ಸ್ಫೂರ್ತಿಯ ಚಿಲುಮೆಯಿದು ಎಂದಿಗೂ ಸಾಧಕ ಜನರಿಗೆ ಪ್ರೇರಣೆ ನೀಡುವ || ಪ || ಸಾವಿಗೆ ಅಂಜದೆ ಸೋಲಿಗೆ ಬೆದರದೆ ಚಿರಸ್ಥಿರ ಚಿತ್ತದಿ ಸ್ಫೂರ್ತಿಯ ನೀಡಿದ ಧರ್ಮೋನ್ನತಿಯಾ ಮುಕ್ತಿಯ ಪಥವನು ನಿಜಜೀವನದೊಳು ಸಾಧಿಸಿ ಬೆಳಗಿದ || 1 || ದೇಹದ ಕಣಕಣ ಜೀವನ ಕ್ಷಣಕ್ಷಣ ಬತ್ತಿಯ ತೆರದಲಿ ಉರಿಸುತ ಜ್ವಲಿಸಿದ ಧ್ಯೇಯದ ದೀಪ್ತಿಯ ಅಗಣಿತ ಮನದಲಿ ಬೆಳಗಿಸಿ ಬದುಕನು ಸಾರ್ಥಕಗೊಳಿಸಿದ || 2 || ಗುರುಕುಲ ಸಂಸ್ಕೃತ ಭಾರತ ದರ್ಶನ ಕೃಷಿ ಪರಿವಾರದ ಕಲ್ಪನೆಯನು […]
ತಾಯೇ ನಿನ್ನ ಉದರದಲ್ಲಿ ಜನಿಸಿ ಧನ್ಯನಾದೆನು ನಾನು ಹೇ ವತ್ಸಲೇ ಹೇ ದುರ್ಗಾಮಾತೆ ಮಂಗಲದಾತೆ ಪರಮಪುನೀತೆ ಪುಣ್ಯವಂತೆ ಕರ್ತವ್ಯನಿರತೆ ಓಂ ನಮಸ್ತೇ ಶ್ರೀ ನಮಸ್ತೇ || ಪ || ಹಿಂದೂರಾಷ್ಟ್ರದ ಅವಯವಗಳು ನಾವು ಆದರದಿಂದಲಿ ಪೂಜಿಸುವ ನಾವು ನಿನ್ನಯ ಸೇವೆಗೆ ಬದ್ಧರು ನಾವು ಆಶೀರ್ವಾದವ ಕೋರುವ ನಾವು || 1 || ವಿಶ್ವವೇ ಜಯಿಸದ ಶಕ್ತಿಯ ನೀಡೆ ಜ್ಞಾನದ ನೆರಳ ವಿವೇಕವ ನೀಡೆ || ಜಗವೇ ನಮಿಸುವ ಶೀಲವ ನೀಡೆ ಕಂಟಕ ಅಳಿಸುವ ಜ್ಞಾನವ ನೀಡೆ || […]
ಭಾರತ ವರ್ಷದ ಭವ್ಯ ನವೋದಯ ಬಯಸಿದೆ ಶಕ್ತಿಯ ಸಂಗಮವ ದಾರಿಯ ತೋರಿದ ಧೀರ ಪರಂಪರೆ ಜಡತೆಯ ನೀಗಿದ ಜಂಗಮವ || ಪ || ಶ್ರದ್ಧೆಯ ಬದಲಿಪ ಬುದ್ಧಿ ಭೇದಗಳ ಸದ್ದಿಲ್ಲದ ಹುನ್ನಾರವಿದೆ ಇದ್ದುದನೆಲ್ಲವ ಅಲ್ಲಗಳೆವ ಹಸಿ ಸಿದ್ಧಾಂತದ ಸಂಘರ್ಷವಿದೆ || 1 || ಗಡಿಗಳ ಗುಡಿಗಳ ಒಡೆವಾಯುಧಗಳ ಮುರಿದಿಕ್ಕುವ ಛಲ ಮೂಡುತಿದೆ ಕಡಲಿನ ತಡಿ ಹಿಮಶಿಖರದ ನಡುವಿನ ಧರೆಯೊಡೆತನ ದೃಢವಾಗುತಿದೆ || 2 || ಸಾವಿರ ಕೈಗಳು ಒಗ್ಗೂಡಿಹ ಬಲ ಭಾವೈಕ್ಯದ ನೆಲೆಯಾಗಲಿದೆ […]
ಏಕತೆ ಸಾರುವ ಸೂತ್ರದಿ ಸೇರುವ ಬನ್ನಿರಿ ಭೋಗವ ತ್ಯಜಿಸುತಲಿ ಭಾರತ ಮಾತೆಯ ಚರಣದ ಸೇವೆಗೆ ದಣಿಯದ ಶಕ್ತಿಯ ಗಳಿಸುತಲಿ || ಪ || ಅನುಪಮ ಕಾರ್ಯಕೆ ಅರ್ಪಿತ ಬದುಕಿನ ಜೀವನ ಮೌಲ್ಯವ ಬೆಳೆಸುತಲಿ ತರತಮ ಭಾವದ ಕತ್ತಲ ನೀಗಿ ಮಾನವ ಸ್ವರ್ಗವ ಸೃಜಿಸುತಲಿ || 1 || ದೇಹದ ಗುಡಿಯಲಿ ಧ್ಯೇಯವು ಬೆಳಗಲಿ ದ್ವೇಷ ಅಸೂಯೆಗೆ ಎಡೆಗೊಡದೆ ಕಾಯಕೆ ದೃಢತೆಯ ಚಿತ್ತಕೆ ಸ್ಫೂರ್ತಿಯ ತುಂಬುವ […]
ನಿಲ್ಲದಿರು ನಡೆಮುಂದೆ ಮುಂದೆ ನಡೆ ಮುಂದೆ ಎಲ್ಲೆಯಾಗಸದಂಚು ಗುರಿಯದೊಂದೇ || ಪ || ಕಷ್ಟಗಳ ಸಾಗರದಿ ಹೆದ್ದೆರೆಗಳೇ ಬರಲಿ ನಿಷ್ಠೆಯಲಿ ಕುಂದಿಲ್ಲ ಕೃತುಶಕ್ತಿ ಬಲದಿ ಸಾಹಸವೆ ಒರೆಗಲ್ಲು ನಿಶೆಯಳಿಸಿ ನೀ ನಿಂದೆ ಪ್ರಾಣ ಪಣ ಹೋರಾಟ ವಚನ ಪಾಲನೆಗೆಂದೆ || 1 || ದೇಶವಿದು ಅಖಂಡ ನಾನದರ ಅಂಗ ಹಿಡಿದ ಧರ್ಮವ ಬಿಡೆನು ಪಡೆದೆ ಸತ್ಸಂಗ ದಣಿವಿಲ್ಲ ತಣಿವಿಲ್ಲ ಆಮಿಷಕೆ ಮಣಿದಿಲ್ಲ ಶರಣು ಶರಣೆಂಬೆ ಧರ್ಮ ರಕ್ಷಣೆಗೆಂದೆ || 2 || ನನ್ನದೇನಿಲ್ಲವೀ ಜಗವೆಲ್ಲ ನಿನ್ನದೇ ನಾನೆಂಬ […]
ಹಿಂದುಸ್ಥಾನದ ಚಿರ ನವ ಹರಯವೆ, ಹೇ ಹೈಮಾಚಲ ಸಂದರ್ಶನವೆ ಇದೋ ಉದ್ಭವಿಸಿದೆ ಪ್ರಾಣಪ್ರವಾಹವು, ಯುವಜನ ಜಾಹ್ನವಿ ಸಿಂಧೂಬಲವು || ಪ || ರಣಮತ್ತರ ಬಿಸಿನೆತ್ತರ ಬಾಹುವೆ, ಓ ನಾಡಿನ ಯೌವನ ಸಿಡಿದೇಳು ರಾಷ್ಟ್ರದ ನೇತ್ರ ತೃತೀಯ ಸ್ವರೂಪವೆ, ತಾರುಣ್ಯವೇ ಉರಿಗಣ್ ತೆರೆ ಏಳು || 1 || ದೃಢ ನಿಶ್ಚಯದೊಳು ಹೃತ್ಪರ್ವತಗಳು, ಕೋಟ್ಯಂತರ ನಿಂತಿರೆ ರಾಷ್ಟ್ರದಲಿ ದುರ್ಗಮ ದುರ್ಗಗಳೆಚ್ಚರಗೊಳುತಿವೆ, ಅರಿಗೆಂದಿಗು ದೊರೆಯದು ಜಯವಿಲ್ಲಿ || […]
ಪುಟಿದು ಚಿಮ್ಮುತಿದೆ ಅಂತಃಶಕ್ತಿಯು ಹೃದಯದೊಳಗಿನಿಂದ ಸೆಟೆದು ನಿಲ್ಲುತಿದೆ ಸ್ವಾಭಿಮಾನವು ತಾಯ ಸ್ಮರಣೆಯಿಂದ || ಪ || ಶುಭವ ಅರುಹುತಿದೆ ಶುಭ್ರ ಮುಂಜಾವು ಭಾಸ್ಕರನ ಕಿರಣ ಭಾಷ್ಯ ಹಬ್ಬಿ ಹರಡುತಿದೆ ವಿಶ್ವದೆಲ್ಲೆಡೆಯು ಭಾರತಿಯ ಕೀರ್ತಿ ಲಾಸ್ಯ ಅಣು ಅಣುವಿನಲ್ಲೂ ಮಾರ್ದನಿಸುತಿದೆ ದೇಶಭಕ್ತಿಯ ಘೋಷ ಅನುರಣಿಸುತಿದೆ ಮೈಯ ಕಣಕಣವು ಸಂಘಮಂತ್ರ ದೀಕ್ಷ || 1 || ಯಶವು ನಿಶ್ಚಯವು ಯತ್ನ ಬೇಕಿಹುದು ಶ್ರಮಕೆ ಫಲವು ಸತ್ಯ ಕ್ಲೇಶ ಕಳೆದ ಅವಕಾಶವೀಗಲೇ ಹಿಂದುತ್ವ ಭದ್ರ ಕವಚ ದುಷ್ಟ ಕೂಟಗಳ ಹುಟ್ಟನಡಗಿಸಲು ಐಕ್ಯತೆಯ ಸ್ನೇಹ ಸೂತ್ರ […]
ಅಬ್ಬರದ ಜೀವನದ ಕಾರ್ಮೋಡ ಕವಿದಿರಲು ವಿಸ್ಮೃತಿಯು ಹೆಗಲೇರಿ ನಾಳೆಗಳು ನಲುಗಿರಲು ಮಬ್ಬಡರಿ ಬರಿದಾದ ಕುರುಡು ಮನಗಳಲೀಗ ಅಸ್ಮಿತೆಯ ಜಾಗರಣ ನಡೆಯಬೇಕು || ಪ || ಸ್ವಂತ ಜೀವನ ಮರೆತು ನಿತ್ಯ ಶುದ್ಧತೆ ಬಯಸಿ ವಿಶ್ವಗುರು ಭಾರತಕೆ ಸತತ ಕಾಯವ ಸವೆಸಿ ಸತ್ಯದರಿವಿಗೆ ತಪಿಸಿ ಸಂತ ಜೀವನ ನಡೆಸಿ ಸ್ವಾರ್ಥವರಿಯದ ಬದುಕ ಬಾಳಬೇಕು || 1 || ಸ್ವಸ್ಥ ದೇಶಕೆ ಇಲ್ಲಿ ಸ್ವಸ್ಥ ವ್ಯಕ್ತಿಯ ಸೃಷ್ಟಿ ವೇದ ಯೋಗದ ಮಾರ್ಗ ಕಲೆಯ ಸಮ್ಮಾನ ವಿಜ್ಞಾನ ಭೂಸೇವೆ ಲೋಕಹಿತದೆಡೆ ದೃಷ್ಟಿ […]
ಭರವಸೆಗಳ ನವನೇಸರ ತಾನುದಿಸುತ ಬರಲು ಸುಖಶಾಂತಿಯ ಸೌಗಂಧವ ತರುತಿದೆ ತಂಪೆರಲು ಜಗದೊಡತಿಯ ಪದತಲದಲಿ ಪೊಡಮಡುತಿದೆ ಜಗವು ಅಭಯಾಶಿಷ ಸಂಕೇತವು ಮಾತೆಯ ನಗುಮೊಗವು || ಪ || ಹಳೆಸೂತ್ರಕೆ ಹೊಸಭಾಷ್ಯವ ಬರೆಯುವ ಗುರುಭಾರ ಪರಿಮಾರ್ಜನೆ ಪರಿವರ್ತನೆ ಗೆಳಸುವ ಶುಭಕಾಲ ಹೊಸ ತಾಂತ್ರಿಕ ಬಲದಿಂದಲೇ ಹಳೆಯೊಳಿತನು ಮಥಿಸಿ ನವನೀತವ ಸಂಸ್ಕರಿಸುತ ನವಘೃತವನು ಉಣಿಸಿ || 1 || ಅಸ್ಪೃಷ್ಯತೆ, ದುರ್ವ್ಯಸನದ, ಕೊಳೆ ಕಿಲುಬನು ಅಳಿಸಿ ರಾಷ್ಟ್ರೀಯತೆ, ಸಂಪನ್ನತೆ, ಬಂಧುತ್ವವ ಬೆಳೆಸಿ ಶಾಸ್ತ್ರಾರ್ಥದ ಶ್ರೀ ರಕ್ಷೆಗೆ ಶಸ್ತ್ರಾಸ್ತ್ರವ ಗಳಿಸಿ ಮನುಜತ್ವದ ನಿಜಧರ್ಮಕೆ […]
ಧರ್ಮತಳಹದಿ ಮೇಲೆ ಭವ್ಯ ಭಾರತಭವನ ಜ್ಞಾನ ಸ್ತನ್ಯದಿ ಜಗವ ಪೊರೆದ ತಾಣ ಕುಸಿದಿರುವ ಸ್ತಂಭಗಳ, ಮತ್ತೆ ಸರಿ ಪಡಿಸೋಣ ತೊಡಗೋಣ ಮತ್ತೊಮ್ಮೆ ವಿಜಯ ಯಾನ || ಪ || ಮೇಘಸ್ಫೋಟವದಾಯ್ತು ಭುವಿ ಬಿರಿದು ಕುಸಿದಾಯ್ತು ಗಿರಿ ಜರಿದು ಕಂಪಿಸಿತು ಅರಿವಾಗಲಿಲ್ಲ ಅತಿ ಗಳಿಕೆ ಬಯಕೆಗಳ ಪ್ರಲಯ ಝಂಝಾವಾತ ಸರಳತೆಯ ಸಂದೇಶ ಕೇಳಲಿಲ್ಲ || 1 || ಹೊನ್ನಗಳಿಕೆಯ ಬಯಕೆಗೆನ್ನ ವಿಕ್ರಮವಾಯ್ತು ಔಷಧವೂ ಶಿಕ್ಷಣವೂ ಬಿಕರಿಯಾಯ್ತು ಅನ್ಯೋನ್ಯ ಅನುಕೂಲ ಭಾವನೆಯು ಬರಿದಾಯ್ತು ಹಕ್ಕುಗಳು ಸೊಕ್ಕೇರಿ ಮೆರೆದುದಾಯ್ತು […]