ಇದು ಮಂಗಲೋಡ್ಡಯನ

ಇದು ಮಂಗಲೋಡ್ಡಯನ, ಗುರಿ ಸೇರುತಿದೆ ಪಯಣ
ಹಿಂದುತ್ವ ಸಂಕ್ರಮಣ ವಿಶ್ವರಕ್ಷಾಭರಣ || ಪ ||

ವ್ಯಾಸ ವಾಲ್ಮೀಕಿಯರ ವೇದ ಸಂದೇಶಗಳ
ಆಶಯದ ಜಗದಗಲ ಸಾರಿ ನಡೆ ತೋರಿ
ಸೂಸುತಿದೆ ನರುಗಂಪ ವಿಜಯಸುಮ ತಾನರಳಿ
ಬೀಸುತಿದೆ ಭರವಸೆಯ ಗಾಳಿ || 1 ||

ಶಠ ವಾದಗಳ ತೊರೆದು ಶಠಕೆ ಶಾಠ್ಯವ ನುಡಿದು
ದಿಟವೊಂದ ಸಾಧಿಸುವ ಧ್ಯೇಯ ಪಥದಿ
ಉದಿಸುತಿದೆ ಹಿಂದುತ್ವ ನೇಸರದ ಹೊಂಗಿರಣ
ಒದಗುತಿದೆ ಜಗದ ಜಾಗರಣ || 2 ||

ಮಾನವ್ಯದತ್ತರದ ಅಮೃತ ಮಂತ್ರವನೆರೆಯೆ
ಬಾಂಧವ್ಯ ಬಾಹುಗಳ ಭುವಿಯಗಲ ಬೆಸೆಯೆ
ಸೂರೆಗೊಳಲಿದೆ ಸಕಲ ಲೋಕಗಳ ಜನಮನವು
ಮರಳಲಿದೆ ಪರಮ ವೈಭವವು || 3 ||

Leave a Reply

Your email address will not be published. Required fields are marked *

*

code