ತಾಯಿಯ ಕರೆಯಿದು ಕಂದಾ
ಓಗೊಡು ಮೃದು ಬಿಡಲಿಂದ
ಸಂಘರ್ಷದ ಕಡು ಮಾತೇಕೆ
ನಾಡಿನ ಸೇವೆಗೆ ತಡವೇಕೆ……? || ಪ ||
ಸೋಲಿನ ಹಿಂದೆ ಗೆಲುವಿಹುದು
ನೋವಿನ ಹಿಂದೆ ನಲಿವಿಹುದು
ದುಃಖದ ಹಿಂದೆ ಸುಖವಿಹುದು
ಕಲಿಯುವ ಮನದಲಿ ಛಲವಿಹುದು
ಆಲಸ್ಯದ ಕಡು ಮಾತೇಕೆ
ನಾಡಿನ ಸೇವೆಗೆ ತಡವೇಕೆ…….. || 1 ||
ಗೀತೆಯ ನೀತಿಯ ಬೆಳಕಿಹುದು
ವೇದದ ಸಾರದ ನೆರಳಿಹುದು
ಆಧ್ಯಾತ್ಮದ ಕಂಪಿನ ತಂಪಿಹುದು
ದಾಸರ ಶ್ರೇಷ್ಠರ ನುಡಿಯಿಹುದು
ಆತ್ಮವಿಶ್ವಾಸಕೆ ಬರವೇಕೆ
ನಾಡಿನ ಸೇವೆಗೆ ತಡವೇಕೆ……. || 2 ||
ದುಷ್ಟರ ಹಾವಳಿ ಸುಳಿದಿಹುದು
ಕೊಲೆ ಸುಲಿಗೆಗಳು ಬೆಳೆದಿಹುದು
ಭ್ರಷ್ಟರ ಅಬ್ಬರ ಮೊರೆದಿಹುದು
ಮತಾಂತರ ಕೃತ್ಯವು ಮೆರೆದಿಹುದು
ನಿಜಸ್ಥಿತಿ ಅರಿಯಲು ತಡವೇಕೆ
ನಾಡಿನ ಸೇವೆಗೆ ತಡವೇಕೆ……. || 3 ||
ದೀನರ ಸೇವೆಯಗೈಯಲಿದೆ
ಹಿಂದುತ್ವದ ಶಿಕ್ಷಣ ನೀಡಲಿದೆ
ಸಕಲರ ಸಖ್ಯವ ಬೆಳಸಲಿದೆ
ಬಂಧುತ್ವವ ಜಗದಲಿ ಸಾರಲಿದೆ
ನಿದ್ದೆಯ ಮಂಪರು ಇನ್ನೇಕೆ
ನಾಡಿನ ಸೇವೆಗೆ ತಡವೇಕೆ……..|| 4 ||