ಆರದಿಹ ಆದರ್ಶ ಜ್ವಾಲೆಯ

ಆರದಿಹ ಆದರ್ಶ ಜ್ವಾಲೆಯ ಅರ್ಚಿಸುವೆ ನಾ ದಿನ ದಿನ
ಗೊಳಿಸೆ ಸಾರ್ಥಕ ಶ್ರೇಷ್ಠ ಜೀವನ ಅರ್ಪಿಸುವೆ ತನುಮನಧನ     || ಪ ||

ಜ್ಞಾನ ತಪಸಿನ ಪ್ರಭೆಯ ಬೀರುತ ಸಂಜೆ ಮುಂಜಾನೆಗಳಲಿ
ನೆಲೆ ಪ್ರಶಾಂತಿಯ ಪರ್ಣಶಾಲೆಯ ಹೋಮ ಧೂಮದ ಮಡಿಲಲಿ
ಬೆಳಗಿದಗ್ನಿಯ ನೃತ್ಯ ಜ್ಯೋತಿಯ ಪ್ರತಿನಿಧಿಯೆ ಶಿರವಂದನಾ     || 1 ||

ರಣ ರಣಾಂಗಣದಲ್ಲಿ ಶೌರ್ಯದ ಸ್ಪೂರ್ತಿ ತೆರೆ ತೆರೆಯುಕ್ಕಿಸಿ
ದೇಶ ಧರ್ಮದ ಘನತೆ ಗೌರವ ಕೀರ್ತಿ ಕಳಶವ ರಕ್ಷಿಸಿ
ಮೆರೆದ ವೀರರ ಹೃದಯ ಪ್ರೇರಣೆ ನಮನ ಭಗವಾ ಕೇತನ       || 2 ||

ರವಿ ರಥಾಗ್ರದಿ ನಿತ್ಯ ಅರಳುವ ಅರುಣವರ್ಣದ ತೋರಣ
ತತ್ವ ಘನಿಸಿದ ಸತ್ವ ಸಂಪದ ಇದಮರತ್ವಕ್ಕೆ ಕಾರಣ
ರಾಷ್ಟ್ರಸೇವೆಗೆ ತ್ಯಾಗ ಕಲಿಸುವ ಧ್ಯೇಯ ಧ್ವಜದಾರಾಧನಾ        || 3 ||

Leave a Reply

Your email address will not be published. Required fields are marked *

*

code