ನನಸಾಗಿಹುದು ಕೇಶವ ಕಂಡಿಹ

ನನಸಾಗಿಹುದು ಕೇಶವ ಕಂಡಿಹ
ಕನಸಿನ ಹಿಂದೂರಾಷ್ಟ್ರವು |
ದೇಶ ಬಾಂಧವರನೊಂದುಗೂಡಿಸಿದೆ
ಹಿಂದುತ್ವದ ಈ ಸೂತ್ರವು || ಪ ||

ಸೃಷ್ಟಿಯು ನೀಡಿದ ವರದಾನವಿದು
ವಿಂಧ್ಯ ಹಿಮಾಚಲ ಸಾಗರವು |
ತಾಯ್ನೆಲವೆಮ್ಮದು ಧರ್ಮ ಸಂಸ್ಕೃತಿಯ
ಅನುಪಮ ಕಲೆಗಳ ಆಗರವು || 1 ||

ಕೆಚ್ಚೆದೆ ಶೂರರ ಚರಿತ್ರೆಯೆಮಗಿರೆ
ಜೀವನ ದರ್ಶನ ಗೀತೆಯಲಿ |
ಮನುಕುಲದೇಳ್ಗೆಯೆ ಗುರಿಯಾಗಿಹುದು
ಸಾಗಿಹೆವಾ ಸತ್ಪಥದಲ್ಲಿ || 2 ||

ಸಂಘದ ಮಂತ್ರವ ಜಪಿಸಿ ನಿರಂತರ
ಧ್ಯೇಯದ ಪಥದಲಿ ಸಾಗುವೆವು |
ಭಾರತ ಭೂಮಿಯ ಶ್ರೇಷ್ಠತೆಯನ್ನು
ಜಗದುದ್ದಗಲಕು ಸಾರುವೆವು || 3 ||

Leave a Reply

Your email address will not be published. Required fields are marked *

*

code