ಗುರುವಿನಾಣತಿಯಂತೆ ನೀ ಬಂದೆ ಭಾರತಕೆ ಅವರ ಮಾರ್ಗದಿ ನಡೆದು ಬೆಳೆದೆ ಬಾನೆತ್ತರಕೆ ನನ್ನದೇನೂ ಇಲ್ಲ ಎಂಬರಿವ ಮೂಡಿಸಿದೆ ಭಾರತೀಯರ ಮನದಿ ಬೇರೂರಿದೆ || ಪ || ಅನ್ಯ ನೆಲದಲಿ ಜನಿಸಿ ಬೆಳೆದ ಭಾರತಪುತ್ರಿ ಶ್ರೀಮಾತೆ ಸುತೆಯಾದೆ ಧವಳ ಕುವರಿ ಗುರುವಿನನುಗ್ರಹ ಪಡೆದ ವಿವೇಕ ಮಾನಸ ಪುತ್ರಿ ಪರಮ ಗುರುವಿನ ಕೃಪೆಗೆ ಪಾತ್ರ ಸುಕುಮಾರಿ || 1 || ಬಾಲೆಯರಿಗೆ ಗುರುವು ವಿಧವೆಯರ ಬಾಳ್ಬೆಳಕು ತರುಣಗಣದ ಕ್ರಾಂತಿ ಬೋಧಕಿಯು ನೀನಾದೆ ಮಹಾವ್ಯಾಧಿಯ ಸೋಂಕು ಎರಗೆ ಮಾನವ ಕುಲಕೆ ಸ್ವಚ್ಛತೆಯ […]
ಸಂಘಶಾಖೆಯೊಂದು ಭುವಿಯ ಬಯಲಿನಲ್ಲಿ ನೆಲೆಸಿತು ಜನರ ಮನದ ಕ್ಲೇಶವಳಿಸಿ ಗುರಿಯನೊಂದ ನೀಡಿತು || ಪ || ಭರತಭೂಮಿ ನಮ್ಮ ತಾಯಿ ನಾವು ಅವಳ ಮಕ್ಕಳು ಹಿಂದುಭೂಮಿ ನಮ್ಮನೆಲ್ಲ ಸುಖದಿ ಬೆಳೆಸಿದಂಥ ತಾಯಿ ಪುಣ್ಯಭೂಮಿ ಎನ್ನ ಕಾಯ ನಿನಗೆ ಮುಡಿಪುಗೊಳಿಸುವೆ ಮಂಗಲೆ ಸುಮಂಗಲೆ ವಂದನೆ ಅಭಿವಂದನೆ || 1 || ಶಕ್ತಿಶಾಲಿ ಪ್ರಭುವೆ ನಿನಗೆ ಶಿರವಬಾಗಿ ನಮಿಪೆವು ಹಿಂದುರಾಷ್ಟ್ರದಂಗವೆಂಬ ಭಾವವೆಮದು ಅಚಲವು ಈಶ ನಿನ್ನ ಕಾರ್ಯಕಾಗಿ ಸದಾ ಸಿದ್ಧರಿರುವೆವು ಕಾರ್ಯ ಸಫಲವಾಗಲೆಂದು ಹರಸು ಎಮಗೆ ಹರಸು || 2 […]
ಮನದಿ ಮಂದಾಸನವನಿತ್ತಿಹೆ ಮಾತೆ ಮೋದದಿ ಮಂಡಿಸು ಮೂಢನಾಗಿಹೆ ಮೌಲ್ಯ ಮರೆತಿಹೆ ಮುನಿಸುದೋರದೆ ಮನ್ನಿಸು || ಪ || ಮೂಡಣಾಗಸದಲ್ಲಿ ಮಿತ್ರನು ಮಗುವಿನಂದದೊಳುದಿಸಲು ಮಮತೆಯಾ ಮಂದಾರವರಳಿತು ಮಧುರ ಮಧುವನ್ನೀಯಲು || 1 || ಮುನಿ ಮನೀಷಿಗಳೆಲ್ಲ ಮಾಡಿದ ಮನನ ಮಂಥನದಿಂದಲಿ ಮೇದಿನಿಗೆ ಮುದ ಮೋಕ್ಷವಾತ್ಮಕೆ ಮಂತ್ರವುದಿಸಿತು ಮನದಲಿ || 2 || ಮನುಜನುಳಿವಿನ ಮಾರ್ಗವರಿಯಿತು ಮಂತ್ರವಾಯಿತು ಮುನ್ನುಡಿ ಮೋಹ ಮರೆಯುತ ಮದವನಳಿಸುತ ಮನುಜನಿರಿಸಿದ ಮುಂದಡಿ || 3 || ಮಾನವನ ಮಹದೇವನಾಗಿಪ ಮಂತ್ರ ಮಾರ್ದನಿಗೊಳುತಿದೆ ಮಗುವಿನಂದದಿ ಮಣಿದೆ ಮುದದಲಿ […]
ನನಸಾಗಿಹುದು ಕೇಶವ ಕಂಡಿಹ ಕನಸಿನ ಹಿಂದೂರಾಷ್ಟ್ರವು | ದೇಶ ಬಾಂಧವರನೊಂದುಗೂಡಿಸಿದೆ ಹಿಂದುತ್ವದ ಈ ಸೂತ್ರವು || ಪ || ಸೃಷ್ಟಿಯು ನೀಡಿದ ವರದಾನವಿದು ವಿಂಧ್ಯ ಹಿಮಾಚಲ ಸಾಗರವು | ತಾಯ್ನೆಲವೆಮ್ಮದು ಧರ್ಮ ಸಂಸ್ಕೃತಿಯ ಅನುಪಮ ಕಲೆಗಳ ಆಗರವು || 1 || ಕೆಚ್ಚೆದೆ ಶೂರರ ಚರಿತ್ರೆಯೆಮಗಿರೆ ಜೀವನ ದರ್ಶನ ಗೀತೆಯಲಿ | ಮನುಕುಲದೇಳ್ಗೆಯೆ ಗುರಿಯಾಗಿಹುದು ಸಾಗಿಹೆವಾ ಸತ್ಪಥದಲ್ಲಿ || 2 || ಸಂಘದ ಮಂತ್ರವ ಜಪಿಸಿ ನಿರಂತರ ಧ್ಯೇಯದ ಪಥದಲಿ ಸಾಗುವೆವು | ಭಾರತ ಭೂಮಿಯ ಶ್ರೇಷ್ಠತೆಯನ್ನು […]
ಜನನಿ ಭಾರತಿ ಜನ್ಮಧಾತ್ರಿ ದಿವ್ಯ ನಾಡಿದು ಸೋದರಿ ಬಾದರಾಯಣ ಪರಮ ಋಷಿಗಳ ಪುಣ್ಯ ಬೀಡಿದು ಸೋದರ || ಪ || ಎಲ್ಲಿ ರಾಮಾಯಣವು ಬೆಳಗಿತೊ ಎಲ್ಲಿ ಗೀತೆಯ ಸುಧೆಯು ಹರಿಯಿತೊ ವೇದ ಘೋಷಗಳಲ್ಲಿ ಮೊಳಗಿತೊ ಅದುವೆ ಭಾರತ ಸೋದರ ನಮ್ಮ ನಾಡಿದು ಸೋದರಿ || 1 || ಎಲ್ಲಿ ಮೋಹನ ಕೊಳಲನೂದಿದ ಎಲ್ಲಿ ಪರಶಿವ ನರ್ತಿಸಿದನು ವಾಣಿ ಲಕುಮಿ ಗೌರಿ ಗಣಪತಿ ಪೂಜೆಗೊಳ್ಳುವ ನಾಡಿದು ದೇವತೆಗಳಬೀಡಿದು || 2 || ಗಂಗೆ ಯಮುನೆ ತುಂಗಭದ್ರೆ ಸಿಂಧು ಮಹಾನದಿ […]
ನಿತ್ಯ ಸಾಧನಾ ಕೀ ಜ್ಯೋತಿ ಸೆ ರಾಷ್ಟ್ರ ದೇವಕಾ ಧ್ಯಾನ ಧರೇ ರಾಷ್ಟ್ರ ಧರ್ಮಕಿ ಧ್ವಜಾ ಹಾಥ ಲೇ ಭಾರತ ಕಾ ಉತ್ಥಾನ ಕರೆ ದಿಗ ದಿಗಂತ ಜಯಗಾನ ಕರೇ || ಪ || ಧರ್ಮತತ್ವ ಕೀ ಕರ್ಮಭೂಮಿ ಯಹ ಋಷಿ ಮುನಿಯೋಂಕಿ ಪುಣ್ಯಧರಾ ಸಪ್ತ ಸರಿತ ಕೇ ನಿರ್ಮಲ ಜಲಸೇ ಹೃದಯ ಹಮಾರಾ ಶುದ್ಧ ಬನಾ ದಿವ್ಯ ಮಾರ್ಗ ಪರ ಚಲತೇ ಚಲತೇ ಜೀವನ ಕೋ ಹಮ ಸಾರ್ಥ ಕರೇ || 1 || ಶಾಶ್ವತ […]
ಜಗವನ್ನೆ ಬೆಳಗಿಸಲು ನಾಡು ಸಜ್ಜಾಗಿಹುದು ಅಸ್ತಮಿಸಿದೆ ನೀನು ಜನಮನದ ಸೂರ್ಯ| ಸ್ವರ್ಣಯುಗ ಸನ್ನಿಹಿತವಾಗಿರುವ ಸಮಯದಲಿ ಭಾರವಾಗಿಹುದಿಂದು ಭಾರತದ ಹೃದಯ || 1 || ಅಸ್ತಮಿಸಿದೆ ನೀನು……. ಅನುದಿನವು ಅನುಕ್ಷಣವು ಆತಂಕವೆದುರಿಸಿರೆ ಸಮ್ಮಿಶ್ರ ಸರ್ಕಾರದಾ ಪ್ರಯೋಗ| ನಿನ್ನ ಕೌಶಲದಿಂದ ಸಮರಸದ ಬಲದಿಂದ ಸಾಧಿಸಿದೆ ಅಭ್ಯುದಯದತುಲ ವೇಗ || 2 || ಅಸ್ತಮಿಸಿದೆ ನೀನು…… ರಾಷ್ಟ್ರವಾಣಿಯ ವಿಶ್ವಸಂಸ್ಥೆಯಲಿ ಮೊಳಗಿಸಿದೆ ಮಾನ್ಯತೆಯ ತಂದಿತ್ತೆ ಭಾರತಕೆ ನೀನು| ನಮ್ಮೇಳ್ಗೆ ಸಹಿಸದಿಹ ಅಗ್ರರಾಷ್ಟ್ರಗಳಿಂಗೆ ಅಣ್ವಸ್ತ್ರದೆಚ್ಚರಿಕೆ ನೀಡಿರುವೆ ನೀನು || 3 || ಅಸ್ತಮಿಸಿದೆ ನೀನು…….. […]
ಸೈನಿಕಾ ಆಶಂಸತ ಶುಭೋದಯ ಸುಸ್ವಾಗತಮ್ | ಸ್ವರಾಷ್ಟ್ರೀಯಾಕಾಶದೇಶೇ ಸುಪ್ರಭಾತಂ ವಿತನುತ || ಪ || ಏತ ಮಲಯಮಾರುತೋದ್ಯ ಸುಖಾಗಮನಮಿಚ್ಛತಿ | ಪ್ರತಿಪದಂ ಸ್ವದೇಶ ಏಷ ಸ್ವಮಹಿಮಾನಮಸ್ಯತಿ | ಯಜ್ಞಭೂರ್ಯಾಗಭೂಸ್ತ್ಯಾಗಭೂರ್ಭಾರತಮ್ || 1 || ನದನದೀಸಮೂಹ ಆಶು ಸ್ಫೂರ್ತಿಮಂತ್ರಮಂಚತಿ | ಜನಮನಾಂಸಿ ಭೂರಜಾಂಸಿ ಮೇಧ್ಯವಂತಿ ಪ್ರಕುರುತೇ | ಮಾತೃಭೂಃ ಪಿತೃಭೂರ್ನಾಕಭೂರ್ಭಾರತಮ್ || 2 || ಅನಾದಿಕಾಲಖಂಡತೋತ್ರ ಸಾಧುಸದ್ಭಿರಾಸಿತಮ್ | ಅಸಂಖ್ಯ ವೀರಶೂರ ಸೈನ್ಯನೇತೃಭಿರ್ವಿಜೃಂಭಿತಮ್ | ಧರ್ಮಭೂಃ ಕರ್ಮಭೂರ್ವೀರಭೂರ್ಭಾರತಮ್ || 3 || ನರೋಧಿಗಂತುಮರ್ಹತೀಹ ಮಾಧವತ್ವಮಂಜಸಾ | ಅಮರಗಾನಮನುವದಂತಿ ಕಾವ್ಯನಾಟ್ಯವಾಚಃ […]
ಮಾತು ಮಾಗಲಿ ಭಾಷೆ ಬೆಳೆಯಲಿ ಹೃದಯ ಪಕ್ವತೆ ಪಡೆಯಲಿ ಭಾರತಾಂಬೆಯ ಕೀರ್ತಿ ಬೆಳಗಲಿ ಸೂರ್ಯ ಕಿರಣದ ತೆರದಲಿ || ಪ || ಧ್ವಜವು ಹಾರಲಿ ಮೇಲಕೇರಲಿ ನಾಡಹಿರಿಮೆಯ ಸಾರಲಿ ಜನರು ಸಮರಸ ಗೀತೆ ಹಾಡಲಿ ಐಕ್ಯ ಭಾವವು ಮೂಡಲಿ || 1 || ಮಕ್ಕಳೆಲ್ಲರು ಒಂದುಗೂಡಲಿ ಭಾರತಾಂಬೆಯ ಭಜಿಸಲಿ ಪ್ರೀತಿ ಪ್ರೇಮದ ಒರತೆ ಹರಿಯಲಿ ಬಂಧು ಭಾವವ ಬೆಸೆಯಲಿ || 2 || ಧರ್ಮರಕ್ಷಣೆಯಾಗಿ ಭಾರತ ವಿಶ್ವಗುರು ತಾನಾಗಲಿ ರಾಷ್ಟ್ರಭಕ್ತಿಯ ದಿವ್ಯ ಶಕ್ತಿಯು ಜಗಕೆ ಮಾರ್ಗವ ತೋರಲಿ […]
ಕೇಶವನ ಜೀವನವು ಎಮಗೆಲ್ಲ ದೀವಿಗೆಯು ರಾಷ್ಟ್ರಕಾರ್ಯದಿ ಅವ ಮೇರು ಮಾದರಿಯು ಪರಮವೈಭವ ರಾಷ್ಟ್ರಕೇ ಗುರಿಯಿಟ್ಟನವನು ಪಥದರ್ಶಕನು ಆದ ಗುರಿಯ ಸಾಧನೆಗವನು || ಪ || ಹುರಿದು ಮುಕ್ಕುವ ಬಡತನವ ಬದಿಗೊತ್ತಿ ಯುವಕರಿಗೆ ತೋರಿದ ಗುರಿಯೆಡೆಗೆ ಕೈಯೆತ್ತಿ ಪಥಿಕ ಜೊತೆಗೊಯ್ದ ತಾನೆ ನಾವಿಕನಾಗಿ ಬೆಳಗುವ ಭಾರತದ ಸೂರ್ಯನೇ ತಾನಾಗಿ || 1 || ವ್ಯಕ್ತಿಗಳ ಪ್ರೇರಿಸಿ ತಾ ಕರೆತಂದನಂದು ರಾಷ್ಟ್ರಸೇವೆ ದೀಕ್ಷೆ ನೀಡಿದನು ನಿಂದು ವ್ಯಕ್ತಿ ವ್ಯಕ್ತಿಯು ಕೂಡೆ ರಾಷ್ಟ್ರಕಾರ್ಯವು ಎಂದು ಯೋಜಿಸಿ ನಿಲಿಸಿದನು ಸಂಘವೃಕ್ಷವ ಅಂದು || […]