ನಮ್ಮಯ ತಾತ ಬಲುಗಂಭೀರ

ನಮ್ಮಯ ತಾತ ಬಲುಗಂಭೀರ
ನುಡಿ ನಡೆಗಳಲೂ ಆದರ್ಶ
ದೋಷವೆ ಇರದ ಸುಂದರ ಬದುಕು
ಎಂದಿಗು ಮೊಗದಲಿ ಸಂತೋಷ || ಪ ||

ಮಕ್ಕಳ ಜೊತೆಯಲಿ ಮಗುವಾಗುವರು
ನಗಿಸುತ ಕಥೆಯನು ಹೇಳುವರು
ತಾತನ ಮಾತಲಿ ಅರಿವಿನ ಹೂರಣ
ಮನೆತನಕವರು ಭೂಷಣರು || 1 ||

ವಿನಯದ ಮಾತಲಿ ನಮ್ಮನು ರಂಜಿಸಿ
ನಗುತಲೆ ತಪ್ಪನು ತಿದ್ದುವರು
ಪ್ರೀತಿಯ ಜೊತೆಯಲಿ ಪಾಠವ ಕಲಿಸಿ
ಬುದ್ಧಿಯ ಕಲಿಸಿ ಬೆಳೆಸುವರು || 2 ||

ಹಬ್ಬದ ಸಂಭ್ರಮ ಸಡಗರದಾ ದಿನ
ಬಾಗಿಲ ತೋರಣ ಕಟ್ಟುವರು
ಸ್ನಾನವ ಮಾಡಿ ಮಡಿಯಲೆ ಪೂಜಿಸಿ
ಪ್ರಸಾದ ನೀಡಿ ಹರಸುವರು || 3 ||

ಅಜ್ಜನ ದಿನಚರಿ ಮಾದರಿ ನಮಗೆ
ಅವರೊಡನಾಟದಿ ಹರುಷವಿದೆ
ಅಜ್ಜನ ಹೆಜ್ಜೆಯ ಗುರುತಲಿ ನಡೆವೆವು
ನಮಗದರಲ್ಲಿ ಹೆಮ್ಮೆಯಿದೆ || 4 ||

Leave a Reply

Your email address will not be published. Required fields are marked *

*

code