ಅರುಣ ಧ್ವಜವು ಕರೆಯುತಿಹುದು

ಅರುಣ ಧ್ವಜವು ಕರೆಯುತಿಹುದು ಬಾ ಹಿಂದು ಬಾ || ಪ ||

ಮನವ ತೆರೆದು ಶಿರವ ಮಣಿದು ಓ ಎಂದು ಬಾ
ಬಂಧು ನಾವು ಎಂದು ಬಾ ಎಂದೆಂದಿಗೂ ಒಂದೆ ಬಾ || 1 ||

ಹಳೆಯ ಕಹಿಯ ಮರೆತುಬಿಡು ದ್ವೇಷ ರೋಷ ದೂರ ಸುಡು
ಎಲ್ಲ ಹಗೆ ಎಲ್ಲ ಧಗೆ ಮೀರಿಬರಲಿ ಸ್ನೇಹ ನಗೆ || 2 ||

ಸತ್ಯ ನ್ಯಾಯ ನೀತಿ ನಡೆ ದಿಟ್ಟ ನಿಲುವು ಬರದು ತಡೆ
ದರ್ಪ ದಮನಕಿರದು ಬೆಲೆ ಹರಿಯೆ ಪ್ರೀತಿ ಶಾಂತಿ ಸೆಲೆ || 3 ||

ಸಂತವಾಣಿ ದಿನವು ನೆನೆ ಬಿತ್ತು ಮನದಿ ಬರಲಿ ತೆನೆ
ವೀರಗಾಥೆ ಕೇಳಿ ತನು ರೋಮಾಂಚಿತವಾಗದೇನು? || 4 ||

ಧರ್ಮದರಿವು ಮೂಡಲಿ ಜನ ಜಾಗೃತಿಯಾಗಲಿ
ಓಂಕಾರದ ನಾದದಿ ವಿಜಯ ಭೇರಿ ಮೊಳಗಲಿ || 5 ||

Leave a Reply

Your email address will not be published. Required fields are marked *

*

code