ಉಜ್ವಲ ಇತಿಹಾಸ ಎಮ್ಮದು

ಉಜ್ವಲ ಇತಿಹಾಸ ಎಮ್ಮದು ಭಾರತ ನಾಡಿನ ಸ್ಫೂರ್ತಿಯದು        || ಪ ||

ಪವಿತ್ರ ಧರ್ಮದ ಗೌರವಕಾಗಿ ಮೃತ್ಯುವನಪ್ಪಿದ ಹಕಿಕತನೂ
ಗುರುಗೋವಿಂದನ ವೀರ ಸುಪುತ್ರರು ತೆತ್ತರು ಅಸುವನು ಹರುಷದಲಿ
ಧೈರ್ಯದಿ ಗೋಡೆಯ ಮಧ್ಯದಲಿ                             || 1 ||

ನಾಡಿನ ಗೌರವರಕ್ಷಣೆಗಾಗಿ ಸಹಿಸಿದ ರಾಣನು ಕಷ್ಟವನು
ರಜಪೂತರ ನಿಜ ತೇಜವ ತೋರುತ ದೇಶದೊಳಲೆದನು ಕಂಗೆಟ್ಟು
ಮಾಡಿದ ಜನತೆಯ ಒಗ್ಗಟ್ಟು                                 || 2 ||

ವೀರ ಶಿವಾಜಿಯು ಕಟ್ಟಿದ ಸೇನೆಯು ಎದುರಿಸೆ ಮೊಗಲರ ಕಿರುಕುಳವ
ವೀರ ಶಿರೋಮಣಿ ಝಾನ್ಸಿರಾಣಿಯು ನಿಂತಳು ಬ್ರಿಟಿಷರ ಎದುರಾಗಿ
ಮಾತೆಯ ಮುಕ್ತಿಯ ಕರೆಗಾಗಿ                                || 3 ||

ರಕ್ತದಿ ಬರೆದಿಹ ವೀರ ಚರಿತ್ರೆಯ ಪಠಿಸುವ ಪ್ರತಿದಿನ ಹೆಮ್ಮೆಯಲಿ
ಸಾಹಸ ಕಾರ್ಯವಗೈದಿಹ ವೀರರ ಸ್ಮರಿಸುತ ಸಾಗುವ ಪಥದಲ್ಲಿ
ನಮಿಸುವ ಅವರನು ಮನದಲ್ಲಿ                              || 4 ||

Leave a Reply

Your email address will not be published. Required fields are marked *