ಜನನಿ ಭಾರತಿ ಜನ್ಮಧಾತ್ರಿ ದಿವ್ಯ ನಾಡಿದು ಸೋದರಿ
ಬಾದರಾಯಣ ಪರಮ ಋಷಿಗಳ ಪುಣ್ಯ ಬೀಡಿದು ಸೋದರ || ಪ ||
ಎಲ್ಲಿ ರಾಮಾಯಣವು ಬೆಳಗಿತೊ
ಎಲ್ಲಿ ಗೀತೆಯ ಸುಧೆಯು ಹರಿಯಿತೊ
ವೇದ ಘೋಷಗಳಲ್ಲಿ ಮೊಳಗಿತೊ
ಅದುವೆ ಭಾರತ ಸೋದರ
ನಮ್ಮ ನಾಡಿದು ಸೋದರಿ || 1 ||
ಎಲ್ಲಿ ಮೋಹನ ಕೊಳಲನೂದಿದ
ಎಲ್ಲಿ ಪರಶಿವ ನರ್ತಿಸಿದನು
ವಾಣಿ ಲಕುಮಿ ಗೌರಿ ಗಣಪತಿ ಪೂಜೆಗೊಳ್ಳುವ ನಾಡಿದು
ದೇವತೆಗಳಬೀಡಿದು || 2 ||
ಗಂಗೆ ಯಮುನೆ ತುಂಗಭದ್ರೆ
ಸಿಂಧು ಮಹಾನದಿ ಕೃಷ್ಣೆಕಪಿಲೆ
ಗೋದಿಕಾವೇರಿಯರು ಹರಿವ
ನಾಡಿದು ನಮ್ಮದು ಸುಫಲ ಸುಂದರ ಬೀಡಿದು || 3 ||