ಸಂಘಶಾಖೆಯೊಂದು ಭುವಿಯ ಬಯಲಿನಲ್ಲಿ

ಸಂಘಶಾಖೆಯೊಂದು ಭುವಿಯ ಬಯಲಿನಲ್ಲಿ ನೆಲೆಸಿತು ಜನರ ಮನದ ಕ್ಲೇಶವಳಿಸಿ ಗುರಿಯನೊಂದ ನೀಡಿತು || ಪ || ಭರತಭೂಮಿ ನಮ್ಮ ತಾಯಿ ನಾವು ಅವಳ ಮಕ್ಕಳು ಹಿಂದುಭೂಮಿ ನಮ್ಮನೆಲ್ಲ ಸುಖದಿ ಬೆಳೆಸಿದಂಥ ತಾಯಿ ಪುಣ್ಯಭೂಮಿ ಎನ್ನ ಕಾಯ ನಿನಗೆ ಮುಡಿಪುಗೊಳಿಸುವೆ ಮಂಗಲೆ ಸುಮಂಗಲೆ ವಂದನೆ ಅಭಿವಂದನೆ || 1 || ಶಕ್ತಿಶಾಲಿ ಪ್ರಭುವೆ ನಿನಗೆ ಶಿರವಬಾಗಿ ನಮಿಪೆವು ಹಿಂದುರಾಷ್ಟ್ರದಂಗವೆಂಬ ಭಾವವೆಮದು ಅಚಲವು ಈಶ ನಿನ್ನ ಕಾರ್ಯಕಾಗಿ ಸದಾ ಸಿದ್ಧರಿರುವೆವು ಕಾರ್ಯ ಸಫಲವಾಗಲೆಂದು ಹರಸು ಎಮಗೆ ಹರಸು || 2 […]

Read More

ಮನದಿ ಮಂದಾಸನವನಿತ್ತಿಹೆ

ಮನದಿ ಮಂದಾಸನವನಿತ್ತಿಹೆ ಮಾತೆ ಮೋದದಿ ಮಂಡಿಸು ಮೂಢನಾಗಿಹೆ ಮೌಲ್ಯ ಮರೆತಿಹೆ ಮುನಿಸುದೋರದೆ ಮನ್ನಿಸು || ಪ || ಮೂಡಣಾಗಸದಲ್ಲಿ ಮಿತ್ರನು ಮಗುವಿನಂದದೊಳುದಿಸಲು ಮಮತೆಯಾ ಮಂದಾರವರಳಿತು ಮಧುರ ಮಧುವನ್ನೀಯಲು || 1 || ಮುನಿ ಮನೀಷಿಗಳೆಲ್ಲ ಮಾಡಿದ ಮನನ ಮಂಥನದಿಂದಲಿ ಮೇದಿನಿಗೆ ಮುದ ಮೋಕ್ಷವಾತ್ಮಕೆ ಮಂತ್ರವುದಿಸಿತು ಮನದಲಿ || 2 || ಮನುಜನುಳಿವಿನ ಮಾರ್ಗವರಿಯಿತು ಮಂತ್ರವಾಯಿತು ಮುನ್ನುಡಿ ಮೋಹ‌ ಮರೆಯುತ ಮದವನಳಿಸುತ ಮನುಜನಿರಿಸಿದ ಮುಂದಡಿ || 3 || ಮಾನವನ ಮಹದೇವನಾಗಿಪ ಮಂತ್ರ ಮಾರ್ದನಿಗೊಳುತಿದೆ ಮಗುವಿನಂದದಿ ಮಣಿದೆ ಮುದದಲಿ […]

Read More

ನನಸಾಗಿಹುದು ಕೇಶವ ಕಂಡಿಹ

ನನಸಾಗಿಹುದು ಕೇಶವ ಕಂಡಿಹ ಕನಸಿನ ಹಿಂದೂರಾಷ್ಟ್ರವು | ದೇಶ ಬಾಂಧವರನೊಂದುಗೂಡಿಸಿದೆ ಹಿಂದುತ್ವದ ಈ ಸೂತ್ರವು || ಪ || ಸೃಷ್ಟಿಯು ನೀಡಿದ ವರದಾನವಿದು ವಿಂಧ್ಯ ಹಿಮಾಚಲ ಸಾಗರವು | ತಾಯ್ನೆಲವೆಮ್ಮದು ಧರ್ಮ ಸಂಸ್ಕೃತಿಯ ಅನುಪಮ ಕಲೆಗಳ ಆಗರವು || 1 || ಕೆಚ್ಚೆದೆ ಶೂರರ ಚರಿತ್ರೆಯೆಮಗಿರೆ ಜೀವನ ದರ್ಶನ ಗೀತೆಯಲಿ | ಮನುಕುಲದೇಳ್ಗೆಯೆ ಗುರಿಯಾಗಿಹುದು ಸಾಗಿಹೆವಾ ಸತ್ಪಥದಲ್ಲಿ || 2 || ಸಂಘದ ಮಂತ್ರವ ಜಪಿಸಿ ನಿರಂತರ ಧ್ಯೇಯದ ಪಥದಲಿ ಸಾಗುವೆವು | ಭಾರತ ಭೂಮಿಯ ಶ್ರೇಷ್ಠತೆಯನ್ನು […]

Read More

ಜನನಿ ಭಾರತಿ ಜನ್ಮಧಾತ್ರಿ

ಜನನಿ ಭಾರತಿ ಜನ್ಮಧಾತ್ರಿ ದಿವ್ಯ ನಾಡಿದು ಸೋದರಿ ಬಾದರಾಯಣ ಪರಮ ಋಷಿಗಳ ಪುಣ್ಯ ಬೀಡಿದು ಸೋದರ || ಪ || ಎಲ್ಲಿ ರಾಮಾಯಣವು ಬೆಳಗಿತೊ ಎಲ್ಲಿ ಗೀತೆಯ ಸುಧೆಯು ಹರಿಯಿತೊ ವೇದ ಘೋಷಗಳಲ್ಲಿ ಮೊಳಗಿತೊ ಅದುವೆ ಭಾರತ ಸೋದರ ನಮ್ಮ ನಾಡಿದು ಸೋದರಿ || 1 || ಎಲ್ಲಿ ಮೋಹನ ಕೊಳಲನೂದಿದ ಎಲ್ಲಿ ಪರಶಿವ ನರ್ತಿಸಿದನು ವಾಣಿ ಲಕುಮಿ ಗೌರಿ ಗಣಪತಿ ಪೂಜೆಗೊಳ್ಳುವ ನಾಡಿದು ದೇವತೆಗಳಬೀಡಿದು || 2 || ಗಂಗೆ ಯಮುನೆ ತುಂಗಭದ್ರೆ ಸಿಂಧು ಮಹಾನದಿ […]

Read More

ಜಗವನ್ನೆ ಬೆಳಗಿಸಲು ನಾಡು ಸಜ್ಜಾಗಿಹುದು

ಜಗವನ್ನೆ ಬೆಳಗಿಸಲು ನಾಡು ಸಜ್ಜಾಗಿಹುದು ಅಸ್ತಮಿಸಿದೆ ನೀನು ಜನಮನದ ಸೂರ್ಯ| ಸ್ವರ್ಣಯುಗ ಸನ್ನಿಹಿತವಾಗಿರುವ ಸಮಯದಲಿ ಭಾರವಾಗಿಹುದಿಂದು ಭಾರತದ ಹೃದಯ || 1 || ಅಸ್ತಮಿಸಿದೆ ನೀನು……. ಅನುದಿನವು ಅನುಕ್ಷಣವು ಆತಂಕವೆದುರಿಸಿರೆ ಸಮ್ಮಿಶ್ರ ಸರ್ಕಾರದಾ ಪ್ರಯೋಗ| ನಿನ್ನ ಕೌಶಲದಿಂದ ಸಮರಸದ ಬಲದಿಂದ ಸಾಧಿಸಿದೆ ಅಭ್ಯುದಯದತುಲ ವೇಗ || 2 || ಅಸ್ತಮಿಸಿದೆ ನೀನು…… ರಾಷ್ಟ್ರವಾಣಿಯ ವಿಶ್ವಸಂಸ್ಥೆಯಲಿ ಮೊಳಗಿಸಿದೆ ಮಾನ್ಯತೆಯ ತಂದಿತ್ತೆ ಭಾರತಕೆ ನೀನು| ನಮ್ಮೇಳ್ಗೆ ಸಹಿಸದಿಹ ಅಗ್ರರಾಷ್ಟ್ರಗಳಿಂಗೆ ಅಣ್ವಸ್ತ್ರದೆಚ್ಚರಿಕೆ ನೀಡಿರುವೆ ನೀನು || 3 || ಅಸ್ತಮಿಸಿದೆ ನೀನು…….. […]

Read More

ಮಾತು ಮಾಗಲಿ ಭಾಷೆ ಬೆಳೆಯಲಿ

ಮಾತು ಮಾಗಲಿ ಭಾಷೆ ಬೆಳೆಯಲಿ ಹೃದಯ ಪಕ್ವತೆ ಪಡೆಯಲಿ ಭಾರತಾಂಬೆಯ ಕೀರ್ತಿ ಬೆಳಗಲಿ ಸೂರ್ಯ ಕಿರಣದ ತೆರದಲಿ || ಪ || ಧ್ವಜವು ಹಾರಲಿ ಮೇಲಕೇರಲಿ ನಾಡಹಿರಿಮೆಯ ಸಾರಲಿ ಜನರು ಸಮರಸ ಗೀತೆ ಹಾಡಲಿ ಐಕ್ಯ ಭಾವವು ಮೂಡಲಿ || 1 || ಮಕ್ಕಳೆಲ್ಲರು ಒಂದುಗೂಡಲಿ ಭಾರತಾಂಬೆಯ ಭಜಿಸಲಿ ಪ್ರೀತಿ ಪ್ರೇಮದ ಒರತೆ ಹರಿಯಲಿ ಬಂಧು ಭಾವವ ಬೆಸೆಯಲಿ || 2 || ಧರ್ಮರಕ್ಷಣೆಯಾಗಿ ಭಾರತ ವಿಶ್ವಗುರು ತಾನಾಗಲಿ ರಾಷ್ಟ್ರಭಕ್ತಿಯ ದಿವ್ಯ ಶಕ್ತಿಯು ಜಗಕೆ ಮಾರ್ಗವ ತೋರಲಿ […]

Read More

ಕೇಶವನ ಜೀವನವು ಎಮಗೆಲ್ಲ ದೀವಿಗೆಯು

ಕೇಶವನ ಜೀವನವು ಎಮಗೆಲ್ಲ ದೀವಿಗೆಯು ರಾಷ್ಟ್ರಕಾರ್ಯದಿ ಅವ ಮೇರು ಮಾದರಿಯು ಪರಮವೈಭವ ರಾಷ್ಟ್ರಕೇ ಗುರಿಯಿಟ್ಟನವನು ಪಥದರ್ಶಕನು ಆದ ಗುರಿಯ ಸಾಧನೆಗವನು || ಪ || ಹುರಿದು ಮುಕ್ಕುವ ಬಡತನವ ಬದಿಗೊತ್ತಿ ಯುವಕರಿಗೆ ತೋರಿದ ಗುರಿಯೆಡೆಗೆ ಕೈಯೆತ್ತಿ ಪಥಿಕ ಜೊತೆಗೊಯ್ದ ತಾನೆ ನಾವಿಕನಾಗಿ ಬೆಳಗುವ ಭಾರತದ ಸೂರ್ಯನೇ ತಾನಾಗಿ || 1 || ವ್ಯಕ್ತಿಗಳ ಪ್ರೇರಿಸಿ ತಾ ಕರೆತಂದನಂದು ರಾಷ್ಟ್ರಸೇವೆ ದೀಕ್ಷೆ ನೀಡಿದನು ನಿಂದು ವ್ಯಕ್ತಿ ವ್ಯಕ್ತಿಯು ಕೂಡೆ ರಾಷ್ಟ್ರಕಾರ್ಯವು ಎಂದು ಯೋಜಿಸಿ ನಿಲಿಸಿದನು ಸಂಘವೃಕ್ಷವ ಅಂದು || […]

Read More

ಅದ್ಭುತ ಆರಂಭ..ಆರಂಭವೇ ಉಗ್ರ

ಅದ್ಭುತ ಆರಂಭ.. ಆರಂಭವೇ ಉಗ್ರ, ಹೇಳು ರುಂಡಗಳ ಈ ದಂಡಿಗೆ, ರಣದ ಸಮಯ ಬಂದಿತೆಂದು ಸಾರು ನೀ ಗರ್ವ, ಘನತೆ, ಹಿರಿಮೆಯನ್ನೊ, ಇಲ್ಲ ನಿನ್ನ ಜೀವವನ್ನೇ ಇಂದು ಬಿಲ್ಲು ಬಾಣದಿಂ ಸಮರ್ಪಿಸು ಭೀಕರ ಆರಂಭ… ಇಚ್ಛೆಯಂತೆ ಪ್ರಾಣ ತೆಗೆವ ಇಚ್ಛೆಯಂತೆ ಪ್ರಾಣ ಬಿಡುವ ವ್ಯಕ್ತಿ ಮಾತ್ರ ಸರ್ವಶಕ್ತಿವಂತನು ಕೃಷ್ಣ ಕೂಗಿ ಹೇಳುತಿಹುದು ಭಾಗವತದ ಸಾರವಿಹುದು ಯುದ್ಧವೇ ವೀರರಿಗೆ ಪ್ರಮಾಣವು ಕೌರವರ ಗುಂಪೆ ಇರಲಿ ಪಾಂಡವರ ಗೂಡು ಇರಲಿ ಹೋರುವವನೇ ಇಲ್ಲಿನ ಮಹಾತ್ಮನು ಗೆಲುವು ಬೇಕು ಎನಿಸದಿರುವ ಯಾರನ್ನೂ […]

Read More

ಸಂಕಟದಾ ಕರಿಮೋಡದ ಛಾಯೆಯು (ದೃಢಸಂಕಲ್ಪವ ಮಾಡೋಣ)

ಸಂಕಟದಾ ಕರಿಮೋಡದ ಛಾಯೆಯು ವ್ಯಾಪಿಸಿದೆ ನಮ್ಮೆಲ್ಲರನೂ ಪೂರ್ಣಶಕ್ತಿಯಲಿ ದುಃಖವನಳಿಸುವ ದೃಢಸಂಕಲ್ಪವ ಮಾಡೋಣ || ಪ || ಈ ಸಂಘವು ಎಲ್ಲಿಯವರೆಗೋ ತಿಳಿಯದಾಗಿದೆ ನಮಗಿಂದು ಏನೇ ಇರಲಿ ಹೇಗೇ ಇರಲಿ ನಮ್ಮಯ ಗುರಿಯು ದಿಟವಿಂದು ಸಕ್ರಿಯರಾಗಿ ಶ್ರಮಿಸುವ ವ್ರತವನು ಸ್ವೀಕರಿಸುತ ಮುನ್ನಡೆಯೋಣ ಪೂರ್ಣಶಕ್ತಿಯಲಿ ದುಃಖವನಳಿಸುವ ದೃಢಸಂಕಲ್ಪವ ಮಾಡೋಣ || 1 || ಭೇಟಿಯು ಇಲ್ಲ ಕೂಟವು ಇಲ್ಲ, ಆದರೂ ಸ್ನೇಹವನರಳಿಸುವಾ ಧೈರ್ಯವ ತುಂಬುತ ಪ್ರೀತಿಯ ತೋರಿ ದೈನ್ಯ ನಿರಾಸೆಯ ನೀಗಿಸುವಾ ದುಃಖಿತ ಪೀಡಿತ ಬಂಧುಬಾಂಧವರ ಸೇವೆಯ ನಾವು ಗೈಯೋಣ […]

Read More

ಶ್ರಾವಣದ ಸಂಭ್ರಮದಲಿ

ಸ್ವಾತಂತ್ರ ಗೀತೆ ರಾಗ : ಹಿಂದೋಳ ಚತುರಶ್ರ ಏಕ ತಾಳ ಶ್ರಾವಣದ ಸಂಭ್ರಮದಲಿ ಸ್ವಾತಂತ್ರದ ಹೊಸ್ತಿಲಲಿ ನೆನೆಯೋಣ ಸೇನಾನಿಗಳ ಅಮರ ತ್ಯಾಗ ಸಾಹಸದ ಕಥನಗಳ ಸಾರುತ್ತಾ ಸ್ಮರಿಸೋಣ ಬಲಿದಾನಿಗಳ || ಶ್ರಾವಣದ ಸಂಭ್ರಮದಲಿ || ಧರ್ಮ ಭೂಮಿ ಭಾರತವ ಒಡೆದಾಳಲು ಬಂದಿದ್ದ ಬಿಳಿಯರಿಗೆ ಅಸ್ತ್ರ ಹಿಡಿದು ಮಾರಕನಾದೆ ಪ್ರಥಮ ಸಂಗ್ರಾಮದಲಿ ಅಗ್ನಿಜ್ವಾಲೆ ಸಿಡಿಸುತ್ತಾ ಕರ್ಮ ಭೂಮಿ ಭಾರತಕ್ಕೆ ಮಂಗಳನಾದೆ ಮಂಗಳನಾದೆ..! || ಶ್ರಾವಣದ ಸಂಭ್ರಮದಲಿ || ಶೂರವೀರ ಪರಂಪರೆಯ ಸಾಮ್ರಾಜ್ಯವ ಕಸಿಯುತ್ತಾ ಮೆರೆಯುತ್ತಿದ್ದ ದುರುಳ ದೊರೆಯ ಎದುರಿಸಿ […]

Read More