ಇದು ಮಂಗಲೋಡ್ಡಯನ

ಇದು ಮಂಗಲೋಡ್ಡಯನ, ಗುರಿ ಸೇರುತಿದೆ ಪಯಣ ಹಿಂದುತ್ವ ಸಂಕ್ರಮಣ ವಿಶ್ವರಕ್ಷಾಭರಣ || ಪ || ವ್ಯಾಸ ವಾಲ್ಮೀಕಿಯರ ವೇದ ಸಂದೇಶಗಳ ಆಶಯದ ಜಗದಗಲ ಸಾರಿ ನಡೆ ತೋರಿ ಸೂಸುತಿದೆ ನರುಗಂಪ ವಿಜಯಸುಮ ತಾನರಳಿ ಬೀಸುತಿದೆ ಭರವಸೆಯ ಗಾಳಿ || 1 || ಶಠ ವಾದಗಳ ತೊರೆದು ಶಠಕೆ ಶಾಠ್ಯವ ನುಡಿದು ದಿಟವೊಂದ ಸಾಧಿಸುವ ಧ್ಯೇಯ ಪಥದಿ ಉದಿಸುತಿದೆ ಹಿಂದುತ್ವ ನೇಸರದ ಹೊಂಗಿರಣ ಒದಗುತಿದೆ ಜಗದ ಜಾಗರಣ || 2 || ಮಾನವ್ಯದತ್ತರದ ಅಮೃತ ಮಂತ್ರವನೆರೆಯೆ ಬಾಂಧವ್ಯ ಬಾಹುಗಳ […]

Read More

ಆಹಾ ಎಂಥ ಪುಣ್ಯ ಈ ಜನುಮ

ಆಹಾ ಎಂಥ ಪುಣ್ಯ ಈ ಜನುಮ ಓಹೋ ದಿವ್ಯಧಾರಿಣಿಯ ಮಹಿಮ ಇಲ್ಲಿ ವೈಭೋಗ ವೈಭವ ನರ್ತನ ಎನ್ನ ತಾಯಿ ಭಾರತಿಗೆ ನಮನ || ಪ || ನಿನ್ನ ಒಡಲಿನಲಿ ಮಮತೆ ಮಡಿಲಿನಲಿ ಕಡಲ ಬಿತ್ತರದ ಹಿರಿಮೆಗಳು ಭವ್ಯ ಮನಸುಗಳ ರಮ್ಯ ದಿನಿಸುಗಳ ಉನ್ನತ ಸಾಧನೆ ಗರಿಮೆಗಳು || 1 || ಸಮರ ರಂಗದಲಿ ನೇಣುಗಂಬದಲಿ ನೆತ್ತರಿತ್ತ ಬಲಿ ನೆನಪುಗಳು ಯೋಗ ತ್ಯಾಗಗಳ ಕರ್ಮಕಮ್ಮಟದಿ ನುಗ್ಗಿ ಮುಗುಳ್ನಗುವ ಹೊಳಪುಗಳು || 2 || ತತ್ವ ದರ್ಶನದ ಅನುಭವ ಅನುಭಾವ […]

Read More

ಆರದಿಹ ಆದರ್ಶ ಜ್ವಾಲೆಯ

ಆರದಿಹ ಆದರ್ಶ ಜ್ವಾಲೆಯ ಅರ್ಚಿಸುವೆ ನಾ ದಿನ ದಿನ ಗೊಳಿಸೆ ಸಾರ್ಥಕ ಶ್ರೇಷ್ಠ ಜೀವನ ಅರ್ಪಿಸುವೆ ತನುಮನಧನ     || ಪ || ಜ್ಞಾನ ತಪಸಿನ ಪ್ರಭೆಯ ಬೀರುತ ಸಂಜೆ ಮುಂಜಾನೆಗಳಲಿ ನೆಲೆ ಪ್ರಶಾಂತಿಯ ಪರ್ಣಶಾಲೆಯ ಹೋಮ ಧೂಮದ ಮಡಿಲಲಿ ಬೆಳಗಿದಗ್ನಿಯ ನೃತ್ಯ ಜ್ಯೋತಿಯ ಪ್ರತಿನಿಧಿಯೆ ಶಿರವಂದನಾ     || 1 || ರಣ ರಣಾಂಗಣದಲ್ಲಿ ಶೌರ್ಯದ ಸ್ಪೂರ್ತಿ ತೆರೆ ತೆರೆಯುಕ್ಕಿಸಿ ದೇಶ ಧರ್ಮದ ಘನತೆ ಗೌರವ ಕೀರ್ತಿ ಕಳಶವ ರಕ್ಷಿಸಿ ಮೆರೆದ ವೀರರ ಹೃದಯ ಪ್ರೇರಣೆ […]

Read More

ಆ ಸ್ವತಂತ್ರ ಸ್ವರ್ಗಕೆ

ಆ ಸ್ವತಂತ್ರ ಸ್ವರ್ಗಕೆ ನಮ್ಮ ನಾಡು ಏಳಲೇಳಲೇಳಲೇಳಲಿ || ಪ || ಎಲ್ಲಿ ಮನವು ನಿರ್ಭಯದಿ ತಲೆಯನೆತ್ತಿ ನಿಲುವುದೋ ಎಲ್ಲಿ ಜ್ಞಾನ ಸುಧಾಪಾನ ಎಲ್ಲರಿಗೂ ಸಿಗುವುದೋ || 1 || ಎಲ್ಲಿ ಮನೆಯ ಅಡ್ಡಗೋಡೆ ಇಲ್ಲದೆಯೆ ವಿಶಾಲವೋ ಎಲ್ಲಿ ಮಾತು ಸತ್ಯದಾಳದಿಂದ ಹೊಮ್ಮಿ ಬರುವುದೋ || 2 || ಎಲ್ಲಿ ಸತತ ಕರ್ಮ ಪೂರ್ಣಸಿದ್ಧಿ ಪಡೆದು ಮೆರೆವುದೋ ಎಲ್ಲಿ ತಿಳಿವು ಕಟ್ಟಳೆಯ ಮಳಲ ತೊರೆದು ಹರಿವುದೋ || 3 || ಎಲ್ಲಿ ನೀನು ನಮಗೆ ಧೈರ್ಯ ಎಲ್ಲಿ […]

Read More

ಅರುಣ ಧ್ವಜವು ಕರೆಯುತಿಹುದು

ಅರುಣ ಧ್ವಜವು ಕರೆಯುತಿಹುದು ಬಾ ಹಿಂದು ಬಾ || ಪ || ಮನವ ತೆರೆದು ಶಿರವ ಮಣಿದು ಓ ಎಂದು ಬಾ ಬಂಧು ನಾವು ಎಂದು ಬಾ ಎಂದೆಂದಿಗೂ ಒಂದೆ ಬಾ || 1 || ಹಳೆಯ ಕಹಿಯ ಮರೆತುಬಿಡು ದ್ವೇಷ ರೋಷ ದೂರ ಸುಡು ಎಲ್ಲ ಹಗೆ ಎಲ್ಲ ಧಗೆ ಮೀರಿಬರಲಿ ಸ್ನೇಹ ನಗೆ || 2 || ಸತ್ಯ ನ್ಯಾಯ ನೀತಿ ನಡೆ ದಿಟ್ಟ ನಿಲುವು ಬರದು ತಡೆ ದರ್ಪ ದಮನಕಿರದು ಬೆಲೆ ಹರಿಯೆ […]

Read More

ಅರಳಿಹುದೋ ಕೆರಳಿಹುದೋ

ಅರಳಿಹುದೋ ಕೆರಳಿಹುದೋ ಹಿಂದೂ ಜಾಗೃತಿ ಮರಳಿಹುದೋ || ಪ || ಶತ್ರು ಸಮುದ್ರವ ಕಡಿದು ಮಿತ್ರ ವರ್ಗಗಳು ಬೆಳೆದು ಶತಮಾನದ ಶೃಂಖಲೆಗಳ ಕಳೆದ ಹೊಸಮಾನದ ಹಿಂದೂ ಅಲೆ ಭುಗಿಲೋ || 1 || ಶಾಂತಿ ಸಮನ್ವಯ ಮಂತ್ರವ ಪಠಿಸಿದ ಸಂತರ ಪಾದಕೆ ಮಣಿದು ವಿಶ್ರಾಂತಿ ಮೈಮನಸಿಗೆ ವಿಕೃತಿಗೆ ಅಂತಿಮ ಕ್ರಿಯೆಗಳು ನಡೆದು ಮನುಕೋಟಿಗೆ ಸಂಕ್ರಾಂತಿಯ ಬಯಸಿದ ಹೂಂಕೃತಿಯೋ ಝೇಂಕೃತಿಯೋ ಹಿಂದೂ ಹೃದಯಗಳ ಸಂಸ್ಕೃತಿಯೋ || 2 || ವಾನರಸೇನೆಯ ಸಂಘಟಿಸಿದ ಶ್ರೀರಾಮನು ತ್ರೇತಾ ಯುಗದಿ ಗೋಪಾಲಕರನು ತಾ […]

Read More

ಅಮೂರ್ತ ಮೂರ್ತ ಮೂರ್ತಿಮಂತ

ಅಮೂರ್ತ ಮೂರ್ತ ಮೂರ್ತಿಮಂತ ನಿನ್ನೊಲು ನಾವಾಗಲಿ ನಿನ್ನ ನಡೆಯ ನೆಲೆಯನಾಂತು ದೇಶಕಾರ್ಯ ತೊಡಗಲಿ || ಪ || ಮೊಗ್ಗು ಮೊಗವು ಬಿರಿಬಿರಿಯೆ ಹಿಡಿಹೂಗಳು ತಾವರಳಲಿ ದಿವ್ಯಗಂಧವೆಲ್ಲ ಹರಡಿ ಅವನಿಯು ಪರಿಮಳಿಸಲಿ || 1 || ಪುಷ್ಪಫಲದ ವಾಂಛೆಯಳಿದು ಸಮರ್ಪಣೆಯ ಭಾವ ತಳೆದು ಧ್ಯೇಯದೇವನೆದುರಿನಲ್ಲಿ ಸ್ವಾರ್ಥ ಹೋಮವಾಗಲಿ || 2 || ಲೋಕಸೇವಾ ಭಕ್ತಿ ಭಾವ ಎಂಬುದೊಂದೇ ಧ್ಯೇಯ ದೇವ ನಿರತ ಪೂಜೆಯಿಂದ ದೇವ ನಿನ್ನ ರೂಪ ದೊರೆಯಲಿ || 3 || ದಿವ್ಯ ಭವ್ಯ ರಾಷ್ಟ್ರಜ್ಯೋತಿ ನಿನ್ನ […]

Read More

ಅಭಿನವ ಭಾರತದ ನಿರ್ಮಾಣಕೆ

ಅಭಿನವ ಭಾರತದ ನಿರ್ಮಾಣಕೆ ಯುವಜನ ಶಕ್ತಿಯೆ ಆಧಾರ ಯುಗಗಳ ಕನಸಿಗೆ ಆಕಾರ… ನೀಡುವುದೆಮ್ಮಯ ನಿರ್ಧಾರ || ಪ || ಆಸೇತು ಹಿಮಾಚಲ ವಿಸ್ತಾರದ ತಾಯ್ನೆಲ ದೇವರ ವರದಾನ ಭಾರತ ಮಾತೆಯ ವೀರ ಸುಪುತ್ರರು ಎಂಬುವುದೆಮಗೆ ಅಭಿಮಾನ || 1 || ಋಷಿಮುನಿ ಸಂತರ ಕರ್ಮಭೂಮಿಯಿದು ಚತುರ್ವೇದಗಳ ತವರೂರು ಖಡ್ಗವ ಪಿಡಿದು ನಾಡಿನ ರಕ್ಷಣೆ ಗೈದಿಹ ಶೂರರ ನೆಲೆವೀಡು || 2 || ಆಧುನಿಕತೆಯ ವ್ಯಾಮೋಹದಲಿ ನಮ್ಮತನವನು ತೊರೆಯದಿರಿ ವಿಶ್ವಕೆ ದಾರಿಯ ತೋರಿದ ಭಾರತ ಎಂಬುದನೆಂದೂ ಮರೆಯದಿರಿ || […]

Read More

ಅಡಿಯಿಡು ಮುಂದೆ ಗುರಿಯೆಡೆಗಿಂದೇ

ಅಡಿಯಿಡು ಮುಂದೆ ಗುರಿಯೆಡೆಗಿಂದೇ ನಿರ್ಧಾರದ ಕಾಲ ಬಂದಿದೆ ಹಿಂದುರಾಷ್ಟ್ರದುತ್ಥಾನದ ಕಾಲ ಬಂದಿದೆ || ಪ || ಸಂಕಲ್ಪದ ಸಂತೋಷದಿ ತನುಮನ ಪುಳಕ ಸಂಕ್ರಾಂತಿಯ ಸಂಧಾನವು ತರಲಿದೆ ಬೆಳಕ ಧ್ಯೇಯದೃಷ್ಟಿಗೋಚರ, ಜಾರದಿರು ಇದೆಚ್ಚರ ನಿರ್ಧಾರದ ಕಾಲ ಬಂದಿದೆ || 1 || ಕಜ್ಜಕಾಗಿ ಉಜ್ಜಗಿಸಲಿ ವಜ್ರಶರೀರ ದುರ್ದೆಸೆಯನು ದೂರಗೊಳಿಸು ಉದ್ಯಮವೀರ ಆಲಸ್ಯವನೋಡಿಸು, ಆದರ್ಶವ ಪಾಲಿಸು ನಿರ್ಧಾರದ ಕಾಲ ಬಂದಿದೆ || 2 || ಜನರೆದೆಯಲಿ ಅನುರಣಿಸಿದೆ ಹಿಂದು ಸುಸ್ವರ ತಮಹರಿಯಿತು ಜಗವರಿಯಿತು ಬಂದ ಭಾಸ್ಕರ ತೊಲಗಲಿನ್ನು ವ್ಯಾಕುಲ, ಬೆಳಗು […]

Read More

ಅನುಪಮ ಆದರ್ಶದ ನುಡಿಯೊಂದಕೆ

ಅನುಪಮ ಆದರ್ಶದ ನುಡಿಯೊಂದಕೆ ದೊರೆತಿದೆ ಇಲ್ಲಿ ಉದಾಹರಣೆ ಕ್ರಿಯಾಸಿದ್ಧಿಃ ಸತ್ತ್ವೇ ಭವತಿ ಮಹತಾಂ ನೋಪಕರಣೇ || ಪ || ಹಣವಿಲ್ಲ, ಹಣ ಬೆಂಬಲವಿಲ್ಲ ಅಧಿಕಾರದ ಅಂದಣವಿಲ್ಲ ಬಣವಿಲ್ಲ ಜನ ಬೆಂಬಲವಿಲ್ಲ ಅನುಕೂಲತೆಗಳ ಸುಳಿವಿಲ್ಲ ಕ್ಷಣವಾದರೂ ಬಿಡುವಿಲ್ಲದೆ ಕೇಶವ ಕಟ್ಟಿದ ಹಿಂದೂ ಸಂಘಟನೆ || 1 || ರಾಷ್ಟ್ರಭಕ್ತಿ ಸದ್ಗುಣಗಳನುಳಿಸದರೆ ಬಡತನವೇ ಮೈ ಮನೆಯೆಲ್ಲಾ ಪದವಿ ಬೇರೆ ಪ್ರವೃತ್ತಿ ಬೇರೆ ಇದು ಪರಿಹಾಸ್ಯದ ನುಡಿ ಜನಕೆಲ್ಲಾ ವ್ಯಂಗ್ಯ ವಿರೋಧವನೆದುರಿಸಿ ಕೇಶವ ಕಟ್ಟಿದ ಹಿಂದೂ ಸಂಘಟನೆ || 2 || […]

Read More