ವಿರಸವ ಮರೆತು ಸರಸದಿ ಬೆರೆತು

ವಿರಸವ ಮರೆತು ಸರಸದಿ ಬೆರೆತು
ಅಭಿನವ ಭಾರತ ಕಟ್ಟೋಣ |
ತರತಮವಿಲ್ಲದ ಸಮರಸ ಭಾವದಿ
ಸ್ವರ್ಗವನಿಲ್ಲೆ ರಚಿಸೋಣ ||      || ಪ ||

ಮೇಲುಕೀಳುಗಳ ಕಿತ್ತೊಗೆದು
ಸರ್ವಸಮಾನತೆ ಸಾಧಿಸುವ |
ಏಳುಬೀಳುಗಳ ಹಾದಿಯಲಿ
ಏಳುಬೀಳುಗಳ ಹಾದಿಯಲಿ ||     || 1 ||

ಎದೆಗುಂದದೆ ನಾವ್ ಮುನ್ನಡೆವ
ಮಾನವ ನಿರ್ಮಿತ ಭೇದಗಳು
ಧರ್ಮದ ಅನುಮತಿ ಅದಕಿಲ್ಲ |
ನಾಡಿನ ನೈಜ ಸುಧಾರಣೆಗೆ
ಅನ್ಯರ ಆಶ್ರಯ ಬೇಕಿಲ್ಲ ||     || 2 ||

ಜಾತೀಯತೆಯನು ಬದಿಗಿರಿಸಿ
ರಾಷ್ಟ್ರೀಯತೆಯನು ಬಲಪಡಿಸಿ
ಹಿಂದುತ್ವದ ಹೊಂಬೆಳಕಿನಲಿ
ಕತ್ತಲ ಕಾಲವ ಕೊನೆಗೊಳಿಸಿ ||  || 3 ||

Leave a Reply

Your email address will not be published. Required fields are marked *

*

code