ಯೋಗವೇ ಜೀವನ

ಯೋಗವೇ ಜೀವನ… ಸಹಯೋಗವೆ… ಸಹಜೀವನ
ಅಂಬರದಾಚೆ, ಸಾಗರದಾಚೆ ಬೆಳಗುತಿದೆ ಯೋಗವು,
ಮನೆಮನೆಯಲ್ಲೂ, ಮನಮನದಲ್ಲೂ ಅರಳಲಿದೆ ಯೋಗವು
ವ್ಯಕ್ತಿಯ ಬದುಕಿನ ಕಣಕಣಗಳಿಗೂ ವ್ಯಾಪಿಸಲಿದೆ ಯೋಗವು
ಜೀವನವೆಂದರೆ ಯೋಗ… ಭಾವನೆಗಳಿಗೆ ಸಂಯೋಗ… || ಪ ||

ನುಡಿದಂತೆ ನಡೆಯುವ ಜೀವನ ಯೋಗ
ಸತ್ಯ ಅಹಿಂಸೆಯ ಪಾಲನೆ ಯೋಗ,
ಮನಸ್ಸೆಲ್ಲ ನಿರ್ಮಲ ಹೃದಯ ನಿಷ್ಕಲ್ಮಶ
ಸಂಸ್ಕಾರ, ಸಂಯಮ, ಅದುವೆ ಯೋಗ || 1 ||

ಜಗಕ್ಕೆಲ್ಲ ಬೆಳಕೀವ ಸೂರ್ಯನಿಗೆ ನಮನ
ಮಂತ್ರಗಳಾ ಯೋಗ ಸಮ್ಮಿಲನ
ಶರೀರಕೆ ವ್ಯಾಯಾಮ ಜೊತೆಗೆ ಪ್ರಾಣಾಯಾಮ
ನಿರ್ಮೋಹಿ, ನಿರೋಗಿ ಪರಹಿತ ಜೀವನ || 2 ||

ಶ್ರಮವೀವ ದುಡಿಮೆಗೆ
ಬಳಲುವುದು ಕಾಯ
ಯೋಗನಿದ್ರೆಯ ಕ್ರಿಯೆಗೆ ಬಳಲಿಕೆಯೇ ಮಾಯಾ
ಸರ್ವರ ಉನ್ನತಿ ಸರ್ವರಿಗೇ ಶಾಂತಿ
ಓಂ ಶಾಂತಿ… ಓಂ ಶಾಂತಿ… ಶಾಂತಿಯೇ ಜೀವನ || 3 ||

Leave a Reply

Your email address will not be published. Required fields are marked *

*

code