ಅರಳಿಹುದೋ ಕೆರಳಿಹುದೋ

ಅರಳಿಹುದೋ ಕೆರಳಿಹುದೋ
ಹಿಂದೂ ಜಾಗೃತಿ ಮರಳಿಹುದೋ || ಪ ||

ಶತ್ರು ಸಮುದ್ರವ ಕಡಿದು ಮಿತ್ರ ವರ್ಗಗಳು ಬೆಳೆದು
ಶತಮಾನದ ಶೃಂಖಲೆಗಳ ಕಳೆದ
ಹೊಸಮಾನದ ಹಿಂದೂ ಅಲೆ ಭುಗಿಲೋ || 1 ||

ಶಾಂತಿ ಸಮನ್ವಯ ಮಂತ್ರವ ಪಠಿಸಿದ ಸಂತರ ಪಾದಕೆ ಮಣಿದು
ವಿಶ್ರಾಂತಿ ಮೈಮನಸಿಗೆ ವಿಕೃತಿಗೆ ಅಂತಿಮ ಕ್ರಿಯೆಗಳು ನಡೆದು
ಮನುಕೋಟಿಗೆ ಸಂಕ್ರಾಂತಿಯ ಬಯಸಿದ ಹೂಂಕೃತಿಯೋ ಝೇಂಕೃತಿಯೋ
ಹಿಂದೂ ಹೃದಯಗಳ ಸಂಸ್ಕೃತಿಯೋ || 2 ||

ವಾನರಸೇನೆಯ ಸಂಘಟಿಸಿದ ಶ್ರೀರಾಮನು ತ್ರೇತಾ ಯುಗದಿ
ಗೋಪಾಲಕರನು ತಾ ಪಾಲಿಸಿದನು ಶ್ರೀ ಕೃಷ್ಣನು ದ್ವಾಪರದಿ
ಸಂಘಟನೆಯ ಹರಿಕಾರರ ವಂಶದ ಬಿಂದುಗಳೋ ಬಂಧುಗಳೋ
ಸಂಹತ ಸೋದರ ಹಿಂದುಗಳೋ || 3 ||

ಒಳ ಕೀಳರಿಮೆಯ ದಳ್ಳುರಿ ವಿಷವನು ನುಂಗುವ ನಂಜುಂಡನ ಬಲವೋ
ಹೊರದೇಶಿಗರಾಕ್ರಮಣವ ತಡೆಯಲು ಕೈಗೊಂಡಿಹ ಕ್ಷಾತ್ರಿಯ ಛಲವೋ
ಅಂತಃಛಿದ್ರವ ಅಂತ್ಯವಗೊಳಿಸುವ ಸಾಧನೆಯೋ ಶೋಧನೆಯೋ
ಶಕ್ತಿಯ ಸೆಲೆ ಆರಾಧನೆಯೋ || 4 ||

Leave a Reply

Your email address will not be published. Required fields are marked *

*

code