿ ದೇವರಿರುವರು […]
ಹೇ ಗುರುವೇ ನಿನ್ನಡಿಗೆ ಅನುದಿನವು ಮಣಿಯುವೆನು ಎದೆಗೊತ್ತಿ ಶಿರಸವರಿ ನೀನೆನ್ನ ಹರಸು || ಪ || ನನ್ನಿರವ ತಿಳಿಸಿಕೊಡು ನನ್ನರಿವು ನನಗೆ ಕೊಡು ಒಳಗಿನರಿಗಳ ತರಿವ ಪರಿಯೆನಗೆ ಕಲಿಸು || 1 || ಜಗವ ರಂಜಿಸಬಲ್ಲ ಸಪ್ತ ಸ್ವರಗಳನುಲಿಸು ಎನ್ನೆದೆಯ ವೀಣೆಯನು ಸಿದ್ಧಗೊಳಿಸು || 2 || ಭಾರತಿಯ ಜೊತೆಗೆನ್ನ ಹೃದಯಶ್ರುತಿ ಮೇಳವಿಸು ಸಮರಸದ ಸಂಗೀತ ಸೃಷ್ಟಿಗೊಳಿಸು || 3 || ಕೀರ್ತಿ ಕಾಂಚನಗಳಿಗೆ ಅಲೆವ ಮನವನು ನಿಲಿಸು ಮರೆವಿನಾ ತೆರೆ ಸರಿಸು ಬೆಳಕ ಹರಿಸು || 4 || ಸ್ವಚ್ಛಂದ ಮನಕಿಂದು […]