ನಿಲ್ಲದಿರು ನಡೆಮುಂದೆ ಮುಂದೆ ನಡೆ ಮುಂದೆ
ಎಲ್ಲೆಯಾಗಸದಂಚು ಗುರಿಯದೊಂದೇ || ಪ ||
ಕಷ್ಟಗಳ ಸಾಗರದಿ ಹೆದ್ದೆರೆಗಳೇ ಬರಲಿ
ನಿಷ್ಠೆಯಲಿ ಕುಂದಿಲ್ಲ ಕೃತುಶಕ್ತಿ ಬಲದಿ
ಸಾಹಸವೆ ಒರೆಗಲ್ಲು ನಿಶೆಯಳಿಸಿ ನೀ ನಿಂದೆ
ಪ್ರಾಣ ಪಣ ಹೋರಾಟ ವಚನ ಪಾಲನೆಗೆಂದೆ || 1 ||
ದೇಶವಿದು ಅಖಂಡ ನಾನದರ ಅಂಗ
ಹಿಡಿದ ಧರ್ಮವ ಬಿಡೆನು ಪಡೆದೆ ಸತ್ಸಂಗ
ದಣಿವಿಲ್ಲ ತಣಿವಿಲ್ಲ ಆಮಿಷಕೆ ಮಣಿದಿಲ್ಲ
ಶರಣು ಶರಣೆಂಬೆ ಧರ್ಮ ರಕ್ಷಣೆಗೆಂದೆ || 2 ||
ನನ್ನದೇನಿಲ್ಲವೀ ಜಗವೆಲ್ಲ ನಿನ್ನದೇ
ನಾನೆಂಬ ಅಸ್ತಿತ್ವ ನೀನಿಲ್ಲದಿಲ್ಲ
ಕಣ ಕಣವು ಚಣ ಚಣವು ಎಲ್ಲ ಅರ್ಪಿತವೆಂದೆ
ಚರಣದ ರಜವೆನಗೆ ಕೃತಾರ್ಥವೆಂದೆ || 3 ||