ಅಬ್ಬರದ ಜೀವನದ ಕಾರ್ಮೋಡ ಕವಿದಿರಲು

ಅಬ್ಬರದ ಜೀವನದ ಕಾರ್ಮೋಡ ಕವಿದಿರಲು
ವಿಸ್ಮೃತಿಯು ಹೆಗಲೇರಿ ನಾಳೆಗಳು ನಲುಗಿರಲು
ಮಬ್ಬಡರಿ ಬರಿದಾದ ಕುರುಡು ಮನಗಳಲೀಗ
ಅಸ್ಮಿತೆಯ ಜಾಗರಣ ನಡೆಯಬೇಕು              || ಪ ||

ಸ್ವಂತ ಜೀವನ ಮರೆತು ನಿತ್ಯ ಶುದ್ಧತೆ ಬಯಸಿ
ವಿಶ್ವಗುರು ಭಾರತಕೆ  ಸತತ ಕಾಯವ ಸವೆಸಿ
ಸತ್ಯದರಿವಿಗೆ ತಪಿಸಿ ಸಂತ ಜೀವನ ನಡೆಸಿ
ಸ್ವಾರ್ಥವರಿಯದ ಬದುಕ ಬಾಳಬೇಕು            || 1 ||

ಸ್ವಸ್ಥ ದೇಶಕೆ ಇಲ್ಲಿ  ಸ್ವಸ್ಥ ವ್ಯಕ್ತಿಯ ಸೃಷ್ಟಿ
ವೇದ ಯೋಗದ ಮಾರ್ಗ ಕಲೆಯ ಸಮ್ಮಾನ
ವಿಜ್ಞಾನ ಭೂಸೇವೆ  ಲೋಕಹಿತದೆಡೆ ದೃಷ್ಟಿ
ಗುರುಕುಲವು ಜಗದಗಲ ಬೆಳೆಯಬೇಕು            || 2 ||

ಹಿರಿಯರೆಲ್ಲರ ಹರಕೆ  ಸಜ್ಜನರ ಹಾರೈಕೆಯಿದೆ
ಅರ್ಧಮಂಡಲವಿಂದು ಸಂಪನ್ನವಾಗಿಹುದು
ನಡೆದ ದಾರಿಯ ನೆನೆದು ಮುನ್ನಡೆವ ಬಯಕೆ ಇದೆ
ಪೂರ್ಣಮಂಡಲದೆಡೆಗಿಟ್ಟ ಹೆಜ್ಜೆಯೆಮದು         || 3 ||

Leave a Reply

Your email address will not be published. Required fields are marked *

*

code