ಧ್ಯೇಯ ಸಾಧಕನ ದಾರಿ

ಧ್ಯೇಯ ಸಾಧಕನ ದಾರಿ ಸರಳ ಸುಂದರ ಸರಿ ಬದುಕಿನಾ ಸಮಯವಾ ಸವೆದಿಹುದು ಇಲ್ಲಿ || ಪ || ಭಾರತದ ಹಿರಿಮೆಯ ಮರೆತಿರುವ ಸಮಾಜವ ಬಡಿದೆಬ್ಬಿಸುವಾ ಕಾರ್ಯ ಹಗಲಿರುಳು ನಡೆದಿದೆ || 1 || ಸಂಘಟನೆಯ ಮಂತ್ರದಿ ಶತಮಾನದ ಹೊಸ್ತಿಲಲಿ ದೇಶ ವ್ಯಾಪ್ತವಾಗುವ ಕಾರ್ಯ ನಡೆದಿದೆ ನಿತ್ಯ ನಿರುತದಿ || 2 || ತಾಳ್ಮೆಗೊಂದು ಮಿತಿಯಿರಲಿ ಢೋಂಗೀವಾದಿತನಕೆ ಸೆಡ್ಡು ಹೊಡೆಯುವ ದಿನಕೆ ಸಿದ್ಧವಾಗಿದೆ ಭೂಮಿಕೆ || 3 ||

Read More

ಧ್ಯೇಯ ಧರೆಗೆ ಇಳಿದಿದೆ

ಧ್ಯೇಯ ಧರೆಗೆ ಇಳಿದಿದೆ ವೀರ ತರುಣರ ಕರುಳಿಗೆ ಧ್ವಂಸ ಮಾಡಲು ಇರುಳನು ಧರೆಗೆ ಹರಡಲು ಬೆಳಕನು || ಪ || ಶಪಥವೆಂದು ಬಿಡುವೆವು ಧರೆಯ ಶಾಂತಿಗೆ ದುಡಿವೆವು ವೀರಹನುಮನೆ ಸ್ಫೂರ್ತಿಯು ಭಕ್ತಿ ತುಂಬಿದ ಧಾತ್ರಿಯು || 1 || ಧರ್ಮ ಸಾಧನೆ ಪಥವಿದು ಸತ್ಯ ವಾಕ್ಯದ ನಾಡಿದು ಜಯದ ದುಂಧುಬಿ ಮೊಳಗಿದೆ ರಾಮ ಮಂದಿರ ಕಟ್ಟಲು || 2 || ವೀರ ತರುಣರೆ ಬನ್ನಿರಿ ಧರ್ಮ ಕಾರ್ಯಕೆ ದುಡಿಯಿರಿ ವೀರ ಕಂಡ ಕನಸನು ಮಾಡ ಬನ್ನಿ ನನಸನು […]

Read More

ಯುಗ ಪರಿವರ್ತನ ಕರನೇ ಕೋ

ಯುಗ ಪರಿವರ್ತನ ಕರನೇ ಕೋ ಅಬ ಧ್ಯೇಯ ಮಾರ್ಗ ಪರ ಚಲನಾ ಹೈ ವಿಶ್ವ ಪಟಲ ಪರ ಭಾರತ ಮಾ ಕಾ ಫಿರ ಸೇ ಶೌರ್ಯ ದಿಖಾನಾ ಹೈ || ಪ || ಸಮಯ ಚಲೇಗಾ ಅಪನೆ ಢಂಗ್ ಸೇ ಅವಿಚಲ ಗತಿ ಅಪನಾನಾ ಹೈ ಗ್ರಾಮ ನಗರ ಔರ್ ಡಗರ ಡಗರ ಪರ ಭಕ್ತಿಭಾವ ಪ್ರಗಟಾನಾ ಹೈ ಹೃದಯಧರಾ ಪರ ಭಾರತ ಮಾ ಕಾ ಉಜ್ವಲ ಚಿತ್ರ ಬನಾನಾ ಹೈ || 1 || ಕುರುಕ್ಷೇತ್ರ […]

Read More

ವಾಟ ಹೀ ದುರ್ಗಮ ಕಿತೀಹೀ ಪಾವೂಲೆ ಉಚಲಿತ ಜಾ (ಮರಾಠಿ)

ವಾಟ ಹೀ ದುರ್ಗಮ ಕಿತೀಹೀ ಪಾವೂಲೆ ಉಚಲಿತ ಜಾ ಧ್ಯೇಯ ಪ್ರಾಪ್ತಿಸ್ತವ ಸ್ವಂತಃಲಾ ಆಜ ತೂ ವಿಸರೂನ ಜಾ    || ಪ || ತ್ಯಾಗ ಸಾತ್ಯಾ ಪೂರ್ವಜಾಂಚಾ ಆಡವೂನೀ ಚಾಲ ತೂ, ಭೋವತೀಚ್ಯಾ ಆಮಿಷಾಂಚಾ ಮೋಹ ಆತಾ ಸೋಡ ತೂ, ಕರ್ಮ ಪಂಥಾ ಖಂಡ ನಾಹೀ ಹೇಚ ತೂ ಚಿಂತಿತ ಜಾ     || 1 || ದುರ್ಬಲಾನಾ ಮಾನ ನಾಹೀ ಹಾ ಜಗಾಚಾ ನ್ಯಾಯ ರೇ, ತೀ ಅಹಿಂಸಾ ಕೂಚಕಾಮಿ ಶಕ್ತಿ ಜ್ಯಾಚಿ ಕ್ಷೀಣ […]

Read More

ಹಮ ಹೈ ಸಾರೇ ರಾಷ್ಟ್ರ

ಹಮ ಹೈ ಸಾರೇ ರಾಷ್ಟ್ರ ಕೇ ಪ್ಯಾರೇ ಭಾರತ ರಾಷ್ಟ್ರ ಹಮಾರಾ ಸಂಘಟನಾ ಕಾ ಧ್ಯೇಯ ಹಮಾರಾ ಅಂತಿಮ ಏಕ ಹೀ ತಾರಾ         || ಪ || ಸಬ ಮಿಲ ಆಯೇ ಖೇಲೇ ಕೂದೇ ಜೈಸೇ ಹೈ ಹಮ ಭಾಯೀ ಬಾಲಕ ಹಮ ಸಬ, ಮಾತಾ ಯಹ ಹೀ ಪ್ರಿಯತಮ ಭಾರತ ಮಾತಾ   || 1 || ಸಬ ಮಿಲ ಹಿಂದು ಬಂಧು ಆಪಸ ನಾ ಝಗಡೇಂಗೇ ಚಮಕಾಯೇಂಗೇ ಭಾರತ ಕೋ ಹಮ […]

Read More

ಧ್ಯೇಯ ಶಿಖರವೇರಲು ಕಾಯಲೇಕೆ ಸಾಧಕ

ಧ್ಯೇಯ ಶಿಖರವೇರಲು ಕಾಯಲೇಕೆ ಸಾಧಕ ಸಾಧಿಸುವುದು ನಿನ್ನ ಕಾಯಕ ಎತ್ತರ ಎತ್ತರ ಇನ್ನು ಎತ್ತರ ಕೆಚ್ಚೆದೆಯ ಸಾಧನೆಯೇ ನಿನ್ನ ಉತ್ತರ ಉತ್ತರ ಉತ್ತರ ಒಂದೇ ಉತ್ತರ || ಪ || ಕವಿದ ಕಾರ್ಮೋಡವೆಂದೂ ಉಳಿಯುವುದೇ ಅನುದಿನ ಭವದ ಆಸೆ ಆಕಾಂಕ್ಷೆ ತೊರೆದು ಬಿಡು ಈ ಕ್ಷಣ ಬಾಳ ಬವಣೆ ಕಳೆದು ಸಂಘ ಸೂತ್ರ ಹಿಡಿದು ಸೋಲಿಗೆದುರು ನಿಲ್ಲುವುದೇ ನಿನ್ನ ಉತ್ತರ || 1 || ಸುತ್ತುವರಿದ ಮೌಢ್ಯತೆಯ ಸುತ್ತ ಯುದ್ಧವಾಡುತ ಸತ್ವಭರಿತ ಕಾರ್ಯ ತತ್ವ ಎಂಬ ಅಸ್ತ್ರ […]

Read More

ಸೇವೆಯೆಂಬ ಯಜ್ಞದಲ್ಲಿ ಸಮಿಧೆಯಂತೆ

ಸೇವೆಯೆಂಬ ಯಜ್ಞದಲ್ಲಿ ಸಮಿಧೆಯಂತೆ ಉರಿಯುವಾ ಧ್ಯೇಯ ಮಹಾಜಲಧಿಯೆಡೆಗೆ ಸಲಿಲವಾಗಿ ಹರಿಯುವಾ ಲೋಕಹಿತದ ಕಾಯಕ ನಾಡಿಗಭಯದಾಯಕ ವ್ಯಕ್ತಿವ್ಯಕ್ತಿಯಾಗಲಿಂದು ನೈಜ ರಾಷ್ಟ್ರಸೇವಕ || ಪ || ಉಚ್ಚನೀಚ ಭೇದವ ಅಳಿಸಿ ದೂರಗೊಳಿಸುವಾ ರೊಚ್ಚು ರೋಷ ನೀಗುತಾ ಬಂಧು ಭಾವ ಬೆಳೆಸುವಾ ಹಚ್ಚಿ ಜ್ಞಾನದೀವಿಗೆ ಸುತ್ತ ಬೆಳಕ ಬೀರುವಾ ಕೆಚ್ಚಿನಿಂದ ಮುಂದೆ ಸಾಗಿ ಭರದಿ ಗುರಿಯ ಸೇರುವಾ || 1 || ಎಲೆಯ ಮರೆಯೊಳರಳಿ ನಗುವ ಸುಮನರಾಶಿಯಂದದಿ ಕಡಲ ಒಡಲೊಳುಕ್ಕಿ ಮೊರೆವ ಕೋಟಿ ಅಲೆಗಳಂದದಿ ವಿಮುಖರಾಗಿ ಖ್ಯಾತಿಗೆ ಪ್ರಚಾರಕೆ ಪ್ರಶಂಸೆಗೆ ಸಹಜಭಾವದಿಂದ […]

Read More

ಸಂಘಜನಕ ಕೇಶವಾ ಜನ್ಮತಳೆದು ಬಾರೋ

ಸಂಘಜನಕ ಕೇಶವಾ ಜನ್ಮತಳೆದು ಬಾರೋ ಧ್ಯೇಯಮಾರ್ಗದಲ್ಲಿ ನಮಗೆ ದಾರಿ ತೋರೋ || ಪ || ಕೆಸರ ಒಡಲಿನಿಂದ ಕಮಲ ಅರಳಿದಂತೆ ಮರಳುಗಾಡಿನಲ್ಲಿ ಹಸಿರು ಮೂಡಿದಂತೆ ನಿಶೆಯನಳಿಸಿ ಉಷೆಯು ಉದಿಸಿದಂತೆ ಸಂಘ ಜನಿಸಿತು ಬೇಗೆಯಿಂದ ಬೆಂದ ನೆಲಕೆ ಮುದದಿ ತಂಪನುಣಿಸಿತು || 1 || ನಾಡಸ್ವಾಭಿಮಾನವ ಪ್ರಶ್ನಿಸಿರಲು ದೈನ್ಯತೆ ಬಾಡಿಹೋದ ಮನಗಳ ಕಾಡುತಿರಲು ಶೂನ್ಯತೆ ಅರುಣನಂತೆ ತರುಣಜನಕೆ ತೋರಿ ಬಾಳ ಧನ್ಯತೆ ಭರತಭೂಮಿಗಭಯವಿತ್ತೆ ಸಾರಿ ಶೌರ್ಯ ಸಂಹಿತೆ || 2 || ವಿಸ್ಮೃತಿಯ ವಿಷವನು ಸ್ವಾರ್ಥದಾಮಿಷವನು ಭ್ರಷ್ಟತೆಯ ಕಸವನು […]

Read More

ಜ್ಞಾನದಾತನೆ ಚಿರಪುನೀತನೆ

ಜ್ಞಾನದಾತನೆ ಚಿರಪುನೀತನೆ ಧ್ಯೇಯ ದೇವನೆ ವಂದನೆ ಜೀವನಕೆ ಸಾರ್ಥಕತೆ ಕರುಣಿಸು ಗುರಿಯ ಸೇರಲಿ ಸಾಧನೆ || ಪ || ಕಾಯದಾ ಗುಡಿಯಲ್ಲಿ ನಿನ್ನಯ ದಿವ್ಯಮೂರ್ತಿಯನಿರಿಸಿದೆ ತಾಯಿ ಭೂಮಿಯ ಸೇವೆಗೈಯುವ ಶಪಥವನು ಸ್ವೀಕರಿಸಿದೆ ಮಾಯಗೊಳಿಸಿದೆ ಮನದ ಭ್ರಾಂತಿಯ ಭ್ರಮೆಯ ಕಂಗಳ ತೆರೆಸಿದೆ || 1 || ಕದನಕಂಜದ ದಮನಕಳುಕದ ಭರತಭೂಮಿಯ ಪೌರುಷ ಹೃದಯಸದನದಿ ತುಂಬಿ ಬೆಳೆಸಿದೆ ಶೌರ್ಯಛಲಬಲ ಸಾಹಸ ಉದಯಭಾಸ್ಕರನಂತೆ ಬೆಳಗಿದೆ ತಿಮಿರಮಯ ಮನದಾಗಸ || 2 || ಕೀರ್ತಿಪಥದಲಿ ಮುಂದೆ ನಡೆಯುವ ಸ್ಫೂರ್ತಿಯನು ನೀ ನೀಡಿದೆ ಧೂರ್ತ […]

Read More

ನಮ್ಮದೆಲ್ಲರ ಬಾಳಿದಾಗಲಿ ನಿನ್ನದೇ

ನಮ್ಮದೆಲ್ಲರ ಬಾಳಿದಾಗಲಿ ನಿನ್ನದೇ ಪ್ರತಿಬಿಂಬದಂತೆ ಪೂರ್ಣವಾಗಲಿ ಧ್ಯೇಯ ಸಾಧನೆ ಹಿರಿಮೆಗೇರಲಿ ಭರತಮಾತೆ || ಪ || ಬಾಳನುರಿಸಿದೆ ಬಾಲ್ಯಜೀವನದಿಂದಲಂತಿಮ ಕ್ಷಣದ ವರೆಗು ಬದುಕಿನುದ್ದಕು ಬಿಡದೆ ನಡೆದಾ ಮೂಕ ತಪವನು ಮರೆವುದೆಂತು ? ಅಳೆಯಲಸದಳ ವಿಧಿಗು ನಿನ್ನಯ ಕ್ಷೀರಸಾಗದಂಥ ಬದುಕು ಬಿಂದುವಿನ ತೆರದಿಂದಲೆಮಗಾ ಸಿಂಧುವಿನ ಸವಿಮಿಲನ ಸಾಕು || 1 || ಶ್ರಮವ ಸಹಿಸಿದೆ ವಿಶ್ರಮಿಸದೇ ಜನ್ಮದೊಳು ನೀನೊಂದು ಕ್ಷಣವು ರಾಷ್ಟ್ರಯಜ್ಞಕೆ ಆಜ್ಯವಾಯಿತು ನೆತ್ತರಿನ ಪ್ರತ್ಯೇಕ ಕಣವು ಆತ್ಮದಾಹುತಿಯಿತ್ತು ಸಾರಿದೆ ದೇಶಮುಕ್ತಿಯ ಮಂತ್ರವೆಮಗೆ ತಾಗಲೆಮ್ಮಯ ಹೃದಯಪ್ರಣತಿಯ ಯಜ್ಞ ಜ್ವಾಲೆಯದೊಂದೆ […]

Read More