ಜ್ಞಾನದಾತನೆ ಚಿರಪುನೀತನೆ

ಜ್ಞಾನದಾತನೆ ಚಿರಪುನೀತನೆ ಧ್ಯೇಯ ದೇವನೆ ವಂದನೆ
ಜೀವನಕೆ ಸಾರ್ಥಕತೆ ಕರುಣಿಸು ಗುರಿಯ ಸೇರಲಿ ಸಾಧನೆ || ಪ ||

ಕಾಯದಾ ಗುಡಿಯಲ್ಲಿ ನಿನ್ನಯ ದಿವ್ಯಮೂರ್ತಿಯನಿರಿಸಿದೆ
ತಾಯಿ ಭೂಮಿಯ ಸೇವೆಗೈಯುವ ಶಪಥವನು ಸ್ವೀಕರಿಸಿದೆ
ಮಾಯಗೊಳಿಸಿದೆ ಮನದ ಭ್ರಾಂತಿಯ ಭ್ರಮೆಯ ಕಂಗಳ ತೆರೆಸಿದೆ || 1 ||

ಕದನಕಂಜದ ದಮನಕಳುಕದ ಭರತಭೂಮಿಯ ಪೌರುಷ
ಹೃದಯಸದನದಿ ತುಂಬಿ ಬೆಳೆಸಿದೆ ಶೌರ್ಯಛಲಬಲ ಸಾಹಸ
ಉದಯಭಾಸ್ಕರನಂತೆ ಬೆಳಗಿದೆ ತಿಮಿರಮಯ ಮನದಾಗಸ || 2 ||

ಕೀರ್ತಿಪಥದಲಿ ಮುಂದೆ ನಡೆಯುವ ಸ್ಫೂರ್ತಿಯನು ನೀ ನೀಡಿದೆ
ಧೂರ್ತ ಜನತೆಯ ದುಷ್ಟತಂತ್ರದ ಸಂಚಿನಿಂ ಕಾಪಾಡಿದೆ
ಪಾರ್ಥಸಾರಥಿಯಂತೆ ನಾಡಿಗೆ ಕರ್ಮಪಥವನು ತೋರಿದೆ || 3 ||

ನಿನ್ನ ಆರಾಧನೆಯ ಗೈದ ಅಸಂಖ್ಯ ಸಂತ ಮಹಂತರು
ಹೊನ್ನ ಭೂಮಿಯಿದನ್ನು ಕಟ್ಟಿದ ಸಾಹಸಿಗ ರಣಧೀರರು
ಚೆನ್ನ ಭಾರತದಲ್ಲಿ ಜನಿಸಿದ ಜನರು ಧನ್ಯರು ಧನ್ಯರು || 4 ||

2 thoughts on “ಜ್ಞಾನದಾತನೆ ಚಿರಪುನೀತನೆ

 1. Very nice patriotic song. I wanted have all collection of these type songs, where can I get?

  • Phone No: +919844009320
  1. ganamala app will be available in play store soon… there u can get… till now u can visit ganamala.com..thank u

  Leave a Reply

  Your email address will not be published. Required fields are marked *

  *

  code