ಮಾತು ಮಾಗಲಿ ಭಾಷೆ ಬೆಳೆಯಲಿ
ಹೃದಯ ಪಕ್ವತೆ ಪಡೆಯಲಿ
ಭಾರತಾಂಬೆಯ ಕೀರ್ತಿ ಬೆಳಗಲಿ
ಸೂರ್ಯ ಕಿರಣದ ತೆರದಲಿ || ಪ ||
ಧ್ವಜವು ಹಾರಲಿ ಮೇಲಕೇರಲಿ
ನಾಡಹಿರಿಮೆಯ ಸಾರಲಿ
ಜನರು ಸಮರಸ ಗೀತೆ ಹಾಡಲಿ
ಐಕ್ಯ ಭಾವವು ಮೂಡಲಿ || 1 ||
ಮಕ್ಕಳೆಲ್ಲರು ಒಂದುಗೂಡಲಿ
ಭಾರತಾಂಬೆಯ ಭಜಿಸಲಿ
ಪ್ರೀತಿ ಪ್ರೇಮದ ಒರತೆ ಹರಿಯಲಿ
ಬಂಧು ಭಾವವ ಬೆಸೆಯಲಿ || 2 ||
ಧರ್ಮರಕ್ಷಣೆಯಾಗಿ ಭಾರತ
ವಿಶ್ವಗುರು ತಾನಾಗಲಿ
ರಾಷ್ಟ್ರಭಕ್ತಿಯ ದಿವ್ಯ ಶಕ್ತಿಯು
ಜಗಕೆ ಮಾರ್ಗವ ತೋರಲಿ || 3 ||