ಸಂಘಶಾಖೆಯೊಂದು ಭುವಿಯ ಬಯಲಿನಲ್ಲಿ

ಸಂಘಶಾಖೆಯೊಂದು ಭುವಿಯ ಬಯಲಿನಲ್ಲಿ ನೆಲೆಸಿತು
ಜನರ ಮನದ ಕ್ಲೇಶವಳಿಸಿ ಗುರಿಯನೊಂದ ನೀಡಿತು || ಪ ||

ಭರತಭೂಮಿ ನಮ್ಮ ತಾಯಿ ನಾವು ಅವಳ ಮಕ್ಕಳು
ಹಿಂದುಭೂಮಿ ನಮ್ಮನೆಲ್ಲ ಸುಖದಿ ಬೆಳೆಸಿದಂಥ ತಾಯಿ
ಪುಣ್ಯಭೂಮಿ ಎನ್ನ ಕಾಯ ನಿನಗೆ ಮುಡಿಪುಗೊಳಿಸುವೆ
ಮಂಗಲೆ ಸುಮಂಗಲೆ ವಂದನೆ ಅಭಿವಂದನೆ || 1 ||

ಶಕ್ತಿಶಾಲಿ ಪ್ರಭುವೆ ನಿನಗೆ ಶಿರವಬಾಗಿ ನಮಿಪೆವು
ಹಿಂದುರಾಷ್ಟ್ರದಂಗವೆಂಬ ಭಾವವೆಮದು ಅಚಲವು
ಈಶ ನಿನ್ನ ಕಾರ್ಯಕಾಗಿ ಸದಾ ಸಿದ್ಧರಿರುವೆವು
ಕಾರ್ಯ ಸಫಲವಾಗಲೆಂದು ಹರಸು ಎಮಗೆ ಹರಸು || 2 ||

ವಿಶ್ವದಲ್ಲೆ ಸೋಲರಿಯದ ಅಜಯವೆನಿಪ ಶಕ್ತಿಯ
ಜಗವೆ ಮೆಚ್ಚಿ ನಮ್ರಗೊಳಿಪ ವಿನಯಸಹಿತ ಶೀಲವ
ನಾವೆ ಆಯ್ದ ಕಠಿಣ ದಾರಿ ಸುಗಮಗೊಳಿಪ ಜ್ಞಾನವ
ವೀರವ್ರತವ ಗುರಿಯನಿಷ್ಠೆ ಕರುಣಿಸೆಮಗೆ ಕರುಣಿಸು || 3 ||

ವಿಜಯಶಾಲಿ ಸಂಘಶಕ್ತಿಯಿಂದ ರಾಷ್ಟ್ರ ಧರ್ಮವ
ಅತ್ಯುನ್ನತ ವಿಭವಕೇರುವಂಥ ಗುರಿಯ ಸಾಧಿಸೆ
ಸಫಲವಾಗಲೆಂದು ಕೋರಿ ನಿನ್ನಾಶಿಷ ಬೇಡುತ
ಭಾರತ ಮಾತೆಗೆ ಜಯವು ಭಾರತ ಮಾತೆಗೆ ಜಯವು || 5 ||

Leave a Reply

Your email address will not be published. Required fields are marked *

*

code