ಯೋಗವೇ ಜೀವನ… ಸಹಯೋಗವೆ… ಸಹಜೀವನ ಅಂಬರದಾಚೆ, ಸಾಗರದಾಚೆ ಬೆಳಗುತಿದೆ ಯೋಗವು, ಮನೆಮನೆಯಲ್ಲೂ, ಮನಮನದಲ್ಲೂ ಅರಳಲಿದೆ ಯೋಗವು ವ್ಯಕ್ತಿಯ ಬದುಕಿನ ಕಣಕಣಗಳಿಗೂ ವ್ಯಾಪಿಸಲಿದೆ ಯೋಗವು ಜೀವನವೆಂದರೆ ಯೋಗ… ಭಾವನೆಗಳಿಗೆ ಸಂಯೋಗ… || ಪ || ನುಡಿದಂತೆ ನಡೆಯುವ ಜೀವನ ಯೋಗ ಸತ್ಯ ಅಹಿಂಸೆಯ ಪಾಲನೆ ಯೋಗ, ಮನಸ್ಸೆಲ್ಲ ನಿರ್ಮಲ ಹೃದಯ ನಿಷ್ಕಲ್ಮಶ ಸಂಸ್ಕಾರ, ಸಂಯಮ, ಅದುವೆ ಯೋಗ || 1 || ಜಗಕ್ಕೆಲ್ಲ ಬೆಳಕೀವ ಸೂರ್ಯನಿಗೆ ನಮನ ಮಂತ್ರಗಳಾ ಯೋಗ ಸಮ್ಮಿಲನ ಶರೀರಕೆ ವ್ಯಾಯಾಮ ಜೊತೆಗೆ ಪ್ರಾಣಾಯಾಮ ನಿರ್ಮೋಹಿ, […]
ಸಂಘಗಂಗೆಯ ಭಾವಜಲದಲಿ ಮಿಂದು ಬಂದಿಹ ಯೋಧನೇ | ಕಾರ್ಯವದು ಕೈಬೀಸಿ ಕರೆದಿದೆ ತೋರು ನಿನ್ನಯ ಸಾಧನೆ || ಪ || ಧರ್ಮಪಥವಿದೆ ಕರ್ಮರಥವಿದೆ ರಥಕೆ ನೀನೇ ಸಾರಥಿ ವೇಗನಿನ್ನದು ವಾಘೆ ನಿನ್ನದು ಹರಸುತಿರುವಳು ಭಾರತಿ || 1 || ನಿಷೇಧದಂಚಿದೆ ವಿಧಿಯ ಮಾರ್ಗಕೆ ಚರಿತವಿರಚಿತ ಗುರುತಿದೆ ಬುದ್ಧಿ ತನುಮನ ತಿದ್ದಿ ತೀಡಲು ಗುರುವಿನೊಲವಿನ ಕೃಪೆ ಇದೆ || 2 || ಪೂರ್ವಜನ್ಮದ ಪುಣ್ಯ ನಿನ್ನದು ತೇರನೆಳೆಯುವ ಕಾಯಕ ಭರತಮಾತೆಯ ವಿಶ್ವವಿಜಯಕೆ ಸಮಯಕೊದಗಿಹ ಸೇವಕ || 3 ||
ಮಬ್ಬು ಕಳೆದು ಎಚ್ಚರಾಗಿ ಕೆಚ್ಚಿನಿಂದ ಮುಂದೆ ಸಾಗಿ ಕೊಚ್ಚಿ ಹಾಕಿ ಪಾಪಿಗಳನು ಭರತ ಮಾತೆ ಪುತ್ರರಾಗಿ || ಪ || ಹಿಂದು ಅವನೇ ಕರ್ಮಯೋಗಿ, ಪರರ ಹಿತಕೆ ಅವನು ತ್ಯಾಗಿ ಎಲ್ಲರೊಂದು ಎನುವ ಬಂಧು, ದುಡಿಯುವವನು ಲೋಕಕಾಗಿ ರಣವ ಬಯಸದಂಥ ಗುಣವು ಆದನಲ್ಲ ಅವನು ಹೇಡಿ ಶಾಂತಿ ಕದಡಿ ರಾಡಿಯಿನ್ನು ಸಹಿಸಿ ಸಾಕು ಸಿದ್ಧರಾಗಿ || 1 || ಉಗ್ರಗಾಮಿ ಒಳಗೆ ಹೊರಗೆ, ನಗುತಲಿಹನು ಅಳುವ ನೋಡಿ ಬಗ್ಗು ಬಡಿಯಬೇಕು ಕ್ರೌರ್ಯ, ಶೀಘ್ರ ಅವರ ಅಂತ್ಯ ಹಾಡಿ […]
ಮನುಕುಲದುಳಿವಿಗೆ ಮನುಜತೆಯೇಳ್ಗೆಗೆ | ಇರುವುದೊಂದೇ ದಾರಿ ಹಿಂದುತ್ವದ ಹೆದ್ದಾರಿ || ಪ || ಮೇದಿನಿಯೊಡಲಿನ ಬೇಗೆಯ ತಣಿಸಲು ರೋಷದ್ವೇಷಗಳ ಬೆಂಕಿಯ ಮಣಿಸಲು ಬಂಧುತ್ವದ ಸವಿ ಅಮೃತ ಉಣಿಸಲು ಇರುವುದೊಂದೇ ದಾರಿ ಹಿಂದುತ್ವದ ಹೆದ್ದಾರಿ || 1 || ಚಲಿಸಿದೆ ವಿಶ್ವ ವಿನಾಶದ ಕಡೆಗೆ ಪ್ರಗತಿಯ ಹೆಸರಲಿ ಪತನದ ಎಡೆಗೆ ಅಜ್ಞಾನದ ಅಧ್ವಾನದ ತಡೆಗೆ ಇರುವುದೊಂದೇ ದಾರಿ ಹಿಂದುತ್ವದ ಹೆದ್ದಾರಿ || 2 || ಉಗ್ರವಾದಿಗಳ ಭೀಕರ ಕೃತ್ಯ ಬರ್ಬರತೆಯ ಪೈಶಾಚಿಕ ನೃತ್ಯ ತಡೆಗಟ್ಟುವುದೆಮ್ಮಯ ಕರ್ತವ್ಯ ಇರುವುದೊಂದೇ ದಾರಿ […]
ನಿನ್ನೊಲವಿನಲಿ ನಲಿವ ಭಾಗ್ಯವೆಮ್ಮದು ತಾಯೆ ಬಣ್ಣನೆಗೆ ನಿಲುಕದಿಹ ಭವ್ಯ ಸಂಸ್ಕೃತಿ ಪ್ರಭೆಯೆ || ಪ || ಸರ್ವರಲು ಸಮಭಾವ ಹಿಂದುತ್ವದೌನ್ನತ್ಯ ಅಸ್ಮಿತೆಗೆ ಕುಂದಿರದ ಸ್ವಂತಿಕೆಯ ಸಾಂಗತ್ಯ ವಿಧವಿಧದ ಭಾಷೆಮತ ಒಮ್ಮತದ ವೈವಿಧ್ಯ ತ್ಯಾಗದೆಲೆ ಅತಿಹಿತವು ಜಗದಗಲ ಬಾಂಧವ್ಯ || 1 || ಅತಿಸಹನೆ ಒಳಿತಲ್ಲ ಸ್ವಾಭಿಮಾನಕೆ ಧಕ್ಕೆ ಜನನಿಯಾದೆಯೆ ದುರ್ಗೆ ದುಷ್ಟ ಸಂಹಾರಿಣಿಯೆ ಮರೆತುಬಿಟ್ಟೆವು ಚರಿತೆ ಮನ್ನಿಸೆಮ್ಮನು ತಾಯೆ ಪಾಪಿಗಳ ದುಷ್ಕೃತಿಯು ಸುತರಿಗಿಲ್ಲವೆ ನೆಲೆಯೆ || 2 || ದೋಷಗಳನರಿತಿಹೆವು ಎಚ್ಚರಾಗಿಹೆವಿಂದು ಹಿಂದುಪಡೆ ಭೊರ್ಗೆರೆವ ಶರಧಿಯಾಗಿಹುದಿಂದು ಸ್ವಾರ್ಥ […]
ನಾಡಸೇವೆಯೆ ನಮ್ಮ ಜೀವನದ ಉಸಿರು ಧನ್ಯತೆಯೆ ಬಹುಮಾನ ಬೇಡೆಮಗೆ ಹೆಸರು || ಪ || ಮೂರು ದಿನ ಬಾಳ್ವೆಯದು ಸಾರ್ಥಕವು ಆಗುವುದು ಆದರ್ಶದಮೃತವ ಸ್ವೀಕರಿಸಿದಾಗ ಪತಿತರುದ್ಧಾರದ ಪುಣ್ಯತಮ ಕಾಯಕದಿ ಒಮ್ಮನದಿ ಒಗ್ಗೂಡಿ ಸಹಕರಿಸಿದಾಗ || 1 || ಬರಿಯ ಬೋಧನೆಗಿಲ್ಲಿ ಕಿಂಚಿತ್ತು ಬೆಲೆಯಿಲ್ಲ ವಚನ ಶೂರರಿಗೆಂದು ಶಾಶ್ವತದ ನೆಲೆಯಿಲ್ಲ ಕಣ್ಣ ಮುಂದಿರೆ ನಾಕ ಬೆನ್ನ ಹಿಂದೆಯೆ ನರಕ ಮುನ್ನಡೆದು ಶ್ರಮಿಸುವವಗೆಂದಿಗೂ ಸೋಲಿಲ್ಲ || 2 || ನುಡಿವ ಮಾತಿಗೆ ಶೋಭೆ ನಮ್ಮದೊಂದೊಂದು ಕೃತಿ ನೀಡಬೇಕಿಹುದಿಂದು ಕಾಯಕಕೆ ಶೀಘ್ರಗತಿ […]
ಧ್ಯೇಯ ಶಿಖರವೇರಲು ಕಾಯಲೇಕೆ ಸಾಧಕ ಸಾಧಿಸುವುದು ನಿನ್ನ ಕಾಯಕ ಎತ್ತರ ಎತ್ತರ ಇನ್ನು ಎತ್ತರ ಕೆಚ್ಚೆದೆಯ ಸಾಧನೆಯೇ ನಿನ್ನ ಉತ್ತರ ಉತ್ತರ ಉತ್ತರ ಒಂದೇ ಉತ್ತರ || ಪ || ಕವಿದ ಕಾರ್ಮೋಡವೆಂದೂ ಉಳಿಯುವುದೇ ಅನುದಿನ ಭವದ ಆಸೆ ಆಕಾಂಕ್ಷೆ ತೊರೆದು ಬಿಡು ಈ ಕ್ಷಣ ಬಾಳ ಬವಣೆ ಕಳೆದು ಸಂಘ ಸೂತ್ರ ಹಿಡಿದು ಸೋಲಿಗೆದುರು ನಿಲ್ಲುವುದೇ ನಿನ್ನ ಉತ್ತರ || 1 || ಸುತ್ತುವರಿದ ಮೌಢ್ಯತೆಯ ಸುತ್ತ ಯುದ್ಧವಾಡುತ ಸತ್ವಭರಿತ ಕಾರ್ಯ ತತ್ವ ಎಂಬ ಅಸ್ತ್ರ […]
ತಾಯಿಯ ಕರೆಯಿದು ಕಂದಾ ಓಗೊಡು ಮೃದು ಬಿಡಲಿಂದ ಸಂಘರ್ಷದ ಕಡು ಮಾತೇಕೆ ನಾಡಿನ ಸೇವೆಗೆ ತಡವೇಕೆ……? || ಪ || ಸೋಲಿನ ಹಿಂದೆ ಗೆಲುವಿಹುದು ನೋವಿನ ಹಿಂದೆ ನಲಿವಿಹುದು ದುಃಖದ ಹಿಂದೆ ಸುಖವಿಹುದು ಕಲಿಯುವ ಮನದಲಿ ಛಲವಿಹುದು ಆಲಸ್ಯದ ಕಡು ಮಾತೇಕೆ ನಾಡಿನ ಸೇವೆಗೆ ತಡವೇಕೆ…….. || 1 || ಗೀತೆಯ ನೀತಿಯ ಬೆಳಕಿಹುದು ವೇದದ ಸಾರದ ನೆರಳಿಹುದು ಆಧ್ಯಾತ್ಮದ ಕಂಪಿನ ತಂಪಿಹುದು ದಾಸರ ಶ್ರೇಷ್ಠರ ನುಡಿಯಿಹುದು ಆತ್ಮವಿಶ್ವಾಸಕೆ ಬರವೇಕೆ ನಾಡಿನ ಸೇವೆಗೆ ತಡವೇಕೆ……. || 2 […]
ಎಚ್ಚರಾಗು ಎಚ್ಚರಾಗು ಎಚ್ಚರಾಗು ಧೀರ ಭರತಮಾತೆ ಕರೆಯುತಿಹಳು ಓಗೊಡುತ ಬಾರಾ ಎಲ್ಲಿ ನಿನ್ನ ಕ್ಷಾತ್ರತೇಜ ಮೆರೆದು ನಿಂತ ಶೌರ್ಯ? ತಾಯ ಬಂಧ ಬಿಡಿಸುವಂದು ತೋರಿದಂಥ ಧೈರ್ಯ? || ಪ || ಚಲಿಸಲಿಲ್ಲ ಹಿಮದಗಿರಿಯ ಅಚಲ ನಿಂತ ನಿಲುವು ನಿಲ್ಲಲಿಲ್ಲ ಕಡಲ ಮೊರೆತ, ಕ್ಷಣವು ಇಲ್ಲ ಬಿಡುವು ದಣಿಯಲಿಲ್ಲ ಗಂಗೆ ತುಂಗೆ ನಿನಗೆ ಅನ್ನ ನೀಡಿ ನಿನ್ನ ಮನವದೇಕೆ ಬದಲು – ಯಾರ ಮಂತ್ರ ಮೋಡಿ? || 1 || ಅನ್ಯರೆಲ್ಲ ತುಳಿವರಲ್ಲ ನಮ್ಮ ನೆಲದ ಮೇಲೆ ದರ್ಪ […]
ಸಾಗು ಮುಂದೆ ಸಾಗು ಮುಂದೆ ಭಾರತದ ಸಿಪಾಯಿಯೇ ಧೈರ್ಯ ಶೌರ್ಯ ಮೂಡಿಬರಲಿ, ಹರಸಿ ಕಳುಹು ತಾಯಿಯೇ || ಪ || ಅಡಿಯ ಮುಂದೆ ಇಡಲು ಸ್ವರ್ಗ, ಹಿಂದೆ ಘೋರ ನರಕವು ಹೆತ್ತ ಒಡಲ ಋಣವ ಸಲಿಸಲಿಂದು ಬಂದ ಭಾಗ್ಯವು ಹಾಡು ಸಮರಗೀತೆಯ ನೆನೆಯೊ ವೀರಗಾಥೆಯ ಭಾರತಿಗೆ ಜೈ, ಭಾರತಿಗೆ ಆರತಿಯು ಜೈ ಜೈ ಜೈ || 1 || ದೇಶಭಕ್ತಿ ಉಕ್ಕಿ ಹರಿದು ರಕ್ತ ಬೆಚ್ಚಗಾಗಲಿ ಕೊರೆವ ಹಿಮದ ರಾಶಿಯಲ್ಲು ಮೈಯ ಛಳಿಯು […]