ಓ ತಾಯಿ ಭಾರತಿ
ನಿನಗೆ ಜೀವದಾರತಿ
ಚಿರಂತನವು ಬೆಳಗುತಿರಲಿ
ನಿನ್ನ ನಾಡ ಕೀರುತಿ
ನಿನ್ನ ಮಾನ ರಕ್ಷಣ
ನಮ್ಮ ಪ್ರಾಣ ಅರ್ಪಣ
ನಿನ್ನ ನಾಡ ಗುಡಿಗೆ ನಮ್ಮ
ಬೆವರು ರಕ್ತ ತರ್ಪಣ
ನಮಗೆ ನೀನೆ ಪ್ರೇರಣ
ಜೀವಶಕ್ತಿ ಧಾರಣ
ನಮ್ಮ ಮಾನ ಕೀರ್ತಿಗೆಲ್ಲ
ತಾಯೆ ನೀವೆ ಕಿರಣ
ಕಡಿದೆವೆಲ್ಲ ಬಂಧನ
ನಾಡು ಇಂದು ನಂದನ
ನಿನ್ನ ಚರಣ ಕಮಲದಲ್ಲಿ
ತಾಯೆ ನಮ್ಮ ವಂದನ
ಪಡೆಯಲೆಂದು ಬಿಡುಗಡೆ
ತೆತ್ತೆವಂದು ತನುಮನ,
ಪಡೆದುದನ್ನು ಕಾಯಲೆಂದು
ತೊಡುವ ಇಂದು ಕಂಕಣ
ನಾವು ಸುರಿದ ಬೆವರಹನಿ
ನಿನ್ನ ಮುಡಿಗೆ ಭೂಷಣ
ಯೋಧನೆದೆಯ ರಕ್ತ ಬಿಂದು
ನಿನ್ನ ಹಣೆಗೆ ಕುಂಕುಮ